ಕರ್ನಾಟಕ

karnataka

ETV Bharat / bharat

ಪಶುವೈದ್ಯೆ ರೇಪ್​​​ & ಮರ್ಡರ್​​​ ಕೇಸ್​​​​​​​​​... ಆರೋಪಿಗಳಿಗೆ ಮಹಿಳಾಮಣಿಗಳಿಂದ ಕಠಿಣ ಶಿಕ್ಷೆಗೆ ಆಗ್ರಹ - ಪಶುವೈದ್ಯೆ ಪ್ರಕರಣ ಕುರಿತು ಸ್ವಾತಿ ಮಾಲಿವಾಲ್ ಪ್ರತಿಕ್ರಿಯೆ

ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣರದ ಆರೋಪಿಗಳಿಗೆ ಅತ್ಯಂತ ಕಠಿಣ ಶಿಕ್ಷೆ ನೀಡಬೇಕೆಂದು ಸಂಸದೆ ಜಯಾ ಬಚ್ಚನ್, ಸಂಸದೆ ಮಿಮಿ ಚಕ್ರವರ್ತಿ ಹಾಗೂ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಆಗ್ರಹಿಸಿದ್ದಾರೆ.

eterinarian's rape & murder case
ದೇಶದ ಮಹಿಳಾ ಶಕ್ತಿಗಳು

By

Published : Dec 2, 2019, 7:42 PM IST

ನವದೆಹಲಿ: ಪಶುವೈದ್ಯೆಯ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣರದ ವಿರುದ್ಧ ದೇಶದ ಮಹಿಳಾ ಶಕ್ತಿಗಳು ಧ್ವನಿ ಎತ್ತಿವೆ.

ಸಂಸದೆ ಜಯಾ ಬಚ್ಚನ್​:

'ಅತ್ಯಾಚಾರಿಗಳನ್ನು ಸಾರ್ವಜನಿಕವಾಗಿ ಥಳಿಸಿ ಕೊಲ್ಲಬೇಕು' ಎಂದು ಪಶುವೈದ್ಯೆ ಪ್ರಕರಣದ ವಿಚಾರವನ್ನು ರಾಜ್ಯಸಭೆಯಲ್ಲಿ ಮಾತನಾಡುವಾಗ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಗಂಭೀರ​​ ಹೇಳಿಕೆ ನೀಡಿದ್ದಾರೆ.

ಈ ರೀತಿ ಮಾಡುವುದು ಸ್ವಲ್ಪ ಕ್ರೂರ ಎಂದು ನನಗೆ ಗೊತ್ತು. ಆದರೂ ಅಂತವರಿಗೆ ಹೀಗೆ ಮಾಡುವುದೇ ಸರಿ. ಮೃತಳ ಕುಟುಂಬಕ್ಕೆ ಹೇಗೆ ನ್ಯಾಯ ಒದಗಿಸುವುದು ಎಂದು ಪ್ರಶ್ನಿಸಿದ ಅವರು, ಪ್ರಕರಣ ಸಂಬಂಧ ಜನರು ಸರ್ಕಾರದಿಂದ ಸ್ಪಷ್ಟ ಉತ್ತರವನ್ನು ಬಯಸಿದ್ದಾರೆ ಎಂದು ಹೇಳಿದರು.

ಸ್ವಾತಿ ಮಾಲಿವಾಲ್:

ಪ್ರಕರಣ ಸಂಬಂಧ ಆಕ್ರೋಶ ವ್ಯಕ್ತಪಡಿಸಿರುವ ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್, ನಾಳೆ ಬೆಳಿಗ್ಗೆ 10 ಗಂಟೆಯಿಂದ ಜಂತರ್ ಮಂತರ್‌ನಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಅತ್ಯಾಚಾರಿಗಳಿಗೆ 6 ತಿಂಗಳೊಳಗೆ ಮರಣದಂಡನೆ ಶಿಕ್ಷೆ ವಿಧಿಸಲಾಗುವುದು ಎಂದು ಕೇಂದ್ರದಿಂದ ಭರವಸೆ ಪಡೆಯುವವರೆಗೂ ಸತ್ಯಾಗ್ರಹ ನಿಲ್ಲಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಸದೆ ಮಿಮಿ ಚಕ್ರವರ್ತಿ:

ಇನ್ನು ಇದೇ ವಿಷಯ ಸಂಬಂಧ ಮಾತನಾಡಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಿಮಿ ಚಕ್ರವರ್ತಿ, ಕಾಮುಕರು ಅತ್ಯಾಚಾರ ಎಸಗುವ ಮುನ್ನ 100 ಬಾರಿ ಯೋಚಿಸಬೇಕು. ಅತ್ಯಾಚಾರಿಗಳಿಗೆ ಅಂತಹ ಕಠಿಣ ಶಿಕ್ಷೆ ನೀಡುವಂತಹ ಪ್ರಬಲ ಕಾನೂನನ್ನು ರೂಪಿಸಬೇಕೆಂದು ಎಲ್ಲಾ ಮಂತ್ರಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.

For All Latest Updates

TAGGED:

ABOUT THE AUTHOR

...view details