ಶ್ರೀನಗರ: ಜಗತ್ತಿನೆದುರು ಶಾಂತಿ ಮಂತ್ರ ಪಠಿಸುತ್ತಿರುವ ಪಾಕ್ ಭಾರತದ ಗಡಿಯೊಳಗೆ ಆಕ್ರಮಣಕಾರಿ ಪ್ರವೃತ್ತಿಯನ್ನು ಮುಂದುವರಿಸುತ್ತಲೇ ಇದೆ. ಗಡಿಯಲ್ಲಿ ಪಾಕ್ ನಡೆಸಿದ ಶೆಲ್ ದಾಳಿಯಿಂದ ಮನೆ ಧ್ವಂಸಗೊಂಡು, ಮೂವರು ಮೃತಪಟ್ಟಿದ್ದಾರೆ.
ಬೆನ್ನಿಗೆ ಚೂರಿ ಹಾಕುತ್ತಲೇ ಇದೆ ಪಾಕ್: ಶೆಲ್ ದಾಳಿಗೆ ಮನೆ ಧ್ವಂಸ, ಮೂವರ ದುರ್ಮರಣ - ಪೂಂಚ್
ಜಮ್ಮು ಮತ್ತು ಕಾಶ್ಮೀರದ ಕೃಷ್ಣ ಘಾಟಿ ವಲಯದಲ್ಲಿ ಪಾಕ್ ನಡೆಸಿದ ಶೆಲ್ ದಾಳಿಯಿಂದ ಮನೆ ಧ್ವಂಸಗೊಂಡು, ಮೂವರು ಮೃತಪಟ್ಟಿದ್ದಾರೆ
ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ವಲಯದಲ್ಲಿ ನಿನ್ನೆ ರಾತ್ರಿಯಿಂದ ಪಾಕ್ ದಾಳಿ ನಡೆಸುತ್ತಿದೆ. ಭಾರಿ ಪ್ರಮಾಣದಲ್ಲಿ ಶೆಲ್ ದಾಳಿ ನಡೆಸಿದ ಪರಿಣಾಮ ಇಲ್ಲಿನ ಮನೆಯೊಂದು ಸ್ಫೋಟಗೊಂಡಿದೆ. ಹಾಗೂ ಮನೆಯಲ್ಲಿದ್ದ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಅತ್ತ ತಾನೇ ಬಂಧಿಸಿದ ವಿಂಗ್ ಕಮ್ಯಾಂಡರ್ ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸುವ ನಡುವೆಯೂ ಪಾಕ್ ಅಪ್ರಚೋದಿತ ದಾಳಿ ನಡೆಸುತ್ತಲೇ ಇದೆ. ಇದಕ್ಕೆ ಪ್ರತ್ಯುತ್ತರವಾಗಿ ಭಾರತೀಯ ಸೇನೆ ಸಹ ಪ್ರತಿದಾಳಿ ನಡೆಸಿತ್ತು. ಇಂದು ಬೆಳಗ್ಗೆ ಗುಂಡಿನ ಚಕಮಕಿ ನಿಂತಿದ್ದು, ದಾಳಿಕೋರರನ್ನು ಪತ್ತೆ ಮಾಡಲು ಸೇನೆ ಮುಂದಾಗಿದೆ. ನಿನ್ನೆ ಕುಪ್ವಾರದಲ್ಲಿ ನಡೆದ ದಾಳಿಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿ ಸೇರಿ, ಓರ್ವ ಸ್ಥಳೀಯ ಮೃತಪಟ್ಟಿದ್ದರು.