ಕರ್ನಾಟಕ

karnataka

ETV Bharat / bharat

ಕೋವಿಡ್-19 ವಿರುದ್ಧ ಹೋರಾಡಲು ಭಾರತಕ್ಕೆ ತುರ್ತು ಸಾಲ ನೀಡಲಿರುವ ಜಪಾನ್​​

ಕೋವಿಡ್ -19 ಸಾಂಕ್ರಾಮಿಕ ರೋಗಕ್ಕೆ ಭಾರತ ನೀಡಿದ ಪ್ರತಿಕ್ರಿಯೆಗೆ 50 ಬಿಲಿಯನ್ ಯೆನ್‌ಗಳ (3,500 ಕೋಟಿ ರೂ.) ತುರ್ತು ಸಾಲದ ಬೆಂಬಲವನ್ನು ನೀಡುವುದಾಗಿ ಜಪಾನ್ ಹೇಳಿದೆ. ಸಾಲವು ನಾಲ್ಕು ವರ್ಷಗಳ ಗ್ರೇಸ್ ಅವಧಿ ಸೇರಿದಂತೆ 15 ವರ್ಷಗಳ ವಿಮೋಚನಾ ಅವಧಿಯೊಂದಿಗೆ ವಾರ್ಷಿಕ 0.01 ಶೇಕಡಾ ಬಡ್ಡಿ ದರವನ್ನು ಹೊಂದಿರುತ್ತದೆ.

By

Published : Sep 1, 2020, 8:36 AM IST

japan
japan

ನವದೆಹಲಿ:ಆರೋಗ್ಯ ಮತ್ತು ವೈದ್ಯಕೀಯ ನೀತಿಯ ಅನುಷ್ಠಾನವನ್ನು ಒಳಗೊಂಡಿರುವ ಕೋವಿಡ್-19 ಸಾಂಕ್ರಾಮಿಕ ರೋಗಕ್ಕೆ ಭಾರತ ನೀಡಿದ ಪ್ರತಿಕ್ರಿಯೆಗೆ 50 ಬಿಲಿಯನ್ ಯೆನ್‌ಗಳ (3,500 ಕೋಟಿ ರೂ) ತುರ್ತು ಸಾಲದ ಬೆಂಬಲವನ್ನು ನೀಡುವುದಾಗಿ ಜಪಾನ್ ಹೇಳಿದೆ.

ಕೋವಿಡ್-19 ಸಾಂಕ್ರಾಮಿಕ ರೋಗವನ್ನು ಎದುರಿಸಲು ಭಾರತಕ್ಕೆ ಸಾಲ ಒದಗಿಸುವ ಬಗ್ಗೆ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಹೆಚ್ಚುವರಿ ಕಾರ್ಯದರ್ಶಿ ಸಿ.ಎಸ್.ಮೊಹಾಪಾತ್ರ ಮತ್ತು ಜಪಾನಿನ ರಾಯಭಾರಿ ಸುಜುಕಿ ಸಟೋಶಿ ಮಾತುಕತೆ ನಡೆಸಿದರು.

ಜಪಾನಿನ ರಾಯಭಾರ ಕಚೇರಿಯ ಅಧಿಕೃತ ಹೇಳಿಕೆ ಬಿಡುಗಡೆಯ ಪ್ರಕಾರ, ಈ "ಕೋವಿಡ್-19 ಬಿಕ್ಕಟ್ಟಿಗೆ ತುರ್ತು ಬೆಂಬಲ ಸಾಲ "ಕೊರೊನಾ ವೈರಸ್ ವಿರುದ್ಧ ಭಾರತದ ಹೋರಾಟಕ್ಕೆ ಅಗತ್ಯವಾದ ಹಣವನ್ನು ಒದಗಿಸುತ್ತದೆ.

ಈ ಹಣಕಾಸಿನ ನೆರವು ಭಾರತ ಸರ್ಕಾರದ ಆರೋಗ್ಯ ಮತ್ತು ವೈದ್ಯಕೀಯ ನೀತಿಯ ಅನುಷ್ಠಾನಕ್ಕೆ ಸಹಕಾರಿಯಾಗಲಿದೆ. ಐಸಿಯು ಮತ್ತು ಸೋಂಕು ತಡೆಗಟ್ಟುವಿಕೆ, ನಿರ್ವಹಣಾ ಸೌಲಭ್ಯಗಳನ್ನು ಹೊಂದಿರುವ ಆಸ್ಪತ್ರೆಗಳ ಅಭಿವೃದ್ಧಿಗೆ ಕಾರಣವಾಗಲಿದೆ.

ಈ ಕ್ರಮಗಳು ದೇಶದಲ್ಲಿ ಸೋಂಕಿನ ಹರಡುವಿಕೆಯನ್ನು ನಿಯಂತ್ರಿಸುವುದರ ಜೊತೆಗೆ ದೇಶದ ಸಾಮಾಜಿಕ ಮತ್ತು ಆರ್ಥಿಕತೆಯ ಚೇತರಿಕೆ ಮತ್ತು ಸ್ಥಿರತೆಗೆ ಸಹಕಾರಿಯಾಗಲಿದ್ದು, ಜೊತೆಗೆ ಸುಸ್ಥಿರ ಅಭಿವೃದ್ಧಿಗೆ ಸಹಕಾರಿಯಾಗುತ್ತವೆ ಎಂದು ನಿರೀಕ್ಷಿಸಲಾಗಿದೆ.

ಸಾಲವು ನಾಲ್ಕು ವರ್ಷಗಳ ಗ್ರೇಸ್ ಅವಧಿ ಸೇರಿದಂತೆ 15 ವರ್ಷಗಳ ವಿಮೋಚನಾ ಅವಧಿಯೊಂದಿಗೆ ವಾರ್ಷಿಕ 0.01 ಶೇಕಡಾ ಬಡ್ಡಿ ದರವನ್ನು ಹೊಂದಿರುತ್ತದೆ.

ABOUT THE AUTHOR

...view details