ಪುಲ್ವಾಮಾ (ಜಮ್ಮು-ಕಾಶ್ಮೀರ):ಕಣಿವೆ ರಾಜ್ಯದಲ್ಲಿ ತಡರಾತ್ರಿಯಿಂದ ನಡೆದ ಗುಂಡಿನ ಕಾಳಗದಲ್ಲಿ ಮತ್ತೋರ್ವ ಉಗ್ರ ಹತನಾಗಿದ್ದಾನೆ. ದಕ್ಷಿಣ ಕಾಶ್ಮೀರದ ಪುಲ್ವಾಮಾದ ಪಂಜ್ಮಾಮ್ನಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಎನ್ಕೌಂಟರ್ ನಡೆದಿದೆ.
ಪುಲ್ವಾಮಾದಲ್ಲಿ ಎನ್ಕೌಂಟರ್: ಮತ್ತೋರ್ವ ಉಗ್ರನನ್ನು ಹೊಡೆದುರುಳಿಸಿದ ಸೇನೆ - undefined
ಜಮ್ಮು-ಕಾಶ್ಮೀರದ ಪುಲ್ವಾಮಾದಲ್ಲಿ ಮತ್ತೆ ಎನ್ಕೌಂಟರ್ ನಡೆದಿದ್ದು, ಇಬ್ಬರು ಉಗ್ರರು ಹತರಾಗಿದ್ದಾರೆ.

ಪುಲ್ವಾಮಾ
ಭಯೋತ್ಪಾದಕರು ಹಾಗೂ ಸಿಆರ್ಪಿಎಫ್ನ 130 ಬೆಟಾಲಿಯನ್, 55 ರಾಷ್ಟ್ರೀಯ ರೈಫಲ್ಸ್ ಹಾಗೂ ವಿಶೇಷ ಕಾರ್ಯಾಚರಣಾ ತಂಡದಿಂದ ಎನ್ಕೌಂಟರ್ ನಡೆದಿದೆ. ತಡರಾತ್ರಿ 2 ಗಂಟೆಯಿಂದ ನಡೆಯುತ್ತಿರುವ ಎನ್ಕೌಂಟರ್ನಲ್ಲಿ ಒಟ್ಟಾರೆ ಇಬ್ಬರು ಉಗ್ರರು ಹತರಾದಂತಾಗಿದೆ.
ಇದಕ್ಕೂ ಮುನ್ನ ಓರ್ವ ಉಗ್ರ ಹತನಾಗಿರುವ ಮಾಹಿತಿ ಲಭ್ಯವಾಗಿತ್ತು. ಅಲ್ಲದೆ ಕಾರ್ಯಾಚರಣೆ ಬಳಿಕ ಆತನ ಮೃತದೇಹ ಕೂಡ ಪತ್ತೆಯಾಗಿತ್ತು. ಇದೀಗ ಮತ್ತೋರ್ವ ಉಗ್ರನನ್ನು ಹೊಡೆದುರುಳಿಸಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.
Last Updated : May 18, 2019, 11:03 AM IST