ವಾಷಿಂಗ್ಟನ್: ನ್ಯೂಜೆರ್ಸಿಯಲ್ಲಿ ಹಾಲ್ಆಫ್ ಫೇಮ್ ಗೌರವ ಪಡೆದಿದ್ದ ಖ್ಯಾತ ಗಿಟಾರ್ ಕಲಾವಿದ ಬಕ್ಕಿ ಫಿಜ್ಜರೆಲ್ಲಿ ತಮ್ಮ 94ನೇ ವಯಸ್ಸಿನಲ್ಲಿ ಮೃತಪಟ್ಟಿದ್ದಾರೆ.
ಸಾಯುವುದಕ್ಕೂ ಮೊದಲು ಇವರಿಗೆ ಕೊರೊನಾ ವೈರಸ್ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ತಿಳಿದುಬಂದಿತ್ತು. ಈ ಸಂಗೀತ ಕಲಾವಿದ ತಮ್ಮ ವೃತ್ತಿ ಜೀವನದಲ್ಲಿ ಶ್ವೇತಭವನದಲ್ಲೂ ಅಧ್ಯಕ್ಷರ ಪರವಾಗಿ ಗಿಟಾರ್ ನುಡಿಸಿ ಪ್ರಖ್ಯಾತರಾಗಿದ್ದರು. ಇದೀಗ ತಮ್ಮ 94ನೇ ವಯಸ್ಸಿನಲ್ಲಿ ಇಲ್ಲಿನ ಸ್ಯಾಡಲ್ ನದಿ ತೀರದಲ್ಲಿರುವ ನಿವಾಸದಲ್ಲಿ ಮೃತಪಟ್ಟಿದ್ದಾರೆ.