ಕರ್ನಾಟಕ

karnataka

ETV Bharat / bharat

ಗುಂಡು ಹಾರಿಸಿ ದುಷ್ಕರ್ಮಿಗಳಿಂದ ಜೆಡಿಯು ಮುಖಂಡನ ಹತ್ಯೆ - ಗುಂಡಿನ ಶಬ್ದ

ಆಡಳಿತಾರೂಢ ಜೆಡಿಯುನ ವಾರ್ಡ್ ಅಧ್ಯಕ್ಷರಾಗಿದ್ದ 45 ವರ್ಷದ ವ್ಯಕ್ತಿಯನ್ನು ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ. ಮನೆಯಿಂದ ಹೊರ ಹೋಗುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಪರಾರಿಯಾಗಿದ್ದಾರೆ.

JD(U) ward president shot dead in Bihar's Faridpur
ಸಾಂದರ್ಭಿಕ ಚಿತ್ರ

By

Published : Jun 20, 2020, 4:45 PM IST

ಜಮಾಲ್‌ಪುರ(ಬಿಹಾರ): ಜಮಾಲ್‌ಪುರ್​​ ಸಮೀಪದ ಫರೀದ್‌ಪುರದಲ್ಲಿ ಜನತಾ ದಳದ (ಯುನೈಟೆಡ್) ಸ್ಥಳೀಯ ಮುಖಂಡನೋರ್ವನನ್ನು ಯಾರೋ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದು ಪರಾರಿಯಾದ ಘಟನೆ ನಡೆದಿದೆ.

ಪರಿಶೀಲನೆಯಲ್ಲಿ ತೊಡಗಿರುವ ಪೊಲೀಸ್​ ಸಿಬ್ಬಂದಿ

ಜುಗ್ನು ಮಂಡಲ್ (45) ಹತ್ಯೆಗೀಡಾದ ವ್ಯಕ್ತಿ ಎಂದು ತಿಳಿದು ಬಂದಿದೆ. ಜುಗ್ನು ಜೆಡಿಯುನ ಸ್ಥಳೀಯ ವಾರ್ಡ್ ಅಧ್ಯಕ್ಷರಾಗಿದ್ದು, ತಮ್ಮ ಮನೆಯಿಂದ ಹೊರಗಡೆ ಬರುತ್ತಿದ್ದಾಗ ಅಪರಿಚಿತ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಂದು ಹಾಕಿದ್ದಾರೆ ಎನ್ನಲಾಗಿದೆ.

ಸ್ಥಳೀಯ ಪೊಲೀಸ್​ ಅಧಿಕಾರಿ

ಗುಂಡಿನ ಶಬ್ದ ಕೇಳಿದ ಮಂಡಲ್ ಕುಟುಂಬ ಹೊರಗೆ ಬಂದು ನೋಡಿದಾಗ ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಸುದ್ದಿ ತಿಳಿದು ಘಟನಾ ಸ್ಥಳಕ್ಕೆ ಬಂದ ಪೊಲೀಸರು ಅವರನ್ನು ಜಮಾಲ್‌ಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ (ಪಿಹೆಚ್​ಸಿ) ಕರೆದೊಯ್ದಿದ್ದಾರೆ. ಆದರೆ ಮಾರ್ಗ ಮಧ್ಯದಲ್ಲೇ ಪ್ರಾಣ ಬಿಟ್ಟಿದ್ದಾರೆ ಎಂದು ಅಲ್ಲಿನ ವೈದ್ಯರು ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಘಟನೆ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಎರಡು ವರ್ಷಗಳ ಹಿಂದೆ ಮಂಡಲ್​ ಮೇಲೆ ಇದೇ ರೀತಿಯ ದಾಳಿ ನಡೆದಿತ್ತು. ಅಂದು ದಾಳಿಯಿಂದ ತಪ್ಪಿಸಿಕೊಂಡಿದ್ದರಂತೆ.

ABOUT THE AUTHOR

...view details