ಝಾನ್ಸಿ(ಉತ್ತರಪ್ರದೇಶ) :ಕೊರೊನಾ ವೈರಸ್ ಮತ್ತು ಮಳೆ ಎರಡರಿಂದ ಪೊಲೀಸರನ್ನು ರಕ್ಷಿಸಿಸುವಂತಹ ಪಿಪಿಇ ಕಿಟ್‌ನ ಉತ್ತರಪ್ರದೇಶದ ಝಾನ್ಸಿ ಜಿಲ್ಲೆಯ ಪೊಲೀಸ್ ಸಿಬ್ಬಂದಿ ಕಂಡುಹಿಡಿದ್ದಾರೆ.
ಮೊದಲಿಗೆ ಪೊಲೀಸರು ಸ್ಥಳೀಯ ಮಾರಾಟಗಾರರಿಂದ 1,000 ಕಿಟ್ಗಳನ್ನು ತರಿಸಿ, ಅವನ್ನು ಮೊದಲ ಹಂತದಲ್ಲಿ ವಿವಿಧ ಘಟಕಗಳಿಗೆ ವಿತರಿಸಲಿದ್ದಾರೆ. ಬಳಿಕ ಅಗತ್ಯತೆಗೆ ಅನುಗುಣವಾಗಿ ಹೆಚ್ಚಿನ ಕಿಟ್ಗಳನ್ನು ತಯಾರಿಸಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ರು.
"ನಾನು ಈ ಕಲ್ಪನೆಯ ಕಿಟ್ಗಳನ್ನು 15 ದಿನಗಳ ಹಿಂದೆಯೇ ಪಡೆದುಕೊಂಡಿದ್ದೇನೆ. ಗಡಿಯಲ್ಲಿ ನಾನು ಕರ್ತವ್ಯದಲ್ಲಿದ್ದಾಗ ಇದನ್ನು ವೈಯಕ್ತಿಕವಾಗಿ ಪ್ರಯತ್ನಿಸಿದೆ. ನಂತರ ಇದು ಆರಾಮದಾಯಕವಾಗಿ ಕಂಡು ಬಂದಿದೆ" ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಶ್ರೀವಾಸ್ತವ್ ತಿಳಿಸಿದರು.
"ಇದನ್ನು ಅಭಿವೃದ್ಧಿಪಡಿಸುವಾಗ ನಾವು ಹಾಟ್ಸ್ಪಾಟ್ ಸ್ಥಳಗಳು, ಕ್ವಾರಂಟೈನ್ ಪ್ರದೇಶ, ಪೊಲೀಸರ ಮೇಲೆ ದಾಳಿ ಮತ್ತು ಬಂಧನವನ್ನು ಗಮನದಲ್ಲಿಟ್ಟುಕೊಂಡು, ಅಗತ್ಯತೆಗೆ ಅನುಗುಣವಾಗಿ ಸಿದ್ದಪಡಿಸಿದ್ದೇವೆ ಎಂದು ಎಎಸ್ಪಿ ಹೇಳಿದರು.
ಈ ಕಿಟ್‌ನ ಬೆಲೆ ಕೇವಲ 400 ರೂ. ಆಗಿದೆ. ಇದು ಕೊರೊನಾ ವೈರಸ್ ರೋಗದ ವಿರುದ್ಧ ಹೋರಾಡುವುದಲ್ಲದೇ, ಮಳೆಯಿಂದಲೂ ಪೊಲೀಸರನ್ನು ರಕ್ಷಿಸುತ್ತದೆ.