ಕರ್ನಾಟಕ

karnataka

ETV Bharat / bharat

ಕಣಿವೆನಾಡಲ್ಲಿ ಮುಂದುವರೆದ ಗುಂಡಿನ ಮೊರೆತ, ಉಗ್ರರಿಗಾಗಿ ಶೋಧ - ರೆಬ್ಬಾನ್ ಎನ್​ಕೌಂಟರ್

ಜಮ್ಮು ಕಾಶ್ಮೀರದಲ್ಲಿ ಉಗ್ರರು ಮತ್ತು ಸೇನೆ ನಡುವೆ ಗುಂಡಿನ ಕಾಳಗ ನಡೆಯುತ್ತಿದ್ದು, ಭಯೋತ್ಪಾದಕರಿಗಾಗಿ ಶೋಧ ಕಾರ್ಯ ಮುಂದುವರೆದಿದೆ.

jk-encounter-in-sopore-district-barahmulla
ಕಣಿವೆನಾಡಲ್ಲಿ ಮುಂದುವರೆದ ಗುಂಡಿನ ಮೊರೆತ

By

Published : Jul 12, 2020, 7:01 AM IST

Updated : Jul 12, 2020, 7:41 AM IST

ಶ್ರೀನಗರ (ಜಮ್ಮು ಕಾಶ್ಮೀರ): ಕಣಿವೆ ನಾಡಿನಲ್ಲಿ ಗುಂಡಿನ ಮೊರೆತ ಕೇಳಿ ಬಂದಿದ್ದು, ಉಗ್ರರು ಹಾಗೂ ಸೇನೆಯ ನಡುವಿನ ಕಾದಾಟ ಮುಂದುವರೆದಿದೆ.

ಸೊಪೊರ್​ನ ರೆಬ್ಬಾನ್​​ ಎಂಬಲ್ಲಿ ಬೆಳ್ಳಂಬೆಳಗ್ಗೆ ಉಗ್ರರು ಹಾಗೂ ಸಿಆರ್​ಪಿಎಫ್​​ ಯೋಧರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದೆ. ಈ ಹಿಂದೆ ಜೂನ್​ 25ರಂದು ಸೊಪೊರೆಯಲ್ಲಿ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಉಗ್ರರು ಹತರಾಗಿ, ಯೋಧರಿಬ್ಬರು ಗಾಯಗೊಂಡಿದ್ದರು.

ಇಂದು ಮತ್ತೆ ಉಗ್ರರು ಮತ್ತು ಸೇನೆ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Last Updated : Jul 12, 2020, 7:41 AM IST

ABOUT THE AUTHOR

...view details