ಜಾರ್ಖಂಡ್:ಕಳೆದ ತಿಂಗಳು ಆರು ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಮೂವರು ಅಪರಾಧಿಗಳಿಗೆ ಜಾರ್ಖಂಡ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಅಪ್ರಾಪ್ತೆಯ ಗ್ಯಾಂಗ್ ರೇಪ್ & ಮರ್ಡರ್: ಮೂವರಿಗೆ ಮರಣದಂಡನೆ ಶಿಕ್ಷೆ - ಜಾರ್ಖಂಡ್ ನ್ಯಾಯಾಲಯ
ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದೇದಲ್ಲದೆ, ಆಕೆಯನ್ನು ಸುಟ್ಟು ಕೊಂದಿದ್ದ ಕಾಮುಕರಿಗೆ ಜಾರ್ಖಂಡ್ ನ್ಯಾಯಾಲಯ ಮರಣದಂಡನೆ ಶಿಕ್ಷೆ ವಿಧಿಸಿದೆ.
ಅತ್ಯಾಚಾರಿಗಳಿಗೆ ಮರಣ ದಂಡನೆ
ಅಪರಾಧಿಗಳಾದ ಮೀಥು ರೈ, ಪಂಕಜ್ ಮೊಹಾಲಿ ಹಾಗೂ ಅಕ್ಷಯ್ ರೈಗೆ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ತೌಫಿಕುಲ್ ಹಸನ್, ಮರಣದಂಡನೆ ಶಿಕ್ಷೆ ಹಾಗೂ ತಲಾ 50,000 ರೂ. ದಂಡ ವಿಧಿಸಿದ್ದಾರೆ.
ಫೆಬ್ರವರಿ 7ರಂದು ದುಮ್ಕಾದ ರಾಮ್ಗರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಮಹೂಬಾನಾ ಎಂಬ ಪ್ರದೇಶದಲ್ಲಿ ಅಪ್ರಾಪ್ತೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಆಕೆಯನ್ನು ಸುಟ್ಟು ಕೊಲ್ಲಲಾಗಿತ್ತು. ಈ ಸಂಬಂಧ ಫೆ. 12ರಂದು ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು, ಇವರ ವಿರುದ್ಧ ಪೋಕ್ಸೊ ಹಾಗೂ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು.