ಕರ್ನಾಟಕ

karnataka

ETV Bharat / bharat

ಜಾರ್ಖಂಡ್ ಕೃಷಿ ಸಚಿವರಿಗೂ ಕೋವಿಡ್ ದೃಢ - ಜಾರ್ಖಂಡ್ ಕೃಷಿ ಸಚಿವ ಬದಲ್ ಪತ್ರಲೇಖ್

ಜಾರ್ಖಂಡ್ ಕೃಷಿ ಸಚಿವ ಬಾದಲ್ ಪತ್ರಲೇಖ್ ಅವರಿಗೆ ಕೋವಿಡ್- 19 ದೃಢಪಟ್ಟಿದ್ದು, ತಮ್ಮ ಜೊತೆ ಸಂಪರ್ಕ ಹೊಂದಿದವರು ಕ್ವಾರಂಟೈನ್ ಗೆ ಒಳಗಾಗುವಂತೆ ಅವರು ಹೇಳಿದ್ದಾರೆ.

ಜಾರ್ಖಂಡ್ ಕೃಷಿ ಸಚಿವ ಬದಲ್ ಪತ್ರಲೇಖ್
ಜಾರ್ಖಂಡ್ ಕೃಷಿ ಸಚಿವ ಬದಲ್ ಪತ್ರಲೇಖ್

By

Published : Aug 23, 2020, 10:09 AM IST

ರಾಂಚಿ: ಜಾರ್ಖಂಡ್ ಕೃಷಿ ಸಚಿವ ಬದಲ್ ಪತ್ರಲೇಖ್ ಅವರಿಗೆ ಕೋವಿಡ್- 19 ದೃಢಪಟ್ಟಿದ್ದು, ನನ್ನ ವರದಿ ಪಾಸಿಟಿವ್ ಬಂದಿದೆ ಎಂದು ಸಚಿವರು ತಿಳಿಸಿದ್ದಾರೆ.

ಈ ಕುರಿತು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಸಚಿವರು, ನಾನು ನಿನ್ನೆ ಕೊರೊನಾ ವೈರಸ್ ಪರೀಕ್ಷೆಗೆ ಒಳಗಾಗಿದ್ದೆ. ಇದೀಗ ವರದಿ ಪಾಸಿಟಿವ್ ಬಂದಿದ್ದು, ತಮ್ಮ ಜೊತೆ ಸಂಪರ್ಕ ಹೊಂದಿದವರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮತ್ತು ಸ್ವಯಂ ಕ್ವಾರಂಟೈನ್ ಗೆ ಒಳಗಾಗುವಂತೆ ಮನವಿ ಮಾಡಿದ್ದಾರೆ.

ಜಾರ್ಖಂಡ್ ನ ಮಾಜಿ ಮುಖ್ಯಮಂತ್ರಿ ಮತ್ತು ಮುಕ್ತಿ ಮೋರ್ಚಾ (ಜೆಎಂಎಂ) ಸಂಸ್ಥಾಪಕ ಶಿಬು ಸೊರೇನ್ ಮತ್ತು ಅವರ ಪತ್ನಿಗೂ ಕೊರೊನಾ ಸೋಂಕು ತಗುಲಿದ್ದು, ಅವರು ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಶನಿವಾರ ಪತ್ರಲೇಖ್ ಹಾರೈಸಿದ್ದರು.

ABOUT THE AUTHOR

...view details