ಪಾಟ್ನಾ: ಕಾಲೇಜಿಗೆ ಬುರ್ಖಾ ಧರಿಸಿ ಬರುವಂತಿಲ್ಲ ಎಂದು ಬಿಹಾರ ರಾಜ್ಯದ ಪಾಟ್ನಾದಲ್ಲಿರುವ ಜೆ.ಡಿ ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗೆ ನಿರ್ದೇಶನ ನೀಡಿದೆ.
ಬುರ್ಖಾ ಧರಿಸಿ ಬಂದರೆ ದಂಡ: ವಿದ್ಯಾರ್ಥಿಗಳಿಗೆ ಮಹಿಳಾ ಕಾಲೇಜು ಸೂಚನೆ - ಪಾಟ್ನಾದ ಜೆಡಿ ಮಹಿಳಾ ಕಾಲೇಜು
ವಿದ್ಯಾರ್ಥಿಗಳು ಶನಿವಾರ ಹೊರತುಪಡಿಸಿ ಪ್ರತಿನಿತ್ಯ ಕಾಲೇಜು ನಿಗದಿಪಡಿಸಿರುವ ಡ್ರೆಸ್ ಕೋಡ್ ಪಾಲಿಸಿ ಕಾಲೇಜಿಗೆ ಬರಬೇಕು. ಬುರ್ಖಾ ಧರಿಸಿ ಕಾಲೇಜಿಗೆ ಬರುವಂತಿಲ್ಲ ಎಂದು ಬಿಹಾರ ರಾಜ್ಯದ ಪಾಟ್ನಾದಲ್ಲಿರುವ ಜೆ.ಡಿ ಮಹಿಳಾ ಕಾಲೇಜು ನಿರ್ದೇಶನ ನೀಡಿದೆ.

ಬುರ್ಕಾ ಧರಿಸಿ ಬಂದರೆ ದಂಡ
ಪಾಟ್ನಾದ ಜೆ.ಡಿ ಮಹಿಳಾ ಕಾಲೇಜು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದು, ವಿದ್ಯಾರ್ಥಿಗಳು ಶನಿವಾರ ಹೊರತುಪಡಿಸಿ ಪ್ರತಿನಿತ್ಯ ಕಾಲೇಜು ನಿಗದಿಪಡಿಸಿರುವ ಡ್ರೆಸ್ ಕೋಡ್ ಪಾಲಿಸಿ ಕಾಲೇಜಿಗೆ ಬರಬೇಕು. ಜೊತೆಗೆ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬರುವಂತಿಲ್ಲ. ಈ ನಿಯಮಗಳನ್ನು ಉಲ್ಲಂಘಿಸಿದರೆ 250 ರೂ. ದಂಡ ವಿಧಿಸಲಾಗುವುದು ಎಂದು ಸೂಚನೆ ನೀಡಿದೆ.