ಕರ್ನಾಟಕ

karnataka

ಜಾರ್ಖಂಡ್​ನಲ್ಲೂ ಮುದುಡಿದ ಕಮಲ, ಜೆಎಂಎಂ-ಕಾಂಗ್ರೆಸ್​ ಮೈತ್ರಿಕೂಟಕ್ಕೆ ಮತದಾರನ ಜೈಕಾರ!

By

Published : Dec 23, 2019, 8:05 AM IST

Updated : Dec 23, 2019, 8:18 PM IST

Jarkhand Assembly election Result
ಜಾರ್ಖಂಡ್ ವಿಧಾನಸಭಾ ಚುನಾವಣೆ ಫಲಿತಾಂಶ

20:07 December 23

ಜಾರ್ಖಂಡ್​ನಲ್ಲೂ ಉದುರಿತು ಕಮಲದ ದಳ... ಜೆಎಂಎಂ-ಕಾಂಗ್ರೆಸ್​ ಮೈತ್ರಿಕೂಟಕ್ಕೆ ಮತದಾರನ ಜೈಕಾರ!

ರಾಂಚಿ: ಜಾಂರ್ಖಂಡ್​ನ 81 ಕ್ಷೇತ್ರಗಳಿಗೆ ನಡೆದಿದ್ದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಜೆಎಂಎಂ-ಕಾಂಗ್ರೆಸ್-ಆರ್​ಜೆಡಿ 'ಮಹಾಘಟಬಂಧನ'ಕ್ಕೆ ಮತದಾರಪ್ರಭು ಜೈಕಾರ ಹಾಕಿದ್ದಾನೆ. ಈ ಮೂಲಕ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ರಘುಬರ್​ ದಾಸ್​ ನೇತೃತ್ವದ ಬಿಜೆಪಿ ಸರ್ಕಾರ ಉರುಳಿ ಬಿದ್ದಂತಾಗಿದೆ.

ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಛತ್ತೀಸ್​ಗಢ ರಾಜ್ಯಗಳ ಬಳಿಕ ಇದೀಗ ಜಾರ್ಖಂಡ್​ ರಾಜ್ಯವನ್ನು ಬಿಜೆಪಿ ಕಳೆದುಕೊಂಡು, ಕೇಸರಿಯ ಬಣ್ಣ ಮಾಸುವಂತೆ ಮಾಡಿದರೆ, ಕಮಲದ ದಳಗಳು ಒಂದೊಂದಾಗಿ ಉದುರಿ ಹೂವು ಬಾಡುತ್ತಿದೆ.

81 ಕ್ಷೇತ್ರಗಳ ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 41 ಸ್ಥಾನಗಳ ಬಹುತಮತ ಅವಶ್ಯಕತೆ ಇತ್ತು. ಅದರಂತೆ ಕಾಂಗ್ರೆಸ್ 16 ಮತ್ತು ಆರ್‌ಜೆಡಿ 1 ಹಾಗೂ ಜೆಎಂಎಂ ಒಟ್ಟು 30 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ಜಾರ್ಖಂಡ್​ನಲ್ಲಿ ಮಹಾಘಟಬಂಧನ್​ ವರ್ಕೌಟ್​ ಆಗಿದೆ. ಈ ಮೈತ್ರಿ ಪಕ್ಷ ಒಟ್ಟು 47 ಕ್ಷೇತ್ರಗಳಲ್ಲಿ ಗೆಲ್ಲುವ ಮೂಲಕ ಮೈತ್ರಿಕೂಟಕ್ಕೆ ರಾಜ್ಯದ ಜನತೆ ಸ್ಪಷ್ಟ ಬಹುಮತ ನೀಡಿದ್ದಾರೆ. 30 ಕ್ಷೇತ್ರಗಳಲ್ಲಿ ವಿಜಯ ಪತಾಕೆ ಹಾರಿಸುವ ಮೂಲಕ ಜೆಎಂಎಂ ರಾಜ್ಯದ ಏಕ ಮಾತ್ರ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಈ ಮೂಲಕ ಎರಡನೇ ಬಾರಿಗೆ ಜಾರ್ಖಂಡ್​ನ ಮುಖ್ಯಮಂತ್ರಿ ಗಾದಿಗೇರಲು ಜೆಎಂಎಂ ನಾಯಕ ಹೇಮಂತ್​ ಸೊರೆನ್ ಸಿದ್ಧರಾಗಿದ್ದಾರೆ.

ಈ ಬಾರಿ 81 ಕ್ಷೇತ್ರಗಳ ಪೈಕಿ 79 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಮುಂದಾಗಿತ್ತು. ಆದರೆ ಜೆಎಂಎಂ ಮುಖಂಡ ಹೇಮಂತ್ ಸೊರೆನ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಸೇರಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ತಂತ್ರ ಹೆಣೆದಿತ್ತು. ಈ ಮಹಾಘಟಬಂಧನ್​, ಬಿಜೆಪಿಯನ್ನು ಪಟ್ಟದಿಂದ ಕೆಳಗಿಳಿಸುವಲ್ಲೂ ಯಶಸ್ವಿಯಾಯ್ತು. 43 ಸ್ಥಾನಗಳಲ್ಲಿ ಜೆಎಂಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್ 31 ಮತ್ತು ಆರ್‌ಜೆಡಿ 7 ಸ್ಥಾನಗಳಲ್ಲಿ ಸ್ಪರ್ಧಿಸಿತ್ತು. ಇದರ ಜೆಎಂಎಂ 30 , ಕಾಂಗ್ರೆಸ್ 16  ಹಾಗೂ ಆರ್‌ಜೆಡಿ 1 ಕ್ಷೇತ್ರದಲ್ಲಿ ಗೆದ್ದು, ಒಟ್ಟು 47 ಕ್ಷೇತ್ರಗಳಲ್ಲಿ ಮಹಾಘಟಬಂಧನ್​ ಗೆದ್ದಿದೆ. ಈ ಮೂಲಕ ಬಹುಮತಕ್ಕೆ ಬೇಕಾದ 41ಕ್ಕೂ ಕ್ಷೇತ್ರಗಳು ಈ ಮೈತ್ರಿ ಪಕ್ಷಗಳಿಗೆ ಲಭಿಸಿದೆ.

ಅಧಿಕಾರ ಕಳೆದುಕೊಂಡ ಬಿಜೆಪಿ...

ಇನ್ನೊಂದೆಡೆ ಬಿಜೆಪಿ ಅಭ್ಯರ್ಥಿ ರಘುಬರ್​ ದಾಸ್​ ನೇತೃತ್ವದ ಆಡಳಿತರೂಢ ಬಿಜೆಪಿ ರಾಜ್ಯದಲ್ಲಿ ಹೀನಾಯ ಸೋಲು ಕಂಡಿದೆ. ಫಲಿತಾಂಶದ ಬೆನ್ನಲ್ಲೇ ರಘುಬರ್​ ದಾಸ್,​ ರಾಜ್ಯಪಾಲ ದ್ರೌಪದಿ ಮುರ್ಮುಗೆ ತಮ್ಮ ರಾಜೀನಾಮೆ ಪತ್ರವನ್ನು ನೀಡಿದ್ದಾರೆ.

 2014 ರ ಚುನಾವಣೆಯಲ್ಲಿ 37 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ, ಈ ಬಾರಿ ಒಟ್ಟು 25 ಕ್ಷೇತ್ರಗಳನ್ನು ಗೆಲ್ಲುವಷ್ಟರಲ್ಲಿ ಸುಸ್ತುಬಿದ್ದಿದೆ. ಈ ಮೂಲಕ ಮುಖ್ಯಮಂತ್ರಿ ಸೀಟನ್ನು ಉಳಿಸಿಕೊಳ್ಳುವಲ್ಲಿ ರಘುಬರ್​ ದಾಸ್​ ವಿಫಲರಾಗಿದ್ದಾರೆ. ಇದರ ಮಧ್ಯೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಮುಖ್ಯಮಂತ್ರಿ ರಘುಬರ್​ ದಾಸ್​​, ಇದು ಪಕ್ಷದ ಸೋಲಲ್ಲ, ನನ್ನ ಸೋಲು. ಸೋಲಿಗೆ ಏನು ಕಾರಣ ಎಂಬುದರ ಬಗ್ಗೆ ಪರಾಮರ್ಶೆ ಮಾಡುಕೊಳ್ಳುವುದಾಗಿ ಹೇಳಿದ್ದಾರೆ. ಜತೆಗೆ ಜನರ ಜನಾದೇಶ ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ. 

ಒಟ್ಟು 5 ಹಂತಗಳಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸುಮಾರು 2 ಕೋಟಿ 30 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. 2014 ರ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, 5 ಸ್ಥಾನಗಳನ್ನು ಪಡೆದಿದ್ದ ಎಜೆಎಸ್​ಯುನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿಯ ರಘುಬರ್​ ದಾಸ್​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವಿಕರಿಸಿದ್ದರು. ಆದರೆ ಈ ಬಾರಿ ಎಜೆಎಸ್​ಯು, ಸ್ವತಂತ್ರವಾಗಿ ಕಣಕ್ಕಳಿದಿತ್ತು.

19:44 December 23

ಜೆಎಂಎಂ ನಾಯಕ ಹೇಮಂತ್​ ಸೊರೆನ್ ಜಯಭೇರಿ

ದಮ್ಕಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜೆಎಂಎಂ ನಾಯಕ ಹೇಮಂತ್​ ಸೊರೆನ್, 13188 ಮತಗಳ ಅಂತರದಿಂದ ಗೆದ್ದಿದ್ದಾರೆ. ಇನ್ನೊಂದೆಡೆ ಬರ್ಹೈತ್​ ಕ್ಷೇತ್ರದಲ್ಲೂ ಸ್ಪರ್ಧಿಸಿ 25740 ಮತಗಳ ಅಂತರದಿಂದ ಗೆದ್ದು ಬೀಗಿದ್ದಾರೆ. 

17:24 December 23

ಮುನ್ನಡೆಯಲ್ಲಿ ಜೆಎಂಎಂ-ಕಾಂಗ್ರೆಸ್-ಆರ್​ಜೆಡಿ ಮಹಾಘಟಬಂಧನ್!

ಸದ್ಯ ಒಟ್ಟು 81 ಕ್ಷೇತ್ರಗಳಲ್ಲಿ ಆಯಾ ಪಕ್ಷಗಳ ಗೆಲುವು ಹಾಗೂ ಮುನ್ನಡೆ ಫಲಿತಾಂಶ ಹೀಗಿದೆ.

ಗೆಲುವು:

ಗೆಲುವು:
ಬಿಜೆಪಿ -24
ಎಜೆಎಸ್​ಯು-2
ಕಾಂಗ್ರೆಸ್-16
ಜೆಎಂ​ಎಂ-29
ಆರ್​ಜೆಡಿ- 1
ಇತರೆ- 6

ಮುನ್ನಡೆ: 
ಬಿಜೆಪಿ - 1
ಎಜೆಎಸ್​ಯು- 0
ಕಾಂಗ್ರೆಸ್-0
ಜೆಎಂ​ಎಂ-1
ಆರ್​ಜೆಡಿ- 0
ಇತರೆ- 1

17:17 December 23

ಜೆಎಂಎಂ ಅಭ್ಯರ್ಥಿ ಹೇಮಂತ್​ ಸೊರೆನ್ ಸುದ್ದಿಗೋಷ್ಠಿ

  • ರಾಜ್ಯದಲ್ಲಿ ಇನ್ನು ಮುಂದೆ ಹೊಸ ಅಧ್ಯಾಯ ಶುರುವಾಗುತ್ತಿದೆ. 
  • ಜಾತಿ, ಧರ್ಮ, ಉದ್ಯೋಗದ ಆಧಾರದಲ್ಲಿ ಜಾರ್ಖಂಡ್​ ನಾಗರಿಕರ ನಿರೀಕ್ಷೆಗಳು ಒಡೆದು ಹೋಗಲು ಸಾಧ್ಯವಿಲ್ಲ ಎಂಬ ಭರವಸೆ ನೀಡುತ್ತೇನೆ. 
  • ಸುದ್ದಿಗೋಷ್ಠಿಯಲ್ಲಿ ಜೆಎಂಎಂ ಅಭ್ಯರ್ಥಿ ಹೇಮಂತ್​ ಸೊರೆನ್ ಹೇಳಿಕೆ

17:14 December 23

ಜೆಎಂಎಂ ಅಭ್ಯರ್ಥಿ ಹೇಮಂತ್​ ಸೊರೆನ್ ಸುದ್ದಿಗೋಷ್ಠಿ

  • ಜೆಎಂಎಂ ಅಭ್ಯರ್ಥಿ ಹೇಮಂತ್​ ಸೊರೆನ್ ಸುದ್ದಿಗೋಷ್ಠಿ
  • ಜನಾದೇಶಕ್ಕೆ ಧನ್ಯವಾದ ಎಂದು ಜಾರ್ಖಂಡ್​ ಜನತೆಗೆ ಧನ್ಯವಾದ ಸಲ್ಲಿಸಿದ ಹೇಮಂತ್​
  • ನನ್ನನ್ನು ಬೆಂಬಲಿಸಿ ನನ್ನ ಮೇಲೆ ನಂಬಿಕೆ ಇಟ್ಟ ಸೋನಿಯಾ ಗಾಂಧಿ, ರಾಹುಲ್​ ಗಾಂಧಿ, ಪ್ರಿಯಾಂಕಾ ಗಾಂಧಿಗೆ ಧನ್ಯವಾದ ಎಂದ ಹೇಮಂತ್​ ಸೊರೆನ್
  • ಜೆಎಂಎಂ-ಕಾಂಗ್ರೆಸ್-ಆರ್​ಜೆಡಿ ನೇತೃತ್ವದ ಮೈತ್ರಿಗೆ ಸದ್ಯ ಜಾರ್ಖಂಡ್​ನಲ್ಲಿ ಮುನ್ನಡೆ ದೊರಕಿದೆ. 

16:55 December 23

ಜೆಎಂಎಂ ಅಭ್ಯರ್ಥಿ ಹೇಮಂತ್​ ಸೊರೆನ್ ಸೈಕಲ್​ ರೈಡಿಂಗ್​!

ಸದ್ಯ ಜೆಎಂಎಂ ಒಟ್ಟು 28 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿರುವುದರಿಂದ ಜೆಎಂಎಂ ಅಭ್ಯರ್ಥಿ ಹೇಮಂತ್​ ಸೊರೆನ್, ತಮ್ಮ ರಾಂಚಿ ನಿವಾಸದ ಮುಂದೆ ಬೈಸಿಕಲ್​ನಲ್ಲಿ ಓಡಾಡಿ ಸಂಭ್ರಮ ವ್ಯಕ್ತಪಡಿಸಿದ್ದಾರೆ. ಸದ್ಯ ಜೆಎಂಎಂ-ಕಾಂಗ್ರೆಸ್-ಆರ್​ಜೆಡಿ ಮೈತ್ರಿ ಪಕ್ಷ ಒಟ್ಟು 46 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. 

16:24 December 23

ಒಟ್ಟು 81 ಕ್ಷೇತ್ರಗಳಲ್ಲಿ ಆಯಾ ಪಕ್ಷಗಳ ಗೆಲುವು ಹಾಗೂ ಮುನ್ನಡೆ ಫಲಿತಾಂಶ ಹೀಗಿದೆ.

ಗೆಲುವು:
ಬಿಜೆಪಿ -14
ಎಜೆಎಸ್​ಯು-2
ಕಾಂಗ್ರೆಸ್-10
ಜೆಎಂ​ಎಂ-13
ಆರ್​ಜೆಡಿ- 1
ಇತರೆ- 1

ಮುನ್ನಡೆ: 
ಬಿಜೆಪಿ - 14
ಎಜೆಎಸ್​ಯು- 1
ಕಾಂಗ್ರೆಸ್-3
ಜೆಎಂ​ಎಂ-16
ಆರ್​ಜೆಡಿ- 0
ಇತರೆ- 6

16:20 December 23

ಫಲಿತಾಂಶ ನಮ್ಮ ಪರವಾಗಿ ಬರುವ ವಿಶ್ವಾಸವಿದೆ: ರಘುಬರ್​ ದಾಸ್

ಅಂತಿಮ ಫಲಿತಾಂಶಕ್ಕೂ ಮುನ್ನ ಪ್ರತಿಕ್ರಿಯೆ ನೀಡಿರುವ ಜಾರ್ಖಂಡ್​ನ ಹಾಲಿ ಮುಖ್ಯಮಂತ್ರಿ ಹಾಗೂ ಜೆಮ್​ಶೆಡ್​ಪುರ್​ ಪೂರ್ವ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಘುಬರ್​ ದಾಸ್, ಫಲಿತಾಂಶ ನಮ್ಮ ಪರವಾಗಿ ಬರುವ ವಿಶ್ವಾಸವಿದೆ. ಅಂತಿಮ ಫಲಿತಾಂಶಕ್ಕಾಗಿ ನಾನು ಕಾಯುತ್ತಿದ್ದೇನೆ. ಬಿಜೆಪಿಯು ಜನಾದೇಶವನ್ನು ಸ್ವೀಕರಿಸುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

15:56 December 23

ರಘುಬರ್​ ದಾಸ್​ಗೆ ಹಿನ್ನಡೆ

ಜೆಮ್​ಶೆಡ್​ಪುರ್​ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಜಾರ್ಖಂಡ್​ನ ಹಾಲಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಅಭ್ಯರ್ಥಿ ರಘುಬರ್​ ದಾಸ್ ಇನ್ನೂ ಹಿನ್ನಡೆಯಲ್ಲಿದ್ದಾರೆ. ಸ್ವತಂತ್ರ ಅಭ್ಯರ್ಥಿ ಸರಯು ರಾಯ್​ 7484 ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ.

15:41 December 23

ಒಟ್ಟು 81 ಕ್ಷೇತ್ರಗಳಲ್ಲಿ ಆಯಾ ಪಕ್ಷಗಳ ಗೆಲುವು ಹಾಗೂ ಮುನ್ನಡೆ ಫಲಿತಾಂಶ ಹೀಗಿದೆ.

ಗೆಲುವು:
ಬಿಜೆಪಿ -7
ಎಜೆಎಸ್​ಯು-1
ಕಾಂಗ್ರೆಸ್-5
ಜೆಎಂ​ಎಂ-6

ಮುನ್ನಡೆ: 
ಬಿಜೆಪಿ - 17
ಎಜೆಎಸ್​ಯು- 2
ಕಾಂಗ್ರೆಸ್-8
ಜೆಎಂ​ಎಂ-25
ಆರ್​ಜೆಡಿ- 3
ಇತರೆ- 7

15:05 December 23

ಮೈತ್ರಿಗೆ 8 ಕ್ಷೇತ್ರಗಳಲ್ಲಿ ಜಯ..

ಜಾರ್ಖಂಡ್ ವಿಧಾನಸಭೆ ಚುನಾವಣೆಯ ಮತ ಎಣಿಕೆ ಭರದಿಂದ ಸಾಗಿದ್ದು, ಈಗಾಗಲೇ 6 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದು, 20 ಕ್ಷೇತ್ರಗಳಲ್ಲಿ ಮುನ್ನಡೆಯಲ್ಲಿದೆ. ಇನ್ನು ಕಾಂಗ್ರೆಸ್​-ಜೆಎಂ​ಎಂ-ಆರ್​ಜೆಡಿ ಮೈತ್ರಿಯು 36 ಸ್ಥಾನಗಳಿಂದ ಮುನ್ನಡೆ ಸಾಧಿಸಿದ್ದು, ಜೆಎಂ​ಎಂ 5 ಹಾಗೂ  ಕಾಂಗ್ರೆಸ್ 3  ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದೆ. 

14:55 December 23

  • 4 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿದ ಬಿಜೆಪಿ

14:39 December 23

3 ಕ್ಷೇತ್ರಗಳಲ್ಲಿ ಬಿಜೆಪಿ, 2 ಕ್ಷೇತ್ರದಲ್ಲಿ ಕಾಂಗ್ರೆಸ್​ ಗೆಲುವು

ಸಿಲ್ಲಿ ಕ್ಷೇತ್ರದಲ್ಲಿ ಎಜೆಎಸ್‌ಯು ಪಕ್ಷದ ಸುದೇಶ್ ಮಹತೊ 17125 ಮತಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದು, ಜೆಎಂಎಂನ ಸೀಮಾ ದೇವಿ ಹಿಂದುಳಿದಿದ್ದಾರೆ. 

ಒಟ್ಟು 81 ಕ್ಷೇತ್ರಗಳಲ್ಲಿ ಆಯಾ ಪಕ್ಷಗಳ ಗೆಲುವು ಹಾಗೂ ಮುನ್ನಡೆ ಫಲಿತಾಂಶ ಹೀಗಿದೆ.

ಗೆಲುವು:
ಬಿಜೆಪಿ -3
ಎಜೆಎಸ್​ಯು-1
ಕಾಂಗ್ರೆಸ್-2

ಮುನ್ನಡೆ: 
ಬಿಜೆಪಿ - 26
ಎಜೆಎಸ್​ಯು- 3
ಕಾಂಗ್ರೆಸ್- 11
ಜೆಎಂ​ಎಂ- 24
ಆರ್​ಜೆಡಿ- 4
ಇತರೆ- 7

13:36 December 23

  • ತಲಾ ಒಂದೊಂದು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ ಬಿಜೆಪಿ, ಎಜೆಎಸ್​ಯು ಹಾಗೂ ಕಾಂಗ್ರೆಸ್

13:20 December 23

ಸಿಲ್ಲಿ ಕ್ಷೇತ್ರ: ಎಜೆಎಸ್‌ಯು ಪಕ್ಷದ ಸುದೇಶ್ ಮಹತೋ, ಜೆಎಂಎಂನ ಸೀಮಾ ದೇವಿಯನ್ನು ಹಿಂದಿಕ್ಕಿ 10400 ಮತಗಳಿಂದ ಮುನ್ನಡೆ 

ಒಟ್ಟು 81 ಕ್ಷೇತ್ರಗಳಲ್ಲಿ ಆಯಾ ಪಕ್ಷಗಳ ಮುನ್ನಡೆ ಹೀಗಿದೆ.

  • ಬಿಜೆಪಿ - 26
  • ಎಜೆಎಸ್​ಯು- 3
  • ಕಾಂಗ್ರೆಸ್- 12
  • ಜೆಎಂ​ಎಂ- 26
  • ಆರ್​ಜೆಡಿ- 5
  • ಇತರೆ- 8

12:57 December 23

ಸಿಎಂ ರಘುಬರ್​ ದಾಸ್​ರನ್ನು ಹಿಂದಿಕ್ಕಿದ ಸ್ವತಂತ್ರ ಅಭ್ಯರ್ಥಿ ಸರಯು ರಾಯ್

  • ಧನ್ವಾರ್‌ ಕ್ಷೇತ್ರದಲ್ಲಿ 10,000 ಮತಗಳಲ್ಲಿ ಜೆವಿಎಂ(ಪಿ)ಯ ಬಾಬುಲಾಲ್ ಮರಂಡಿಗೆ ಮುನ್ನಡೆ
  • ಜೆಮ್​ಶೆಡ್​ಪುರ್​ ಪೂರ್ವ ಕ್ಷೇತ್ರದಲ್ಲಿ ಸಿಎಂ ರಘುಬರ್​ ದಾಸ್​ರನ್ನು 771 ಮತಗಳಿಂದ ಹಿಂದಿಕ್ಕಿದ ಸ್ವತಂತ್ರ ಅಭ್ಯರ್ಥಿ ಸರಯು ರಾಯ್
  • ಡುಮ್ಕಾ ಕ್ಷೇತ್ರದಲ್ಲಿ 2463 ಮತಗಳಿಂದ ​ಜೆಎಂಎಂನ ಹೇಮಂತ್​ ಸೊರೆನ್​ಗೆ ಮುನ್ನಡೆ

12:38 December 23

ಇನ್ನೂ ಹಲವು ಸುತ್ತಿನ ಮತ ಎಣಿಕೆಯಿದೆ, ಬಿಜೆಪಿ ಗೆಲ್ಲಲಿದೆ: ಸಿಎಂ ರಘುಬರ್​ ದಾಸ್

ಈಗಿನ ಮತ ಎಣಿಕೆ ಕುರಿತ ಮಾಹಿತಿಯು ಜೆಎಂಎಂ-ಕಾಂಗ್ರೆಸ್-ಆರ್​ಜೆಡಿ ಮೈತ್ರಿಯು ಗೆಲುವು ಸಾಧಿಸಲಿದೆ ಎಂಬಂತಿದೆ. ಆದರೆ ಇದೇ ಕೊನೆಯ ಸುತ್ತಲ್ಲ, ಇನ್ನೂ ಹಲವು ಸುತ್ತಿನ ಮತ ಎಣಿಕೆಯಿದ್ದು, ಬಿಜೆಪಿ ಗೆಲ್ಲಲಿದೆ ಎಂದು ಜಾರ್ಖಂಡ್​ನ ಹಾಲಿ ಸಿಎಂ ಹಾಗೂ ಬಿಜೆಪಿ ಅಭ್ಯರ್ಥಿ ರಘುಬರ್​ ದಾಸ್ ಪ್ರತಿಕ್ರಿಯೆ ನೀಡಿದ್ದಾರೆ. 
 

ಒಟ್ಟು 81 ಕ್ಷೇತ್ರಗಳಲ್ಲಿ ಆಯಾ ಪಕ್ಷಗಳ ಮುನ್ನಡೆ ಹೀಗಿದೆ.

  • ಬಿಜೆಪಿ - 28
  • ಎಜೆಎಸ್​ಯು- 3
  • ಕಾಂಗ್ರೆಸ್- 12
  • ಜೆಎಂ​ಎಂ- 25
  • ಆರ್​ಜೆಡಿ- 5
  • ಇತರೆ- 8

12:07 December 23

ಜೆಎಂಎಂ-ಕಾಂಗ್ರೆಸ್-ಆರ್​ಜೆಡಿ ಮೈತ್ರಿಗೆ ಸ್ಪಷ್ಟ ಬಹುಮತ ಸಿಗಲಿದ್ದು, ಹೇಮಂತ್​ ಸೊರೆನ್​ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಜಾರ್ಖಂಡ್​ ಕಾಂಗ್ರೆಸ್​ ಉಸ್ತುವಾರಿ, ಆರ್​ಪಿಎನ್​ ಸಿಂಗ್​​​ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಒಟ್ಟು 81 ಕ್ಷೇತ್ರಗಳಲ್ಲಿ ಆಯಾ ಪಕ್ಷಗಳ ಮುನ್ನಡೆ ಹೀಗಿದೆ.

  • ಬಿಜೆಪಿ - 28
  • ಎಜೆಎಸ್​ಯು- 4
  • ಕಾಂಗ್ರೆಸ್- 13
  • ಜೆಎಂ​ಎಂ- 23
  • ಆರ್​ಜೆಡಿ- 5
  • ಇತರೆ- 8

11:35 December 23

39 ಸ್ಥಾನಗಳಿಂದ ಜೆಎಂಎಂ-ಕಾಂಗ್ರೆಸ್-ಆರ್​ಜೆಡಿ ಮೈತ್ರಿ ಮುನ್ನಡೆ

81 ಕ್ಷೇತ್ರಗಳ ಪೈಕಿ 39 ಸ್ಥಾನಗಳಿಂದ ಜೆಎಂಎಂ-ಕಾಂಗ್ರೆಸ್-ಆರ್​ಜೆಡಿ ಮೈತ್ರಿ ಮುನ್ನಡೆ ಸಾಧಿಸಿದ್ದು, ಬಿಜೆಪಿ 26 ಹಾಗೂ ಎಜೆಎಸ್​ಯು 6 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ.

11:23 December 23

ಧನ್ವಾರ್‌ ಕ್ಷೇತ್ರದಿಂದ ಸ್ಪರ್ಧಿಸಿರುವ ಜೆವಿಎಂ(ಪಿ) ನ ಅಭ್ಯರ್ಥಿ ಬಾಬುಲಾಲ್ ಮರಂಡಿ, 2841 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. 

 ಒಟ್ಟು 81 ಕ್ಷೇತ್ರಗಳಲ್ಲಿ ಆಯಾ ಪಕ್ಷಗಳ ಮುನ್ನಡೆ ಹೀಗಿದೆ.

  • ಬಿಜೆಪಿ - 25
  • ಎಜೆಎಸ್​ಯು- 5
  • ಕಾಂಗ್ರೆಸ್- 14
  • ಜೆಎಂ​ಎಂ- 24
  • ಆರ್​ಜೆಡಿ- 5
  • ಇತರೆ- 8

10:58 December 23

ಸ್ವಕ್ಷೇತ್ರದಲ್ಲಿ ಸಿಎಂ ರಘುಬರ್​ ದಾಸ್​ಗೆ ಮುನ್ನಡೆ

ಜಾರ್ಖಂಡ್​ ಸಿಎಂ ಹಾಗೂ ಬಿಜೆಪಿ ಅಭ್ಯರ್ಥಿ ರಘುಬರ್​ ದಾಸ್​

ಒಟ್ಟು 81 ಕ್ಷೇತ್ರಗಳಲ್ಲಿ ಆಯಾ ಪಕ್ಷಗಳ ಮುನ್ನಡೆ ಹೀಗಿದೆ.

  • ಬಿಜೆಪಿ - 27
  • ಎಜೆಎಸ್​ಯು- 4
  • ಕಾಂಗ್ರೆಸ್- 13
  • ಜೆಎಂ​ಎಂ- 24
  • ಆರ್​ಜೆಡಿ- 5
  • ಇತರೆ- 8

10:40 December 23

ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಮಹಾಘಟಬಂಧನ್​ (ಜೆಎಂಎಂ, ಕಾಂಗ್ರೆಸ್, ಆರ್​ಜೆಡಿ) ಗೆಲುವು ಸಾಧಿಸಲಿದ್ದು, ಜೆಎಂಎಂ ಮುಖಂಡ ಹೇಮಂತ್ ಸೊರೆನ್  ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಆರ್​ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್‍ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇನ್ನು ಜಾರ್ಖಂಡ್​ನ ಬಿಜೆಪಿ ಉಸ್ತುವಾರಿ ರಾಮ್ ವಿಚಾರ್ ನೇತಮ್, ತಮ್ಮ ಪಕ್ಷವು 50 ಸ್ಥಾನಗಳಲ್ಲಿ ಗೆಲ್ಲಲಿದ್ದು, 2ನೇ ಬಾರಿಯೂ ಅಧಿಕಾರದ ಗದ್ದುಗೆಗೇರಲಿದ್ದು, ಇದನ್ನು ತಡೆಯಲು ಯಾರಿದಂಲೂ ಸಾದ್ಯವಿಲ್ಲ ಎಂದು ಹೇಳಿದ್ದಾರೆ.

10:36 December 23

ಒಟ್ಟು 81 ಕ್ಷೇತ್ರಗಳಲ್ಲಿ ಆಯಾ ಪಕ್ಷಗಳ ಮುನ್ನಡೆ ಹೀಗಿದೆ.

ಬಿಜೆಪಿ - 32
ಎಜೆಎಸ್​ಯು- 2
ಕಾಂಗ್ರೆಸ್- 13
ಜೆಎಂ​ಎಂ- 22
ಆರ್​ಜೆಡಿ- 5
ಇತರೆ- 7

10:19 December 23

ಬರ್ಹೈಟ್ ವಿಧಾನಸಭಾ ಕ್ಷೇತ್ರದಲ್ಲಿ ಮುನ್ನಡೆ ಕಾಯ್ದುಕೊಂಡಿದ್ದ ಜೆಎಂಎಂ ಮುಖಂಡ ಹೇಮಂತ್​ ಸೊರೆನ್​ಗೆ ಡುಮ್ಕಾ ಕ್ಷೇತ್ರದಲ್ಲಿ ಹಿನ್ನೆಡೆ ಉಂಟಾಗಿದೆ. ಇಲ್ಲಿ ಬಿಜೆಪಿಯ ಲೂಯಿಸ್ ಮರಂಡಿ 6329 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ.
 

10:17 December 23

ಡುಮ್ಕಾ ಕ್ಷೇತ್ರದಲ್ಲಿ ಹೇಮಂತ್ ಸೊರೆನ್​ಗೆ ಹಿನ್ನೆಡೆ

10:08 December 23

664 ಮತಗಳಿಂದ ಮುನ್ನಡೆ ಕಾಯ್ದುಕೊಂಡಿರುವ ಜೆಎಂಎಂ ಮುಖಂಡ ಹೇಮಂತ್​ ಸೊರೆನ್

ಒಟ್ಟು 81 ಕ್ಷೇತ್ರಗಳಲ್ಲಿ ಆಯಾ ಪಕ್ಷಗಳ ಮುನ್ನಡೆ ಹೀಗಿದೆ.

  • ಬಿಜೆಪಿ - 34
  • ಎಜೆಎಸ್​ಯು- 3
  • ಕಾಂಗ್ರೆಸ್- 10
  • ಜೆಎಂ​ಎಂ- 22
  • ಆರ್​ಜೆಡಿ- 5
  • ಇತರೆ- 7

09:40 December 23

ರಾಂಚಿ:ಇಂದು ಬೆಳಗ್ಗೆಯಿಂದ ಮತ ಎಣಿಕೆ ಪ್ರಕಿಯೆ ಪ್ರಾರಂಭವಾಗುತ್ತಿದ್ದಂತೆ, ಇತ್ತ ರಾಂಚಿಯಲ್ಲಿ 'ಜಾರ್ಖಂಡ್‌ ವಿಧಾನಸಭಾ ಚುನಾವಣೆಯಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟಕ್ಕೆ ಗೆಲುವು' ಎಂಬ ಸಂದೇಶ ಸಾರುತ್ತಿರುವ ಪೋಸ್ಟರ್ ಒಂದು ರಾರಾಜಿಸುತ್ತಿದೆ. 

'ಜಾರ್ಖಂಡ್‌ ಕಿ ಪುಕಾರ್​ ಹೈ, ಘಟಬಂಧನ್​ ಕಿ ಸರ್ಕಾರ್​ ಹೈ, ಹೇಮಂತ್​ ಅಬ್​ ಕಿ ಬಾರ್​ ಹೈ' ಎಂದು ಬರೆದು, ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿಯವರ ಫೋಟೋವನ್ನೊಳಗೊಂಡ ಪೋಸ್ಟರ್ ಕಂಡುಬಂದಿದೆ. 

ಇನ್ನು ಮತ ಎಣಿಕೆಯಲ್ಲಿ ಬಿಜೆಪಿ 30 ಕ್ಷೇತ್ರಗಳಲ್ಲಿ, ಎಜೆಎಸ್​ಯು 5, ಕಾಂಗ್ರೆಸ್​ 9, ಜೆಎಮ್​ಎಮ್​ 22, ಆರ್​ಜೆಡಿ 4, ಇತರೆ 8 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. 

09:22 December 23

ರಾಂಚಿಯಲ್ಲಿ 'ಜಾರ್ಖಂಡ್‌ ಕಿ ಪುಕಾರ್​ ಹೈ, ಘಟಬಂಧನ್​ ಕಿ ಸರ್ಕಾರ್​ ಹೈ' ಪೋಸ್ಟರ್

ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಹಿನ್ನೆಲೆ ರಾಜ್ಯದ ಎಲ್ಲಾ 24 ಜಿಲ್ಲಾ ಕೇಂದ್ರಗಳಲ್ಲಿ ಬಿಗಿ ಭದ್ರತೆ ಒದಗಿಸಲಾಗಿದೆ. ಇನ್ನು ಬಿಜೆಪಿ 23 ಕ್ಷೇತ್ರಗಳಲ್ಲಿ, ಎಜೆಎಸ್​ಯು 5, ಕಾಂಗ್ರೆಸ್​ 10, ಜೆಎಮ್​ಎಮ್​ 22, ಆರ್​ಜೆಡಿ 2, ಇತರೆ 4 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. 

08:51 December 23

ಜಾರ್ಖಂಡ್ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆ ಈಗಾಗಲೇ ಪ್ರಾರಂಭವಾಗಿದ್ದು, ಬಿಜೆಪಿ 16 ಕ್ಷೇತ್ರಗಳಲ್ಲಿ, ಎಜೆಎಸ್​ಯು 2, ಕಾಂಗ್ರೆಸ್​ 9, ಜೆಎಮ್​ಎಮ್​ 16, ಆರ್​ಜೆಡಿ 2 ಹಾಗೂ ಇತರೆ ಪಕ್ಷಗಳು 2 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ. 

08:35 December 23

ಆರಂಭಿಕ ಮುನ್ನಡೆ ಕಾಯ್ದುಕೊಂಡ ಬಿಜೆಪಿ, ಜೆಎಮ್​ಎಮ್

ಜಾರ್ಖಂಡ್: ರಾಜ್ಯದ 81 ಕ್ಷೇತ್ರಗಳಿಗೆ ನಡೆದಿದ್ದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, 1216 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

5 ಹಂತಗಳಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸುಮಾರು 2 ಕೋಟಿ 30 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಜಾರ್ಖಂಡ್​ ಮುಖ್ಯಮಂತ್ರಿ ರಘುಬರ್​ ದಾಸ್​, ಜೆಮ್​ಶೆಡ್​ಪುರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 81 ಕ್ಷೇತ್ರಗಳ ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 41 ಸ್ಥಾನಗಳ ಬಹುತಮತ ಅವಶ್ಯಕತೆ ಇದೆ. 

ರಾಜ್ಯದಲ್ಲಿ ಒಟ್ಟು 5 ಹಂತಗಳಲ್ಲಿ ಮತದಾನ ನಡೆದಿತ್ತು. ನವೆಂಬರ್​ 30ರಂದು ಮೊದಲ ಹಂತ, ಡಿ.7ರಂದು 2ನೇ ಹಂತ, ಡಿ.12ರಂದು 3ನೇ ಹಂತ,ಡಿ.16ರಂದು 4ನೇ ಹಂತ ಹಾಗೂ ಡಿ.20 ರಂದು 5ನೇ ಹಂತದಲ್ಲಿ ಮತದಾನವಾಗಿತ್ತು.

2014 ರ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, 5 ಸ್ಥಾನಗಳನ್ನು ಪಡೆದಿದ್ದ ಎಜೆಎಸ್​ಯುನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿಯ ರಘುಬರ್​ ದಾಸ್​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವಿಕರಿಸಿದ್ದರು. ಇದೀಗ ಎಜೆಎಸ್​ಯು, ಸ್ವತಂತ್ರವಾಗಿ ಕಣಕ್ಕಳಿದಿದೆ. ಬಿಜೆಪಿ ಈ ಬಾರಿ 81 ಕ್ಷೇತ್ರಗಳ ಪೈಕಿ 79 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ. 

ಆದರೆ ಈ ಬಾರಿ ಜೆಎಂಎಂ ಮುಖಂಡ ಹೇಮಂತ್ ಸೊರೆನ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಸೇರಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮುಂದಾಗಿವೆ. 43 ಸ್ಥಾನಗಳಲ್ಲಿ ಜೆಎಂಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್  31 ಮತ್ತು ಆರ್‌ಜೆಡಿ 7 ಸ್ಥಾನಗಳಲ್ಲಿ ಸ್ಪರ್ಧಿಸಿವೆ. 

07:31 December 23

ಜೆಎಂಎಂ-ಕಾಂಗ್ರೆಸ್​ ಮೈತ್ರಿಕೂಟಕ್ಕೆ ಮತದಾರನ ಜೈಕಾರ!

ಜಾರ್ಖಂಡ್: ರಾಜ್ಯದ 81 ಕ್ಷೇತ್ರಗಳಿಗೆ ನಡೆದಿದ್ದ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರಬೀಳಲು ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಮತ ಎಣಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, 1216 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ.

5 ಹಂತಗಳಲ್ಲಿ ನಡೆದಿದ್ದ ಚುನಾವಣೆಯಲ್ಲಿ ಸುಮಾರು 2 ಕೋಟಿ 30 ಲಕ್ಷ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು. ಜಾರ್ಖಂಡ್​ ಮುಖ್ಯಮಂತ್ರಿ ರಘುಬರ್​ ದಾಸ್​, ಜೆಮ್​ಶೆಡ್​ಪುರ ಪೂರ್ವ ಕ್ಷೇತ್ರದಿಂದ ಸ್ಪರ್ಧಿಸಿದ್ದರು. 81 ಕ್ಷೇತ್ರಗಳ ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಸರ್ಕಾರ ರಚಿಸಲು 41 ಸ್ಥಾನಗಳ ಬಹುತಮತ ಅವಶ್ಯಕತೆ ಇದೆ. 

ರಾಜ್ಯದಲ್ಲಿ ಒಟ್ಟು 5 ಹಂತಗಳಲ್ಲಿ ಮತದಾನ ನಡೆದಿತ್ತು. ನವೆಂಬರ್​ 30ರಂದು ಮೊದಲ ಹಂತ, ಡಿ.7ರಂದು 2ನೇ ಹಂತ, ಡಿ.12ರಂದು 3ನೇ ಹಂತ,ಡಿ.16ರಂದು 4ನೇ ಹಂತ ಹಾಗೂ ಡಿ.20 ರಂದು 5ನೇ ಹಂತದಲ್ಲಿ ಮತದಾನವಾಗಿತ್ತು.

2014 ರ ಜಾರ್ಖಂಡ್ ವಿಧಾನಸಭಾ ಚುನಾವಣೆಯಲ್ಲಿ 37 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿ, 5 ಸ್ಥಾನಗಳನ್ನು ಪಡೆದಿದ್ದ ಎಜೆಎಸ್​ಯುನೊಂದಿಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಬಿಜೆಪಿಯ ರಘುಬರ್​ ದಾಸ್​ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವಿಕರಿಸಿದ್ದರು. ಇದೀಗ ಎಜೆಎಸ್​ಯು, ಸ್ವತಂತ್ರವಾಗಿ ಕಣಕ್ಕಳಿದಿದೆ. ಬಿಜೆಪಿ ಈ ಬಾರಿ 81 ಕ್ಷೇತ್ರಗಳ ಪೈಕಿ 79 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಮತ್ತೊಮ್ಮೆ ಅಧಿಕಾರದ ಚುಕ್ಕಾಣಿ ಹಿಡಿಯಲು ಮುಂದಾಗಿದೆ. 

ಆದರೆ ಈ ಬಾರಿ ಜೆಎಂಎಂ ಮುಖಂಡ ಹೇಮಂತ್ ಸೊರೆನ್ ನೇತೃತ್ವದಲ್ಲಿ ಕಾಂಗ್ರೆಸ್ ಮತ್ತು ಆರ್‌ಜೆಡಿ ಸೇರಿಕೊಂಡು ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ಮುಂದಾಗಿವೆ. 43 ಸ್ಥಾನಗಳಲ್ಲಿ ಜೆಎಂಎಂ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ, ಕಾಂಗ್ರೆಸ್  31 ಮತ್ತು ಆರ್‌ಜೆಡಿ 7 ಸ್ಥಾನಗಳಲ್ಲಿ ಸ್ಪರ್ಧಿಸಿವೆ. 

Last Updated : Dec 23, 2019, 8:18 PM IST

ABOUT THE AUTHOR

...view details