ಜಮ್ಮು- ಕಾಶ್ಮೀರ:ಲಷ್ಕರ್- ಇ -ತೊಯ್ಬಾ (ಎಲ್‌ಇಟಿ) ಸಂಘಟನೆಯ ಮೂವರು ಉಗ್ರರನ್ನು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆ ಬಂಧಿಸಿದೆ.
ಮೂವರು ಎಲ್‌ಇಟಿ ಉಗ್ರರ ಬಂಧನ.. ಡ್ರೋನ್ ಮೂಲಕ ಪಾಕ್ ಕಳುಹಿಸಿದ್ದ ಶಸ್ತ್ರಾಸ್ತ್ರ ವಶಕ್ಕೆ - ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆ
ಜಮ್ಮು ಮತ್ತು ಕಾಶ್ಮೀರದ ರಾಜೌರಿ ಜಿಲ್ಲೆಯಲ್ಲಿ ಮೂವರು ಎಲ್‌ಇಟಿ ಉಗ್ರರನ್ನು ಬಂಧಿಸಿರುವ ಭದ್ರತಾ ಪಡೆ, ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಕಳುಹಿಸಿದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದೆ.
ಮೂವರೂ ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಸೇರಿದವರಾಗಿದ್ದು, ಅವರನ್ನು ರಾಹಿಲ್ ಬಶೀರ್, ಅಮೀರ್ ಜಾನ್ ಮತ್ತು ಹಫೀಜ್ ಯೂನಿಸ್ ವಾನಿ ಎಂದು ಗುರುತಿಸಲಾಗಿದೆ. ಪಾಕಿಸ್ತಾನದಿಂದ ಡ್ರೋನ್‌ಗಳ ಮೂಲಕ ಕಳುಹಿಸಿದ ಶಸ್ತ್ರಾಸ್ತ್ರಗಳನ್ನು ಪಡೆಯಲು ಅವರು ರಾಜೌರಿಗೆ ಹೋಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತ ಉಗ್ರರಿಂದ ಎರಡು ಎಕೆ -56 ರೈಫಲ್‌ಗಳು, ಎರಡು ಚೀನೀ ಪಿಸ್ತೂಲ್‌ಗಳು, ನಾಲ್ಕು ಗ್ರೆನೇಡ್‌ಗಳು ಸೇರಿದಂತೆ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಮತ್ತು 1 ಲಕ್ಷ ರೂ. ನಗದನ್ನು ಭದ್ರತಾ ಪಡೆ ವಶಪಡಿಸಿಕೊಂಡಿದೆ ಎಂದು ಜಮ್ಮು ವಲಯದ ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್ ಮುಖೇಶ್ ಸಿಂಗ್ ಮಾಹಿತಿ ನೀಡಿದ್ದಾರೆ.