ನವದೆಹಲಿ:ದೇಶದಲ್ಲಿ ನಡೆಯಬೇಕಾಗಿದ್ದ JEE,NEET ಸ್ಪರ್ಧಾತ್ಮಕ ಪರೀಕ್ಷೆ ಮುಂದೂಡಿಕೆ ಮಾಡಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕಾರಿಯಾ ಆದೇಶ ಹೊರಹಾಕಿದ್ದು, ಹೊಸ ದಿನಾಂಕ ಘೋಷಣೆ ಮಾಡಿದ್ದಾರೆ.
ಹೊಸದಾಗಿ ಘೋಷಣೆಯಾಗಿರುವ ದಿನಾಂಕದ ಪ್ರಕಾರ ಜೆಇಇ ಪರೀಕ್ಷೆ ಸೆಪ್ಟೆಂಬರ್ 1ರಿಂದ 6ರವರೆಗೆ ನಡೆಯಲಿದ್ದು, ಜೆಇಇ ಅಡ್ವಾನ್ಸ್ ಪರೀಕ್ಷೆ ಸೆಪ್ಟೆಂಬರ್ 27 ಹಾಗೂ ನೀಟ್ ಪರೀಕ್ಷೆ ಸೆಪ್ಟೆಂಬರ್ 13ರಂದು ನಡೆಯಲಿದೆ.
ದೇಶದಲ್ಲಿ ಕೊರೊನಾ ಅಬ್ಬರ ಜೋರಾಗಿದ್ದ ಕಾರಣ ಎಂಜಿನಿಯರಿಂಗ್ ಮತ್ತು ವೈದ್ಯಕೀಯ ಕೋರ್ಸ್ ಪ್ರವೇಶಕ್ಕಾಗಿ ನಡೆಯುವ ಜಂಟಿ ಪ್ರವೇಶ ಪರೀಕ್ಷೆ(ಜೆಇಇ) ಮತ್ತು ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ಎನ್ಇಇಟಿ) ಪರೀಕ್ಷೆ ಈ ಹಿಂದೆ ಕೂಡ ಮುಂದೂಡಿಕೆಯಾಗಿದ್ದವು.
ಟ್ವೀಟರ್ಹಲ್ಲಿ ವಿಡಿಯೋ ಹರಿಬಿಟ್ಟಿರುವ ಕೇಂದ್ರ ಸಚಿವರು, ಮಾಹಿತಿ ನೀಡಿದ್ದು, ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಠಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಪರೀಕ್ಷೆ ಮುಂದೂಡುವಂತೆ ವಿದ್ಯಾರ್ಥಿಗಳು, ಪೋಷಕರು ಈಗಾಗಲೇ ಸಲಹೆ ಸಹ ನೀಡಿದ್ದಾರೆ ಎಂದಿದ್ದಾರೆ. ಹೀಗಾಗಿ ಜುಲೈ 18ರಿಂದ 23ರವರೆಗೆ ನಿಗದಿಗೊಂಡಿದ್ದ ಜೆಇಇ ಪರೀಕ್ಷೆ ಹಾಗೂ ಜುಲೈ 26ರಂದು ನಡೆಯಬೇಕಾಗಿದ್ದ ನೀಟ್ ಪರೀಕ್ಷೆ ಇದೀಗ ರದ್ಧುಗೊಂಡಿವೆ. ಈ ಸಲ ಅತಿ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನಿರ್ಧರಿಸಿದ್ದು, ಆದರೆ ಕೊರೊನಾ ವೈರಸ್ ಇರುವ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.