ಶ್ರೀನಗರ: ವಿಶೇಷ ಸ್ಥಾನಮಾನ ರದ್ದತಿಯ ಬಳಿಕ ಸಂಪೂರ್ಣ ಸ್ತಬ್ದವಾಗಿದ್ದ ಜಮ್ಮು ಕಾಶ್ಮೀರ ಸದ್ಯ ಸಹಜ ಸ್ಥಿತಿಯತ್ತ ಮರಳಿದ್ದು, ಜೊತೆಯಲ್ಲೇ ಪ್ರವಾಸಿಗರಿಗೂ ಮುಕ್ತವಾಗಿದೆ.
ಪ್ರವಾಸಿಗರ ಆಗಮನಕ್ಕೆ ಇದ್ದ ನಿರ್ಬಂಧವನ್ನು ಜಮ್ಮು ಕಾಶ್ಮೀರ ಗವರ್ನರ್ ಸತ್ಯಪಾಲ್ ಮಲಿಕ್ ಹಿಂಪಡೆದು ಅಧಿಕೃತ ಘೋಷಣೆ ಹೊರಡಿಸಿದ್ದಾರೆ. ಆಗಸ್ಟ್ 2ರಂದು ಪ್ರವಾಸಿಗರಿಗೆ ನಿರ್ಬಂಧವನ್ನು ಹೇರಲಾಗಿತ್ತು. ಸುಮಾರು ಎರಡು ತಿಂಗಳ ನಿರ್ಬಂಧ ಸದ್ಯ ತೆರವಾಗಿದೆ.