ಝಾಲಾವಾಡ್(ರಾಜಸ್ಥಾನ):ವೈದ್ಯಕೀಯ ಕಾಲೇಜಿನ್ ಡೀನ್ ಕೋವಿಡ್ ವಾರ್ಡ್ನಲ್ಲಿ ಭದ್ರತಾ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿ, ನಿಂದಿಸಿದ ಆರೋಪ ಪ್ರಕರಣ ಝಾಲಾವಾಡ್ ಜಿಲ್ಲೆಯಲ್ಲಿ ನಡೆದಿದೆ.
ಎಕ್ಸ್ಕ್ಲೂಸಿವ್: ವೈದ್ಯಕೀಯ ಕಾಲೇಜಿನ ಡೀನ್ನಿಂದ ಭದ್ರತಾ ಸಿಬ್ಬಂದಿ ಮೇಲೆ ದರ್ಪ ಆರೋಪ - ಡೀನ್ ದರ್ಪ ಆರೋಪ
ಕ್ಷುಲ್ಲಕ ವಿಚಾರಕ್ಕೆ ವೈದ್ಯಕೀಯ ಕಾಲೇಜಿನ ಡೀನ್ ಕೋವಿಡ್ ವಾರ್ಡ್ನ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಆರೋಪ ಪ್ರಕರಣ ರಾಜಸ್ಥಾನದ ಝಾಲಾವಾಡದಲ್ಲಿ ನಡೆದಿದೆ.
ಡೀನ್ನಿಂದ ಹಲ್ಲೆ
ಜವಾಹರ್ ಮೆಡಿಕಲ್ ಕಾಲೇಜಿನ ಡೀನ್ ಡಾ. ದೀಪಕ್ ಗುಪ್ತಾ ಹಲ್ಲೆ ನಡೆಸಿರುವ ವಿಡಿಯೋ 'ಈಟಿವಿ ಭಾರತ' ಕ್ಯಾಮರಾದಲ್ಲಿ ಸೆರೆಯಾಗಿದೆ.
ಆಸ್ಪತ್ರೆಯ ವೈದ್ಯರು ಕೋವಿಡ್ ವಾರ್ಡ್ ಬಳಿ ನರ್ಸಿಂಗ್ ಸಿಬ್ಬಂದಿ ಮತ್ತು ವಾರ್ಡ್ ಬಾಯ್ಗಳಿಲ್ಲ ಎಂದು ದೂರು ನೀಡಿದ್ದರು. ಈ ವೇಳೆ ಸ್ಥಳಕ್ಕ ಧಾವಿಸಿದ ಡೀನ್ ಡಾ. ಗುಪ್ತಾ ವಾರ್ಡ್ ಭದ್ರತಾ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿ, ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗ್ತಿದೆ.