ನೆಲ್ಲೂರು(ಆಂಧ್ರಪ್ರದೇಶ): ನಿವಾರ್ ಚಂಡಮಾರುತ ದಾಂಗುಡಿ ಇಟ್ಟ ನೆಲ್ಲೂರು ಸೇರಿದಂತೆ ಇತರ ಪ್ರದೇಶಗಳಿಗೆ ಜನಸೇನಾ ಪಕ್ಷದ ನೇತಾರ ಪವನ್ ಕಲ್ಯಾಣ್ ಭೇಟಿ ನೀಡಿದರು. ನೆಲ್ಲೂರು ಜಿಲ್ಲೆಯ ಗೂಡುರು ಸೇರಿದಂತೆ ಕೆಲವೆಡೆ ಮಳೆಯಿಂದಾದ ಹಾನಿಯನ್ನ ಪರಿಶೀಲಿಸಿದರು.
ಚಂಡಮಾರುತ ಹಾವಳಿ ಪ್ರದೇಶಕ್ಕೆ ಪವನ್ ಕಲ್ಯಾಣ್ ಭೇಟಿ - cyclone-affected areas in Nellore district
ನಿವಾರ್ನಿಂದ ಉಂಟಾದ ಬೆಳೆ ಹಾನಿ ಪರಿಹಾರವನ್ನ ಸರ್ಕಾರ ತಕ್ಷಣವೇ ರೈತರಿಗೆ ನೀಡುತ್ತಿಲ್ಲ ಎಂದು ಜನಸೇನಾ ನಾಯಕ ಪವನ್ ಕಲ್ಯಾಣ್ ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರಕ್ಕಾಗಿ ಸರ್ಕಾರದ ವಿರುದ್ಧ ದೊಡ್ಡ ಪ್ರತಿಭಟನೆಯನ್ನ ಶೀಘ್ರವೇ ಹಮ್ಮಿಕೊಳ್ಳಲಾಗುವುದು ಎಂದರು.
ಚಂಡಮಾರುತ ಹಾವಳಿ ಪ್ರದೇಶಕ್ಕೆ ಪವನ್ ಕಲ್ಯಾಣ್ ಭೇಟಿ
ಇದೇ ವೇಳೆ, ಅಲ್ಲಿನ ಸಂತ್ರಸ್ತರನ್ನು ಉದ್ದೇಶಿಸಿ ಮಾತನಾಡಿ, ಧೈರ್ಯ ತುಂಬಿದರು. ಇದೇ ವೇಳೆ, ನಿವಾರ್ನಿಂದ ಉಂಟಾದ ಬೆಳೆ ಹಾನಿ ಪರಿಹಾರವನ್ನ ಸರ್ಕಾರ ತಕ್ಷಣವೇ ರೈತರಿಗೆ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ಹಿನ್ನೆಲೆಯಲ್ಲಿ ಸೂಕ್ತ ಪರಿಹಾರಕ್ಕಾಗಿ ಸರ್ಕಾರದ ವಿರುದ್ಧ ದೊಡ್ಡ ಪ್ರತಿಭಟನೆಯನ್ನ ಶೀಘ್ರವೇ ಹಮ್ಮಿಕೊಳ್ಳಲಾಗುವುದು ಎಂದು ಪವನ್ ಕಲ್ಯಾಣ್ ಹೇಳಿದರು.
ಇದನ್ನೂ ಓದಿ: ವಿಶ್ವದ ಅತ್ಯಂತ ವೇಗದ ಕಂಪ್ಯೂಟರ್ ಶೋಧಿಸಿದ ಚೀನಾ: ಸ್ಪೀಡ್ ಕೇಳಿದ್ರೆ ತಲೆ ತಿರುಗುತ್ತೆ!