ಕರ್ನಾಟಕ

karnataka

ETV Bharat / bharat

ನಕ್ಸಲರು-ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ : ಭದ್ರತಾ ಸಿಬ್ಬಂದಿ,ಪೊಲೀಸ್​ ಹುತಾತ್ಮ - ನಕ್ಸಲರೊಂದಿಗಿನ ಗುಂಡಿನ ಕಾಳಗದಲ್ಲಿ ಇಬ್ಬರು ಸಾವು

ಜಾರ್ಖಂಡ್​ನ ಕಾರೈಕೇಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಕ್ಸಲರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಓರ್ವ ಭದ್ರತಾ ಸಿಬ್ಬಂದಿ ಮತ್ತು ಪೊಲೀಸ್​ ಮಾಹಿತಿದಾರ ಹುತಾತ್ಮರಾಗಿದ್ದಾರೆ.

Jharkhand: 2 policemen killed in encounter
ನಕ್ಸಲರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಕಾಳಗ

By

Published : May 31, 2020, 11:11 PM IST

ಚೈಬಾಸಾ (ಜಾರ್ಖಂಡ್​): ಕಾರೈಕೇಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭದ್ರತಾ ಪಡೆಗಳು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಹುತಾತ್ಮರಾಗಿದ್ದಾರೆ.

ಗುಂಡಿನ ಕಾರ್ಯಾಚರಣೆ ವೇಳೆ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ನಾಥುರಾಮ್ ಮೀನಾ ಅವರ ಅಂಗರಕ್ಷಕ ಮತ್ತು ಪೊಲೀಸ್ ಮಾಹಿತಿದಾರ ನಕ್ಸಲರ ಗುಂಡಿಗೆ ಬಲಿಯಾಗಿದ್ದಾರೆ ಎಂದು ಕೊಲ್ಹಾನ್ ಡಿಐಜಿ ರಾಜೀವ್ ರಂಜನ್ ಖಚಿತಪಡಿಸಿದ್ದಾರೆ.

ಇಬ್ಬರು ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details