ಕರ್ನಾಟಕ

karnataka

ETV Bharat / bharat

ಗಸ್ತು ತಂಡದ ಮೇಲೆ ಉಗ್ರರ ದಾಳಿ: ನಾಗರಿಕ ಸೇರಿ ಓರ್ವ ಸಿಆರ್​ಪಿಎಫ್​ ಯೋಧ ಹುತಾತ್ಮ - ಸಿಆರ್​​ಪಿಎಫ್​ ಗಸ್ತು ತಂಡ

ಜಮ್ಮು ಕಾಶ್ಮೀರದಲ್ಲಿ ಉಗ್ರರ ಉಪಟಳ ತೀವ್ರವಾಗಿದೆ. ಈ ಹಿನ್ನೆಲೆಯಲ್ಲಿ ಆಗಾಗ ಉಗ್ರರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆಯುತ್ತದೆ. ಇಂದು ಕೂಡಾ ಉಗ್ರರು ಅಟ್ಟಹಾಸ ಮೆರೆದಿದ್ದಾರೆ.

CRPF Patrol Party
ಸಿಆರ್​ಪಿಎಫ್​

By

Published : Jul 1, 2020, 9:59 AM IST

Updated : Jul 1, 2020, 12:05 PM IST

ಶ್ರೀನಗರ (ಜಮ್ಮು ಕಾಶ್ಮೀರ):ಜಮ್ಮು ಕಾಶ್ಮೀರದ ಸೋಪೋರ್​ ನಗರದಲ್ಲಿ ಭಯೋತ್ಪಾದಕರು ಹಾಗೂ ಸೇನೆಯ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಸಿಆರ್​ಪಿಎಫ್​ ಯೋಧ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಇನ್ನೂ ಮೂವರಿಗೆ ಗಾಯವಾಗಿದ್ದು,ಇಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇವರಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಸಿಆರ್​ಪಿಎಫ್​ ಯೋಧರು ಗಸ್ತು ತಿರುಗುವ ವೇಳೆ ಭಯೋತ್ಪಾದಕರು ಹಠಾತ್​ ದಾಳಿ ನಡೆಸಿದ್ದು, ಈ ವೇಳೆ, ಗುಂಡಿನ ಚಕಮಕಿ ನಡೆದಿತ್ತು. ಈ ವೇಳೆ ಯೋಧ ಹಾಗೂ ಸ್ಥಳೀಯ ನಾಗರಿಕರೊಬ್ಬರು ಮೃತಪಟ್ಟಿದ್ದಾರೆ.

ಸದ್ಯ ಆ ಪ್ರದೇಶದಲ್ಲಿ ಭಯೋತ್ಪಾದಕರಿಗಾಗಿ ಶೋಧ ಕಾರ್ಯ ನಡೆಯುತ್ತಿದೆ.

Last Updated : Jul 1, 2020, 12:05 PM IST

ABOUT THE AUTHOR

...view details