ಮುಂಬೈ: ಆಜಾನ್ ಗ್ಯಾಡ್ಜೆಟ್ ಅಲ್ಲ, ಅದೊಂದು ನಂಬಿಕೆಯ ಭಾಗ. ಈ ರೀತಿಯ ಆಜಾನ್ನಿಂದ ಇತರರಿಗೆ ತೊಂದರೆ ಆಗುತ್ತಿದೆ. ಈ ಹಿನ್ನೆಲೆ ಇದನ್ನು ನಿಲ್ಲಿಸಬೇಕು ಎಂದು ಹಿರಿಯ ಬರಹಗಾರ-ಗೀತ ರಚನೆಕಾರ ಜಾವೇದ್ ಅಖ್ತರ್ ಮನವಿ ಮಾಡಿದ್ದಾರೆ.
ಭಾರತದಲ್ಲಿ ಸುಮಾರು 50 ವರ್ಷಗಳ ಕಾಲ ಆಜಾನ್ ಮಾಡಲಾಗುತ್ತಿತ್ತು. ನಂತರ ಅದು ಹಲಾಲ್ ಆಗಿ ಮಾರ್ಪಟ್ಟಿತು. ಅದಕ್ಕೆ ಅಂತ್ಯವಿಲ್ಲ. ಆದರೆ, ಆಜಾನ್ ಚೆನ್ನಾಗಿದ್ದರೂ ಕೂಡ ಲೌಡ್ ಸ್ಪೀಕರ್ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಇತರರಿಗೆ ಕಿರಿಕಿರಿ ಉಂಟಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.
ದೇವಾಲಯಗಳಲ್ಲಿ ಧ್ವನಿವರ್ಧಕಗಳನ್ನು ಬಳಸುತ್ತಿರುವ ಬಗ್ಗೆ ಟ್ವೀಟ್ನಲ್ಲೇ ಅಖ್ತರ್ರನ್ನು ಪ್ರಶ್ನಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿ, ದಿನವೂ ಲೌಡ್ ಸ್ವೀಕರ್ ಬಳಕೆ ಮಾಡುವುದು ಆತಂಕಕ್ಕೆ ಕಾರಣವಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.
ದೇವಾಲಯವಾಗಲಿ ಅಥವಾ ಮಸೀದಿಯಾಗಲಿ ಹಬ್ಬದ ಸಮಯದಲ್ಲಿ ಧ್ವನಿವರ್ಧಕಗಳನ್ನು ಬಳಸಿದರೆ ಉತ್ತಮ. ಆದರೆ, ಪ್ರತಿದಿನ ಬಳಸಬಾರದು ಎಂದಿದ್ದಾರೆ. ಸಾವಿರಕ್ಕೂ ಹೆಚ್ಚು ವರ್ಷಗಳಿಂದ ಆಜಾನ್‌ನ ಲೌಡ್ ಸ್ಪೀಕರ್ ಇಲ್ಲದೆ ಮಾಡಿಕೊಂಡು ಬರಲಾಗುತ್ತಿದೆ. ಆಜಾನ್ ನಂಬಿಕೆಯ ಅವಿಭಾಜ್ಯ ಅಂಗವಾಗಿದೆ. ಗ್ಯಾಡ್ಜೆಟ್ ಅಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಕೊರೊನಾ ಏಕಾಏಕಿ ಏರಿಕೆಯಾದ ಹಿನ್ನೆಲೆ ಮಸೀದಿಗಳನ್ನು ಮುಚ್ಚುವ ಬೇಡಿಕೆಯನ್ನು ಅಖ್ತರ್ ಬೆಂಬಲಿಸಿದ್ದರು. ಅಲ್ಲದೆ ಸಾಂಕ್ರಾಮಿಕ ರೋಗದಿಂದಾಗಿ ಕಾಬಾ ಮತ್ತು ಮದೀನಾವನ್ನು ಸಹ ಮುಚ್ಚಲಾಗಿದೆ ಎಂದು ಹೇಳಿದ್ದರು. ಏಪ್ರಿಲ್ 24ರಂದು ಪ್ರಾರಂಭವಾದ ಪವಿತ್ರ ರಂಜಾನ್ ತಿಂಗಳಲ್ಲಿ ಮನೆಯಿಂದ ಪ್ರಾರ್ಥನೆ ಸಲ್ಲಿಸುವಂತೆ ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದ್ದರು.