ಕರ್ನಾಟಕ

karnataka

ETV Bharat / bharat

ಪುಲ್ವಾಮಾದ ಕಾರು​ ಬಾಂಬ್ ದಾಳಿ ಸಂಚಿನ ಹಿಂದೆ ಜೈಶ್-ಎ-ಮೊಹಮ್ಮದ್ ಕೈವಾಡ: ಪೊಲೀಸರಿಂದ ಮಾಹಿತಿ - ಕಾರು​ ಬಾಂಬ್ ದಾಳಿ ಹಿಂದೆ ಜೈಶ್-ಎ-ಮೊಹಮ್ಮದ್ ಕೈವಾಡ

ಪುಲ್ವಾಮಾದಲ್ಲಿ ಕಾರು ಬಾಂಬ್ ದಾಳಿಯ ಸಂಚಿನ ಹಿಂದೆ ಜೈಶ್-ಎ-ಮೊಹಮ್ಮದ್ ಸಂಘಟನೆ ಪ್ರಮುಖ ಪಾತ್ರ ವಹಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

Hizbul behind failed car bomb attack
ಪುಲ್ವಾಮಾದ ಕಾರು​ ಬಾಂಬ್ ದಾಳಿ

By

Published : May 28, 2020, 3:30 PM IST

ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಕಾರು ಬಾಂಬ್ ದಾಳಿಯ ಸಂಚಿನ ಹಿಂದೆ ಜೈಶ್-ಎ-ಮೊಹಮ್ಮದ್ ಉಗ್ರ ಸಂಘಟನೆ ಪ್ರಮುಖ ಪಾತ್ರ ವಹಿಸಿದೆ ಎಂದು ಕಾಶ್ಮೀರ ಪೊಲೀಸರು ತಿಳಿಸಿದ್ದಾರೆ.

ವಿಜಯ್ ಕುಮಾರ್, ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ

ಜೈಶ್-ಎ-ಮೊಹಮ್ಮದ್ ಸಂಘಟನೆ ಭಯೋತ್ಪಾದಕ ಚಟುವಟಿಕೆ ನಡೆಸಲಿದೆ ಎಂಬ ಮಾಹಿತಿ ಬಂದಿತ್ತು. ಆದ್ದರಿಂದ ಐಇಡಿ ಹೊತ್ತ ಕಾರಿನ ಚಾಲಕ ಆದಿಲ್ ಹಿಜ್ಬುಲ್ ಮುಜಾಹಿದ್ದೀನ್ ಉಗ್ರನಾಗಿದ್ದು, ಜೈಶ್-ಎ-ಮೊಹಮ್ಮದ್ ಜೊತೆ ಸಂಪರ್ಕದಲ್ಲಿದ್ದ ಎಂದು ಶಂಕಿಸಲಾಗಿದೆ ಎಂದು ಕಾಶ್ಮೀರ ಪೊಲೀಸ್ ಮಹಾನಿರ್ದೇಶಕ ವಿಜಯ್ ಕುಮಾರ್ ಹೇಳಿದ್ದಾರೆ.

ಆದಿಲ್, ಭದ್ರತಾ ಪಡೆಗಳ ವಾಹನಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಉದ್ದೇಶಿಸಿದ್ದ. ಜೈಶ್-ಎ-ಮೊಹಮ್ಮದ್ ಇದರಲ್ಲಿ ಪ್ರಮುಖ ಪಾತ್ರ ವಹಿಸಿದೆ. ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆ ಇವರಿಗೆ ಸಹಾಯ ಮಾಡಿದೆ ಎಂದು ಮಾಹಿತಿ ನೀಡಿದ್ದಾರೆ.

ಐಇಡಿ ಸ್ಫೋಟಕ ಹೊತ್ತು ಪುಲ್ವಾಮಾಕ್ಕೆ ಬಂದ ಕಾರು... ಪೊಲೀಸ್-ಸೇನೆಯಿಂದ ತಪ್ಪಿತು ಭಾರಿ ಅನಾಹುತ!

ಈ ದಾಳಿಯು ಫೆಬ್ರವರಿ 2019ರ ಸಿಆರ್‌ಪಿಎಫ್ ಬೆಂಗಾವಲು ಪಡೆ ಮೇಲೆ ನಡೆಸಿದ ದಾಳಿಯಂತೆಯೇ ಇದೆಯೇ ಎಂದು ಕೇಳಿದಾಗ, ಖಂಡಿತವಾಗಿಯೂ ಇದು ಭದ್ರತಾ ಪಡೆ, ಪೊಲೀಸರ ವಾಹನವನ್ನು ಮಾತ್ರ ಗುರಿಯಾಗಿಸಿತ್ತು ಎಂದಿದ್ದಾರೆ. ಐಇಡಿ ಬಾಂಬ್​ ನಿಷ್ಕ್ರಿಯಗೊಳಿಸುವ ಮೂಲಕ ನಡೆಯಬಹುದಾದ ಅತಿ ದೊಡ್ಡ ಅನಾಹುತವನ್ನು ನಮ್ಮ ಪಡೆ ತಡೆದಿದೆ ಎಂದು ವಿಜಯ್ ಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details