ರಾಂಚಿ(ಜಾರ್ಖಂಡ್):ಕಳೆದ 24 ಗಂಟೆಗಳಲ್ಲಿ ರಾಜ್ಯದ ಹಲವಾರು ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದ್ದು, ಸಿಡಿಲ ಬಡಿತಕ್ಕೊಳಗಾಗಿ ಬರೋಬ್ಬರಿ 12 ಜನರು ಮೃತಪಟ್ಟಿದ್ದು, 11 ಜನರು ಗಾಯಗೊಂಡಿದ್ದಾರೆ. ಗಿರಿಡಿಹ್‌ನ ಬಾರ್ನಿ ಮತ್ತು ಅರಾರಾ ಪ್ರದೇಶದಲ್ಲಿ ಮಹಿಳೆ ಸೇರಿ ಮೂವರು ಯುವಕರು ಮೃತಪಟ್ಟಿದ್ದಾರೆ.
ಭೋಜಾಹದ ಕರ್ನಾಪುರ ಪಂಚಾಯತ್‌ನಲ್ಲಿ ಲಲಿತಾ ದೇವಿ ಎಂಬ ಮಹಿಳೆ ಹಾಗೂ ಓರ್ವ ಬಾಲಕಿ ಮೃತಪಟ್ಟಿದ್ದು, ರೈತನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ. ಇನ್ನು ಲೋಹರ್‌ದಾಗ್ ಪ್ರದೇಶದಲ್ಲಿ ಓರ್ವ ಮಹಿಳೆ ಮತ್ತು ಓರ್ವ ಪುರುಷ ಸಾವಿಗೀಡಾಗಿದ್ದು, ಐದು ಮಕ್ಕಳು ಮಿಂಚಿನ ಸೆಳೆತಕ್ಕೆ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.