ನವದೆಹಲಿ: ಡ್ರಗ್ಸ್ ಮಾಫಿಯಾ ಕುರಿತು ನಿನ್ನೆ ಆರಂಭವಾದ ಸಂಸತ್ ಮುಂಗಾರು ಅಧಿವೇಶನದಲ್ಲಿ ದನಿ ಎತ್ತಿದ್ದ ನಟ, ಬಿಜೆಪಿ ಸಂಸದ ರವಿ ಕಿಶನ್ ಹಾಗೂ ಬಾಲಿವುಡ್ಅನ್ನು 'ಗಟ್ಟರ್' (ಚರಂಡಿ) ಎಂದಿದ್ದ ನಟಿ ಕಂಗನಾಗೆ ಇಂದಿನ ರಾಜ್ಯಸಭಾ ಕಲಾಪದಲ್ಲಿ ನಟಿ, ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ತಿರುಗೇಟು ನೀಡಿದ್ದಾರೆ.
ನಿನ್ನೆಯಿಂದ ಸಂಸತ್ ಮುಂಗಾರು ಅಧಿವೇಶನ ಆರಂಭವಾಗಿದ್ದು, ಲೋಕಸಭಾ ಕಲಾಪದ ವೇಳೆ ಮಾದಕ ವಸ್ತು ಕಳ್ಳಸಾಗಣೆ ಹಾಗೂ ಮಾದಕ ವಸ್ತು ವ್ಯಸನದ ಸಮಸ್ಯೆ ಬಗ್ಗೆ ಸಂಸದ ರವಿ ಕಿಶನ್ ಮಾತನಾಡಿದ್ದರು. ನಮ್ಮ ಚಿತ್ರರಂಗದಲ್ಲೂ ಮಾದಕ ವಸ್ತುಗಳ ವ್ಯಸನವಿದೆ. ಇದಕ್ಕೆ ಸಂಬಂಧಿಸಿದಂತೆ ಹಲವಾರು ಜನರನ್ನು ಬಂಧಿಸಲಾಗಿದ್ದು, ಎನ್ಸಿಬಿ ಬಹಳ ಒಳ್ಳೆಯ ಕೆಲಸ ಮಾಡುತ್ತಿದೆ. ಈ ಸಂಬಂಧ ಕಠಿಣ ಕ್ರಮ ಕೈಗೊಂಡು ಅಪರಾಧಿಗಳನ್ನು ಶೀಘ್ರದಲ್ಲೇ ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರು.