ಅವಂತಿಪೋರಾ (ಜಮ್ಮು ಮತ್ತು ಕಾಶ್ಮೀರ): ಇಲ್ಲಿನ ತ್ರಾಲ್ ಪ್ರದೇಶದಲ್ಲಿ ಜನವರಿ 13ರಂದು ಉಗ್ರ ಬರವಣಿಗೆಯ ಪೋಸ್ಟರ್ಗಳು ಲಭ್ಯವಾಗಿದ್ದವು.
ಈ ಪ್ರಕರಣ ಸಂಬಂಧ ಎಫ್ಐಆರ್ ಸಹ ದಾಖಲಾಗಿ ಪೊಲೀಸರು ಕೃತ್ಯ ಎಸಗಿದವರ ಪತ್ತೆಗೆ ಬಲೆ ಬೀಸಿದ್ದರು. ಇದೀಗ ಈ ಕೃತ್ಯಕ್ಕೆ ಸಂಬಂಧಿಸಿದಂತೆ ಉಗ್ರರ ಜೊತೆ ನಂಟು ಹೊಂದಿದ್ದ ಐವರನ್ನು ಬಂಧಿಸಲಾಗಿದೆ.
ಬಂಧಿತರನ್ನು ಜಹಾಂಗೀರ್ ಅಹ್ಮದ್, ಅಯ್ಜಾಜ್ ಅಹ್ಮದ್, ತೊಯ್ಸೀಫ್ ಅಹ್ಮದ್ ಲೋನ್, ಸಬ್ಜಾರ್ ಅಹ್ಮದ್ ಭಟ್, ಖೈಸರ್ ಅಹ್ಮದ್ ದಾರ್ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಸ್ಥಳೀಯ ನಿವಾಸಿಗಳಾಗಿದ್ದಾರೆ.
ತ್ರಾಲ್ ಪ್ರದೇಶದ ಹಲವು ಭಾಗದಲ್ಲಿ ಪೊಲೀಸರು ತೀವ್ರ ರೀತಿಯ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಐವರನ್ನು ಬಂಧಿಸಲಾಗಿದೆ. ಅಲ್ಲದೆ ಬಂಧಿತರಿಂದ ಲ್ಯಾಪ್ಟಾಪ್, ಪ್ರಿಂಟರ್, ಪ್ರಿಂಟಿಂಗ್ಗೆ ಬೇಕಾದ ವಸ್ತುಗಳು, ಪೋಸ್ಟರ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನು ಓದಿ:ದಟ್ಟ ಅರಣ್ಯದಲ್ಲಿದ್ದ ಉಗ್ರಗಾಮಿ ಅಡಗುತಾಣ ಧ್ವಂಸ ಮಾಡಿದ ಯೋಧರು