ಕರ್ನಾಟಕ

karnataka

ETV Bharat / bharat

ಜಾರ್ಖಂಡ್ ಕಲ್ಲಿದ್ದಲು ಹಗರಣ: ಅಕ್ಟೋಬರ್ 26ಕ್ಕೆ ಶಿಕ್ಷೆ ಆದೇಶ ಕಾಯ್ದಿರಿಸಿದ ಕೋರ್ಟ್​ - ಜಾರ್ಖಂಡ್ ಕಲ್ಲಿದ್ದಲು ಹಗರಣ

ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪ್ರಕರಣದಲ್ಲಿ ಮಾಜಿ ರಾಜ್ಯ ಸಚಿವ ದಿಲೀಪ್​ ರೇ(ಎಂಒಎಸ್) ಮತ್ತು ಇತರ ಐದು ಮಂದಿಗೆ ಶಿಕ್ಷೆ ವಿಧಿಸುವ ಆದೇಶವನ್ನು ದೆಹಲಿ ನ್ಯಾಯಾಲಯ ಬುಧವಾರ ಕಾಯ್ದಿರಿಸಿದೆ.

Jharkhand coal scam: Order on Ex-Minister Dilip Ray's sentence on Oct 26
ಜಾರ್ಖಂಡ್ ಕಲ್ಲಿದ್ದಲು ಹಗರಣ: ಶಿಕ್ಷೆ ಆದೇಶ ಅಕ್ಟೋಬರ್ 26ಕ್ಕೆ ಮುಂದೂಡಿಕೆ

By

Published : Oct 14, 2020, 1:43 PM IST

ನವದೆಹಲಿ:ಕಲ್ಲಿದ್ದಲು ಬ್ಲಾಕ್ ಹಂಚಿಕೆ ಪ್ರಕರಣದಲ್ಲಿ ಮಾಜಿ ರಾಜ್ಯ ಸಚಿವ ದಿಲೀಪ್​ ರೇ(ಎಂಒಎಸ್) ಮತ್ತು ಇತರ ಐದು ಮಂದಿಗೆ ಶಿಕ್ಷೆ ವಿಧಿಸುವ ಆದೇಶವನ್ನು ದೆಹಲಿ ನ್ಯಾಯಾಲಯ ಬುಧವಾರ ಕಾಯ್ದಿರಿಸಿದೆ.

ಅಕ್ಟೋಬರ್ 6 ರಂದು, ರೂಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ಭರತ್ ಪರಾಶರ್ ಅವರು, ಕಲ್ಲಿದ್ದಲು ಬ್ಲಾಕ್​ ನ ಹಂಚಿಕೆ ಸಂಬಂಧದ ವಿವಿಧ ಅನುಮಾನಗಳ ಹಿಂದೆ ಮೇಲ್ಕಂಡವರುಗಳ ನೆರಳಿದ್ದಿದ್ದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

1999 ರಲ್ಲಿ ಕಲ್ಲಿದ್ದಲು ಸಚಿವಾಲಯದ 14 ನೇ ಸ್ಕ್ರೀನಿಂಗ್ ಸಮಿತಿಯಿಂದ ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್ ಪರವಾಗಿ ಜಾರ್ಖಂಡ್‌ನ ಗಿರಿಡಿಹ್ ಜಿಲ್ಲೆಯಲ್ಲಿ 105.153 ಹೆಕ್ಟೇರ್ ರಾಷ್ಟ್ರೀಕೃತ ಮತ್ತು ಕೈಬಿಟ್ಟ ಕಲ್ಲಿದ್ದಲು ಗಣಿಗಾರಿಕೆ ಪ್ರದೇಶವನ್ನು ಹಂಚಿಕೆ ಮಾಡಲಾಗಿತ್ತು.

ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿದ್ದ ರೇ, ಕಲ್ಲಿದ್ದಲು ಸಚಿವಾಲಯದ ಇಬ್ಬರು ಹಿರಿಯ ಅಧಿಕಾರಿಗಳು, ಅಂದಿನ ಹೆಚ್ಚುವರಿ ಕಾರ್ಯದರ್ಶಿ ಪ್ರದೀಪ್ ಕುಮಾರ್ ಬ್ಯಾನರ್ಜಿ, ಮಾಜಿ ಸಲಹೆಗಾರ ಮತ್ತು ಕ್ಯಾಸ್ಟ್ರಾನ್ ಟೆಕ್ನಾಲಜೀಸ್ ಲಿಮಿಟೆಡ್ ನಿರ್ದೇಶಕ ಮಹೇಂದ್ರ ಕುಮಾರ್ ಅಗರ್ವಾಲಾ ಸಹ ತಪ್ಪಿತಸ್ಥರೆಂದು ಸಾಬೀತಾಗಿದೆ.

51 ಸಾಕ್ಷಿಗಳನ್ನ ವಿಚಾರಣೆಗೆ ಒಳಪಡಿಸಿ ಹೇಳಿಕೆ ದಾಖಲು ಮಾಡಿಕೊಳ್ಳಲಾಗಿತ್ತು. ಕಲ್ಲಿದ್ದಲು ಹಂಚಿಕೆಯಲ್ಲಿ ಸರ್ಕಾರಿ ಅಧಿಕಾರಿಗಳು ಹಾಗೂ ಇತರರು ಭಾಗಿಯಾಗಿ ಅವ್ಯವಹಾರ ನಡೆಸಿರುವುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ಪೂರ್ಣಗೊಳಿಸಿರುವ ನ್ಯಾಯಾಲಯ ಅಕ್ಟೋಬರ್​​ 26ಕ್ಕೆ ತೀರ್ಪು ಕಾಯ್ದಿರಿಸಿದೆ.

ABOUT THE AUTHOR

...view details