ಕರ್ನಾಟಕ

karnataka

ETV Bharat / bharat

ಚಂದ್ರಯಾನ-2ರ ಹಿಂದೆ ಜಿತೇಂದ್ರನಾಥ್​ ಕೈಚಳಕ... ಅಸ್ಸೋಂನ ಪುತ್ರನ ಸಾಧನೆಗೆ ಹೆತ್ತವರು ಫುಲ್​ಖುಷ್​​..! - ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ

ಜುಲೈ 22ರ ಮಧ್ಯಾಹ್ನ 2.43ಕ್ಕೆ ಸರಿಯಾಗಿ ಆಂಧ್ರ ಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ರಾಕೆಟ್ ಉಡಾವಣೆಯಾಗಲಿದೆ.

ಜಿತೇಂದ್ರನಾಥ್

By

Published : Jul 21, 2019, 8:50 PM IST

ನವದೆಹಲಿ:ಬಾಹ್ಯಾಕಾಶ ಕ್ಷೇತ್ರದಲ್ಲಿ ಮತ್ತೊಂದು ಮಹತ್ತರ ಮೈಲಿಗಲ್ಲು ಸ್ಥಾಪಿಸಲು ಭಾರತ ಸಜ್ಜಾಗಿದೆ. ಚಂದ್ರಯಾನ-2ರ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ದೇಶದ ಕೀರ್ತಿ ಪತಾಕೆಯನ್ನು ಹಾರಿಸಲು ಕ್ಷಣಗಣನೆ ಆರಂಭವಾಗಿದೆ.

ಜುಲೈ 22ರ ಮಧ್ಯಾಹ್ನ 2.43ಕ್ಕೆ ಸರಿಯಾಗಿ ಆಂಧ್ರ ಪ್ರದೇಶದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಚಂದ್ರಯಾನ-2 ರಾಕೆಟ್ ಉಡಾವಣೆಯಾಗಲಿದೆ. ಇಡೀ ವಿಶ್ವವೇ ಕಾತರದಿಂದ ಕಾದಿರುವ ಈ ಮಹತ್ವದ ಯೋಜನೆಯ ಹಿಂದೆ ಕೆಲಸ ಮಾಡಿದ ಹಲವಾರು ಮಂದಿಯಲ್ಲಿ ಮುಂಚೂಣಿಯಲ್ಲಿರುವ ಹೆಸರು ಡಾ.ಜಿತೇಂದ್ರನಾಥ್ ಗೋಸ್ವಾಮಿ.

ವಿಜ್ಞಾನಿ ಡಾ.ಜಿತೇಂದ್ರನಾಥ್ ಗೋಸ್ವಾಮಿ

ಯಾರು ಈ ಜಿತೇಂದ್ರನಾಥ್ ಗೋಸ್ವಾಮಿ ಎಂದು ಹುಡುಕುತ್ತಾ ಹೋದರೆ ಅಸ್ಸೋಂಗೆ ನಾವು ತಲುಪುತ್ತೇವೆ. ಹೌದು, ಅಸ್ಸೋಂನ ಜೋರ್ಹತ್ ಜಿಲ್ಲೆಯ ಬೋರ್ಬೆಟಾದ ನಿವಾಸಿ ಡಾ.ಜಿತೇಂದ್ರನಾಥ್​ ಗೋಸ್ವಾಮಿ ಸದ್ಯ ಉಡಾವಣೆಗೆ ಸಜ್ಜಾಗಿರುವ ಚಂದ್ರಯಾನ-2ರ ಹಿಂದಿರುವ ಬಹುದೊಡ್ಡ ಕೈ.

ಅಸ್ಸೋಂ ವಿಧಾನಸಭಾ ಸ್ಪೀಕರ್​​ ಹಿತೇಂದ್ರನಾಥ್​ ಗೋಸ್ವಾಮಿಯ ಹಿರಿಯಣ್ಣ ಈ ಜಿತೇಂದ್ರಾನಥ್​ ಗೋಸ್ವಾಮಿ, ಇವರು ಪ್ರಾಥಮಿಕ ಶಿಕ್ಷಣವನ್ನು ಬೊರ್ಬೆಟಾ ಪಬ್ಲಿಕ್ ಸ್ಕೂಲ್​ನಲ್ಲಿ ಪೂರೈಸಿದ ಬಳಿಕ ಜೋರ್ಹತ್​ನ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಂದಿನ ಶಿಕ್ಷಣ ಪಡೆಯುತ್ತಾರೆ.

ಜಿತೇಂದ್ರನಾಥ್​ ಹುಟ್ಟೂರು ಹಾಗೂ ಶಾಲೆಯ ದೃಶ್ಯಾವಳಿ

ಸಂಬಂಧಿಕರ ಮನೆಯಿಂದ ಶಾಲೆಗೆ ತೆರಳುತ್ತಿದ್ದ ಜಿತೇಂದ್ರನಾಥ್ ಗೋಸ್ವಾಮಿ, ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲೂ ಸದಾ ಮುಂದು. ಸದ್ಯ ಜಿತೇಂದ್ರನಾಥ್​ ಕಾರ್ಯಕ್ಕೆ ಮನೆಯವರು ಹಾಗೂ ಸಂಬಂಧಿಕರು ಅತ್ಯಂತ ಖುಷಿಯಾಗಿದ್ದಾರೆ. ಜಿತೇಂದ್ರನಾಥ್​ ಓದಿರುವ ಶಾಲೆಯ ಶಿಕ್ಷಕರು, ಆತ ಅಸ್ಸೋಂನ ಪುತ್ರ ಎಂದು ಹೆಮ್ಮೆಯಿಂದ ಹೇಳಿದ್ದಾರೆ.

ABOUT THE AUTHOR

...view details