ಕರ್ನಾಟಕ

karnataka

ETV Bharat / bharat

ಕೋವಿಡ್ ಮುನ್ನೆಚ್ಚರಿಕೆಯೊಂದಿಗೆ ದೇಶಾದ್ಯಂತ ಇಂದಿನಿಂದ ಜೆಇಇ ಪರೀಕ್ಷೆ ಆರಂಭ

ಇಂದಿನಿಂದ ಸೆಪ್ಟೆಂಬರ್ 6ರವರೆಗೆ ಜೆಇಇ ಹಾಗೂ ಸೆಪ್ಟೆಂಬರ್ 13ರಿಂದ ನೀಟ್ ಪರೀಕ್ಷೆಗಳು ನಡೆಯಲಿವೆ. ಜೆಇಇಗೆ 8.58 ಲಕ್ಷ ಮತ್ತು ನೀಟ್​​ಗೆ 15.97 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

jee
jee

By

Published : Sep 1, 2020, 11:13 AM IST

ನವದೆಹಲಿ:ಕೋವಿಡ್-19 ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಂಡು ಇತರ ಮುನ್ನೆಚ್ಚರಿಕಾ ಕ್ರಮಗಳೊಂದಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಇಂದಿನಿಂದ ಎಂಜಿನಿಯರಿಂಗ್ ಪ್ರವೇಶ ಪರೀಕ್ಷೆ ಜೆಇಇ ನಡೆಸುತ್ತಿದೆ.

ಒಡಿಶಾ, ಮಧ್ಯಪ್ರದೇಶ ಮತ್ತು ಛತ್ತೀಸ್​ಘಡ ಸರ್ಕಾರಗಳು ಸಾರಿಗೆ ವ್ಯವಸ್ಥೆ ಮಾಡುವುದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದು, ಸಾರಿಗೆ ಸೌಲಭ್ಯಗಳನ್ನು ಒದಗಿಸಲು ಪೋರ್ಟಲ್ ಪ್ರಾರಂಭಿಸಿವೆ.

ವಿದ್ಯಾರ್ಥಿಗಳಿಗೆ ಸಾರಿಗೆ ಸೌಲಭ್ಯ

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳಿಗೆ ಬೆಂಬಲ ನೀಡುವಂತೆ ಕೇಂದ್ರ ಶಿಕ್ಷಣ ಸಚಿವ ರಮೇಶ್ ಪೋಖ್ರಿಯಾಲ್ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದಾರೆ.

ಮುನ್ನೆಚ್ಚರಿಕೆಗಳೊಂದಿಗೆ ಜೆಇಇ ಪರೀಕ್ಷೆ

ಕೋವಿಡ್-19 ಮಧ್ಯೆ ಜೆಇಇ ಮತ್ತು ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್ ಮುಂದೂಡುವಂತೆ ಒತ್ತಡ ಬಂದಿತ್ತು. ಇಂದಿನಿಂದ ಸೆಪ್ಟೆಂಬರ್ 6ರವರೆಗೆ ಜೆಇಇ ಹಾಗೂ ಸೆಪ್ಟೆಂಬರ್ 13ರಿಂದ ನೀಟ್ ಪರೀಕ್ಷೆಗಳು ನಡೆಯಲಿವೆ.

ಜೆಇಇಗೆ 8.58 ಲಕ್ಷ ಮತ್ತು ನೀಟ್​​ಗೆ 15.97 ಲಕ್ಷ ಅಭ್ಯರ್ಥಿಗಳು ನೋಂದಾಯಿಸಿಕೊಂಡಿದ್ದಾರೆ.

ABOUT THE AUTHOR

...view details