ರಜೌರಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಪಾಕ್ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಬೆಳಗ್ಗೆಯಿಂದ ಶೆಲ್ ಮತ್ತು ಗುಂಡಿನ ದಾಳಿ ನಡೆಸುತ್ತಿದೆ.
ಗಡಿಯಲ್ಲಿ ಗುಂಡಿನ ಮೊರೆತ... ಪಾಕ್ಗೆ ಭಾರತೀಯ ಸೇನೆಯಿಂದ ತಕ್ಕ ಪ್ರತ್ಯುತ್ತರ! - ಪಾಕಿಸ್ತಾನ
ಗಡಿಯಲ್ಲಿ ಪಾಕಿಸ್ತಾನ ಸೇನೆ ಶೆಲ್ ಮತ್ತು ಗುಂಡಿನ ದಾಳಿ ನಡೆಸುತ್ತಿದ್ದು, ಭಾರತೀಯ ಸೇನೆ ತಕ್ಕ ಉತ್ತರ ನೀಡುತ್ತಿದೆ.
ಪಾಕ್ ದಾಳಿಗೆ ಕಾಂಪೌಂಡ್ ಪೀಸ್ ಪೀಸ್
ರಜೌರಿ ಜಿಲ್ಲೆಯ ಸುಂದೆರ್ಬನಿ ಮತ್ತು ನೌಶೆರಾ ಸೆಕ್ಟರ್ನಲ್ಲಿ ಬೆಳಗ್ಗೆ 10 ಗಂಟೆಯಿಂದ ಪಾಕ್ ಸೇನೆ ಶೆಲ್ ಮತ್ತು ಗುಂಡಿನ ದಾಳಿ ನಡೆಸುತ್ತಿದೆ. ದಾಳಿಯಿಂದ ನೌಶೆರಾ ಸೆಕ್ಟರ್ನ ಕೆಲ ಗ್ರಾಮಗಳಲ್ಲಿ ಮನೆಗಳು ಹಾನಿಗೊಳಗಾಗಿವೆ.
ಭಾರತೀಯ ಸೇನೆ ಕೂಡ ತೀವ್ರತರದ ಪ್ರತಿ ದಾಳಿ ನಡೆಸುತ್ತಿದ್ದು, ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ನೌಶೆರಾ ಉಪ ಪೊಲೀಸ್ ವರಿಷ್ಠಾಧಿಕಾರಿ ಬ್ರಿಜೇಶ್ ಮಾಹಿತಿ ನೀಡಿದ್ದಾರೆ.