ETV Bharat Karnataka

ಕರ್ನಾಟಕ

karnataka

ETV Bharat / bharat

ಸಿಪಾಯಿ ಅಂಕುಶ್​ ಠಾಕೂರ್​ ವೀರಮರಣ: ಸ್ವಗ್ರಾಮದಲ್ಲಿ ಶೋಕಸಾಗರ - ಹಿಮಾಚಲ ಪ್ರದೇಶದ ಹಮೀರ್​ಪುರ

ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಸಿಪಾಯಿ ಅಂಕುಶ್ ಠಾಕೂರ್ ನಿಧನ ಹೊಂದಿದ್ದು, ಈ ದುರಂತ ಸುದ್ದಿ ತಲುಪುತ್ತಿದ್ದಂತೆ ಕರೋಹ್ತಾ ಗ್ರಾಮದಲ್ಲಿ ಕರಿಛಾಯೆ ಆವರಿಸಿದೆ.

Jawan from Himachal killed in Indo-China clash at LAC
ಸಿಪಾಯಿ ಅಂಕುಶ್​ ಠಾಕೂರ್​ ನಿಧನದಿಂದ ಸ್ವಗ್ರಾಮದಲ್ಲಿ ಕರಿಛಾಯೆ
author img

By

Published : Jun 17, 2020, 1:29 PM IST

ಹಮೀರ್‌ಪುರ(ಹಿಮಾಚಲ ಪ್ರದೇಶ):ಲಡಾಕ್‌ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ನಡೆದ ಘರ್ಷಣೆಯಲ್ಲಿ ಸಿಪಾಯಿ ಅಂಕುಶ್ ಠಾಕೂರ್ ನಿಧನ ಹೊಂದಿದ್ದು, ಈ ದುರಂತ ಸುದ್ದಿ ತಲುಪುತ್ತಿದ್ದಂತೆ ಕರೋಹ್ತಾ ಗ್ರಾಮದಲ್ಲಿ ದುಃಖದ ವಾತಾವರಣ ನಿರ್ಮಾಣವಾಗಿದೆ.

ಸಿಪಾಯಿ ಅಂಕುಶ್​ ಠಾಕೂರ್​ ನಿಧನದಿಂದ ಸ್ವಗ್ರಾಮದಲ್ಲಿ ಕರಿಛಾಯೆ

ಭೋರಂಜ್ ಉಪವಿಭಾಗದ ಕರೋಹ್ತಾ ಎಂಬ ಹಳ್ಳಿಯ ನಿವಾಸಿಯಾಗಿದ್ದ 21 ವರ್ಷದ ಸಿಪಾಯಿ ಅಂಕುಶ್ 2018ರಲ್ಲಿ ಪಂಜಾಬ್ ರೆಜಿಮೆಂಟ್‌ಗೆ ನೇಮಕಗೊಂಡಿದ್ದರು. ಅವರ ತಂದೆ ಮತ್ತು ಅಜ್ಜ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಇನ್ನು ಠಾಕೂರ್‌ಗೆ ಒಬ್ದ ತಮ್ಮ ಇದ್ದು, ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ.

ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಭಾರತ ಮತ್ತು ಚೀನಾ ನಡುವೆ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ 20 ಭಾರತೀಯ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

ಸೇನಾ ಕೇಂದ್ರ ಕಚೇರಿಯಿಂದ ಹಳ್ಳಿಯ ಸರ್​ಪಂಚ್​ ಗೆ ಕರೆ ಬಂದಿದ್ದು, ಘರ್ಷಣೆಯಲ್ಲಿ ಠಾಕೂರ್ ಸಾವನ್ನಪ್ಪಿದ್ದಾರೆ ಎಂಬ ವಿಚಾರ ತಿಳಿದುಬಂದಿದೆ. ಠಾಕೂರ್ ನಿಧನದ ಸುದ್ದಿ ಹಳ್ಳಿಗೆ ತಲುಪುತ್ತಿದ್ದಂತೆ ಗ್ರಾಮದ ಜನರು ಠಾಕೂರ್ ಅವರ ಮನೆಗೆ ಧಾವಿಸಿ ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದರು.

ABOUT THE AUTHOR

...view details