ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರ ಪೊಲೀಸರಿಂದ ಜೈಷ್ ಎ ಭಯೋತ್ಪಾದಕನ ಬಂಧನ - ಜಮ್ಮು ಕಾಶ್ಮೀರದ ಸುದ್ದಿ

3.50 ಲಕ್ಷ ರೂಪಾಯಿ ನಗದು ಹಾಗೂ ಗ್ರೆನೇಡ್​​ ಹೊಂದಿದ್ದ ಓರ್ವ ಭಯೋತ್ಪಾದಕನನ್ನು ಜಮ್ಮು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

jammu kashmir police
ಜಮ್ಮು ಕಾಶ್ಮೀರ ಪೊಲೀಸ್

By

Published : Nov 30, 2020, 4:45 PM IST

ಕುಪ್ವಾರಾ (ಜಮ್ಮು ಕಾಶ್ಮೀರ): ಜೈಷ್ ಎ ಮೊಹಮ್ಮದ್ ಸಂಘಟನೆಗೆ ಸೇರಿದ ಓರ್ವ ಭಯೋತ್ಪಾದಕನನ್ನು ಜಮ್ಮು ಕಾಶ್ಮೀರ ಪೊಲೀಸರು ಕುಪ್ವಾರಾದಲ್ಲಿ ಸೋಮವಾರ ಬಂಧಿಸಿದ್ದಾರೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.

ಬಂಧಿತ ಭಯೋತ್ಪಾದಕನಿಂದ ಸುಮಾರು 3.50 ಲಕ್ಷ ರೂಪಾಯಿ ನಗದು ಹಾಗೂ ಗ್ರೆನೇಡ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

ನವೆಂಬರ್ 19ರಂದು ಜಮ್ಮು ಕಾಶ್ಮೀರದ ನಗ್ರೋಟಾದಲ್ಲಿ ನಾಲ್ವರು ಜೈಷ್ ಎ ಮೊಹಮ್ಮದ್ ಸಂಘಟನೆಯ ನಾಲ್ವರು ಭಯೋತ್ಪಾದಕರನ್ನು ಭದ್ರತಾ ಪಡೆ ಹತ್ಯೆ ಮಾಡಿತ್ತು. ಈ ವೇಳೆ 11 ಎಕೆ-47, ಮೂರು ಪಿಸ್ತೂಲ್​ಗಳು, 29 ಗ್ರೆನೇಡ್​ಗಳು ಹಾಗೂ ಹಲವು ಸಾಧನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು.

ಈ ಸೇನಾ ಕಾರ್ಯಾಚರಣೆಗೆ ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಈಗ ಸದ್ಯಕ್ಕೆ ಜಮ್ಮು ಕಾಶ್ಮೀರದಲ್ಲಿ ಜಿಲ್ಲಾ ಅಭಿವೃದ್ಧಿ ಮಂಡಳಿಗಳ ಚುನಾವಣೆಗಳು ಮೊದಲ ಬಾರಿಗೆ ನಡೆಯುತ್ತಿದ್ದು, ಡಿಸೆಂಬರ್ 19ಕ್ಕೆ ಎಂಟು ಹಂತದ ಚುನಾವಣೆಗಳು ಕೊನೆಗೊಳ್ಳಲಿವೆ. ಇದಕ್ಕೆ ಭಾರಿ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಲಾಗಿದೆ.

ABOUT THE AUTHOR

...view details