ಕರ್ನಾಟಕ

karnataka

ETV Bharat / bharat

ಮತ್ತೆ ಸೆಮಿಸ್ಟರ್ ನೋಂದಣಿ ದಿನಾಂಕ ವಿಸ್ತರಿಸಿದ ಜೆಎನ್‌ಯು! - ನೋಂದಣಿ ಪ್ರಕ್ರಿಯೆ ನಡೆಯುತ್ತಿರುವಾಗಲೇ ವಿದ್ಯಾರ್ಥಿಗಳ ಬಹಿಷ್ಕಾರ

ನೋಂದಣಿ ಪ್ರಕ್ರಿಯೆ ನಡೆಯುತ್ತಿರುವಾಗಲೇ ವಿದ್ಯಾರ್ಥಿಗಳ ಬಹಿಷ್ಕಾರದ ಮಧ್ಯೆಯೂ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯ (ಜೆಎನ್‌ಯು) ಮುಂದಿನ ಸೆಮಿಸ್ಟರ್‌ಗೆ ನೋಂದಾಯಿಸಲು ಕೊನೆಯ ದಿನಾಂಕವನ್ನು ಜನವರಿ 17 ರವರೆಗೆ ವಿಸ್ತರಿಸಿದೆ.

jnu-extends-semester-registration-date-again
ಮತ್ತೆ ಸೆಮಿಸ್ಟರ್ ನೋಂದಣಿ ದಿನಾಂಕ ವಿಸ್ತರಿಸಿದ ಜೆಎನ್‌ಯು ....

By

Published : Jan 16, 2020, 1:20 PM IST

ನವದೆಹಲಿ: ನೋಂದಣಿ ಪ್ರಕ್ರಿಯೆ ನಡೆಯುತ್ತಿರುವಾಗಲೇ ವಿದ್ಯಾರ್ಥಿಗಳ ಬಹಿಷ್ಕಾರ ಕೈಗೊಂಡಿದ್ದವು. ಈ ಗೊಂದಲದ ನಡುವೆಯೇ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ (ಜೆಎನ್‌ಯು) ಮುಂದಿನ ಸೆಮಿಸ್ಟರ್‌ಗೆ ನೋಂದಾಯಿಸಲು ಕೊನೆಯ ದಿನಾಂಕವನ್ನು ಜನವರಿ 17 ರವರೆಗೆ ವಿಸ್ತರಿಸಿದೆ.

ಆದಾಗ್ಯೂ, 500 ರೂ.ವರೆಗೆ ತಡವಾಗಿ ಶುಲ್ಕವನ್ನು ಪಾವತಿಸುವ ಮೂಲಕ ಫೆಬ್ರವರಿ 9 ರವರೆಗೆ ನೋಂದಣಿ ಮುಂದುವರಿಯುತ್ತದೆ" ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆ ಗಡುವಿನ ನಂತರ, ವಿವಿಯ ಕುಲಪತಿಗಳು ನೋಂದಣಿಗೆ ಲಿಖಿತ ವಿನಂತಿಗಳನ್ನು ಪರಿಗಣಿಸಬಹುದು ಮತ್ತು ತಡವಾಗಿ ನೋಂದಣಿಗೆ ಅನುಮತಿ ನೀಡಬಹುದು, ಸೂಕ್ತವೆಂದು ಪರಿಗಣಿಸಿದರೆ, ಅವರ ವಿವೇಚನೆಗೆ ತಕ್ಕಂತೆ ದಂಡವನ್ನು ವಿಧಿಸಬಹುದು ಎಂದು ಅಧಿಕಾರಿ ಹೇಳಿದ್ದಾರೆ.

ABOUT THE AUTHOR

...view details