ರಾಂಬನ್ ( ಜಮ್ಮು ಕಾಶ್ಮೀರ): ರಾಂಬನ್ ಮತ್ತು ನಶ್ರಿ ಸೆಕ್ಟರ್ ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿಯು ಧಲ್ವಾಸ್ ಪ್ರದೇಶದಲ್ಲಿ ಭಾಗಶಃ ಕುಸಿದಿದ್ದು ಸಂಚಾರ ಬಂದ್ ಆಗಿದೆ.
ಜಮ್ಮು ಕಾಶ್ಮೀರದ ಧಲ್ವಾಸ್ ಬಳಿ ಹೆದ್ದಾರಿ ಕುಸಿತ: ಸಂಚಾರ ಬಂದ್ - ರಾಂಬನ್ ನಶ್ರಿ ಹೆದ್ದಾರಿ ಕುಸಿತ
ಭಾರೀ ಮಳೆಯಿಂದ ಕಣಿವೆಯ ನಡುವೆ ಹಾದು ಹೋಗುವ ಹೆದ್ದಾರಿ ಕುಸಿದಿದೆ. ಪರಿಣಾಮ ರಸ್ತೆಯುದ್ದಕ್ಕೂ ಕಿ.ಮೀ ಗಟ್ಟಲೇ ವಾಹನಗಳು ನಿಂತಿವೆ. ರಸ್ತೆಯ ದುರಸ್ತಿ ಕಾರ್ಯ ಭರದಿಂದ ಸಾಗಿದೆ.

ಜಮ್ಮು ಕಾಶ್ಮೀರದ ಧಲ್ವಾಸ್ ಬಳಿ ಹೆದ್ದಾರಿ ಕುಸಿತ
ಜಮ್ಮು ಕಾಶ್ಮೀರದ ಧಲ್ವಾಸ್ ಬಳಿ ಕುಸಿದ ಹೆದ್ದಾರಿ
ಭಾರೀ ಮಳೆಯಿಂದ ಕಣಿವೆ ನಡುವೆ ಹಾದು ಹೋಗುವ ಹೆದ್ದಾರಿ ಕುಸಿದಿದೆ. ಪರಿಣಾಮ ರಸ್ತೆಯುದ್ದಕ್ಕೂ ಕಿಲೋ ಮೀಟರ್ಗಟ್ಟಲೇ ವಾಹನಗಳು ನಿಂತಿವೆ. ರಸ್ತೆಯ ದುರಸ್ತಿ ಕಾರ್ಯ ಭರದಿಂದ ಸಾಗಿದೆ ಎಂದು ಸಂಚಾರಿ ಡಿಎಸ್ಪಿ ಅಜಯ್ ಆನಂದ್ ತಿಳಿಸಿದ್ದಾರೆ.
ಧಲ್ವಾಸ್ನಲ್ಲಿ ಚತುಷ್ಪಥ ರಸ್ತೆ ಇತ್ತೀಚೆಗೆ ಕುಸಿದಿತ್ತು. ಅದನ್ನು ದುರಸ್ತಿಗೊಳಿಸಿದ ಬೆನ್ನಲ್ಲೇ ಈಗ ಮತ್ತೊಂದು ರಸ್ತೆ ಕುಸಿತವಾಗಿದೆ.