ಪಾಟ್ನಾ:ಬಿಹಾರದಲ್ಲಯೂ ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ರಾಜ್ಯದ ಬಿಜೆಪಿ ವಕ್ತಾರ ಪ್ರೇಮ್ ರಂಜನ್ ಪಟೇಲ್ ಒಲವು ತೋರಿದ್ದು, ಇದಕ್ಕಾಗಿ ಮಿತ್ರ ಪಕ್ಷ ಜನತಾದಳ-ಯುನೈಟೆಡ್ (ಜೆಡಿಯು) ಕೂಡ ಸಹಕಾರ ನೀಡಬೇಕು ಎಂದು ಹೇಳಿದ್ದಾರೆ.
ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಂತೆಯೇ ಬಿಹಾರದಲ್ಲಿ ಮತಾಂತರ ವಿರೋಧಿ ಕಾನೂನು ಜಾರಿಗೆ ತರುವ ಅಗತ್ಯವಿದೆ ಎಂದು ಪಕ್ಷದ ಹಿರಿಯ ಸದಸ್ಯರು ಕೂಡ ಪ್ರತಿಪಾದಿಸಿದ್ದಾರೆ.
ಈಟಿವಿ ಭಾರತ ಜೊತೆ ಮಾತನಾಡಿದ ಪ್ರೇಮ್ ರಂಜನ್, "ಬಲವಂತದ ಧಾರ್ಮಿಕ ಮತಾಂತರಗಳನ್ನು ತಡೆಯುವ ಅವಶ್ಯಕತೆಯಿದೆ. ಮುಗ್ಧ ಹುಡುಗಿಯರನ್ನು ಮೋಸದಿಂದ ಮತಾಂತರ ಮಾಡಲಾಗುತ್ತಿದೆ. ಇದನ್ನು ಬೇರು ಸಮೇತ ಕಿತ್ತೊಗೆಯಬೇಕಾಗಿದೆ. ಇದಕ್ಕೆ ಕಾನೂನಿನ ಅವಶ್ಯಕತೆ ಇದೆ. ಬಿಜೆಪಿಗೆ ಮಹಿಳೆಯರ ಸುರಕ್ಷತೆಯ ಬಗ್ಗೆ ಕಾಳಜಿ ಇದೆ ಮತ್ತು ಮದುವೆಯಾಗುವ ನೆಪದಲ್ಲಿ ಅಥವಾ ಪ್ರೀತಿಯ ಹೆಸರಿನಲ್ಲಿ ಯಾರೊಬ್ಬರ ಮೇಲೂ ಮತಾಂತರ ಆಗುವಂತೆ ಒತ್ತಡ ಹಾಕಲು ಯಾರಿಗೂ ಹಕ್ಕಿಲ್ಲ." ಎಂದರು.