ಮುಂಬೈ:ಟೆಲಿಕಾಂ ಇಂಡಸ್ಟ್ರಿಯಲ್ಲಿ ಈಗಾಗಲೇ ಹೊಸ ಶಕೆ ಆರಂಭ ಮಾಡಿರುವ ರಿಲಯನ್ಸ್ ಜಿಯೋ ಕೇವಲ ಫ್ರೀಪೇಯ್ಡ್ ಸೇವೆಗಳಿಗೆ ಮಾತ್ರ ಸಿಮೀತವಾಗಿತ್ತು. ಆದರೆ, ಇದೀಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ಜಿಯೋ ಸದ್ಯ ಫೋಸ್ಟ್ಪೇಯ್ಡ್ನಲ್ಲಿ ಏರ್ಟೆಲ್, ವೋಡಾಫೋನ್ ಐಡಿಯಾ ವಿರುದ್ಧ ಸಮರ ಸಾರಿದೆ.
ಏರ್ಟೆಲ್ - ವೋಡಾಫೋನ್ ಐಡಿಯಾ ಜತೆ ಪೋಸ್ಟ್ಪೇಯ್ಡ್ ಸಮರಕ್ಕಿಳಿದ ಜಿಯೋ!
ಪ್ರಿಪೇಯ್ಡ್ ಗ್ರಾಹಕರನ್ನ ಈಗಾಗಲೇ ತನ್ನತ್ತ ಸೆಳೆಯಲು ಯಶಸ್ವಿಯಾಗಿರುವ ರಿಲಯನ್ಸ್ ಜಿಯೋ ಇದೀಗ ಪೋಸ್ಟ್ಪೇಯ್ಡ್ ಗ್ರಾಹಕರನ್ನ ತನ್ನ ಬಲೆಗೆ ಸೆಳೆಯಲು ಯೋಜನೆ ರೂಪಿಸಿದೆ.
ಪೋಸ್ಟ್ಪೇಯ್ಡ್ ಸೇವೆ ನೀಡಲು ಮುಂದಾಗಿರುವ ಕಂಪನಿ ಜಿಯೋ ಪೋಸ್ಟ್ಪೇಯ್ಡ್ ಪ್ಲಸ್ ಪ್ಲಾನ್ ಘೋಷಣೆ ಮಾಡಿದೆ. ಇದರಲ್ಲಿ ನೆಟ್ಪ್ಲೇಕ್ಸ್, ಅಮೆಜಾನ್ ಪ್ರೈಂ ಹಾಗೂ ಡಿಸ್ನಿ + ಹಾಟ್‌ಸ್ಟಾರ್ ಜತೆಗೆ ಫ್ಯಾಮಿಲಿ ಪ್ಲಾನ್ ನೀಡಲು ಮುಂದಾಗಿದೆ. ಇಷ್ಟೆಲ್ಲ ಕೇವಲ 250 ರೂ. ಪ್ಲಾನ್ನಲ್ಲಿ ನೀಡುವ ಉದ್ದೇಶ ಹೊಂದಿದೆ. ಜತೆಗೆ 500 ಜಿಬಿ ಇಂಟರ್ನೆಟ್ ಹಾಗೂ ವೈಫೈ ಕಾಲಿಂಗ್ ಸೇವೆ ಇದೆ. ಈಗಾಗಲೇ 40 ಕೋಟಿ ಪ್ರಿಪೇಯ್ಡ್ ಗ್ರಾಹಕರನ್ನ ನಾವು ತಲುಪಿದೆ.
ಜಿಯೋ ಡೈರೆಕ್ಟರ್ ಆಕಾಶ್ ಅಂಬಾನಿ ಮಾತನಾಡಿದ್ದು, ಈ ಯೋಜನೆ ಶೀಘ್ರವೇ ಜಾರಿಗೊಳ್ಳಲಿದ್ದು, ಗ್ರಾಹಕರಿಗೆ ಖಂಡಿತವಾಗಿ ಇಷ್ಟವಾಗಲಿದೆ ಎಂದಿದ್ದಾರೆ. ಇದೀಗ ರೂ. 399, 599, 799, 999 ಮತ್ತು 1499ರ ಪ್ಲ್ಯಾನ್‌ಗಳನ್ನು ಬಿಡುಗಡೆ ಮಾಡಿದೆ.