ಆ ವಿಷಯ ಚರ್ಚಿಸುವುದಕ್ಕೂ ಮುನ್ನ, ಜಮ್ಮು ಮತ್ತು ಕಾಶ್ಮೀರದ ಮೂಲ ನಿವಾಸಿಗಳ ವಿಷಯವನ್ನು ಯಥಾವತ್ತಾಗಿ ನಿಮ್ಮ ಮುಂದಿಡಲು ಪ್ರಯತ್ನಿಸುತ್ತೇನೆ. ೩೭೦ನೇ ವಿಧಿ ಮೂಲಕ ಸಂವಿಧಾನವು ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಮಾನ್ಯತೆಯನ್ನು ಅಗಸ್ಟ್ ೫, ೨೦೧೯ರಂದು ರದ್ದು ಮಾಡಲು ನಿರ್ಧರಿಸಿದ ಕೇಂದ್ರ ಸರಕಾರ ಆ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ (ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್) ವಿಭಜಿಸುವ ತನಕ, ಜಮ್ಮು ಕಾಶ್ಮೀರದ ಮೂಲ ನಿವಾಸಿಗಳು ಯಾರು ಮತ್ತು ಯಾರು ಅಲ್ಲ ಎಂಬುದನ್ನು ನಿರ್ಧರಿಸುವ ಸಾಂವಿಧಾನಿಕ ಅಧಿಕಾರ ಜಮ್ಮು ಮತ್ತು ಕಾಶ್ಮೀರದ ವಿಧಾನಸಭೆಗಿತ್ತು. ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ, ಮೂಲನಿವಾಸಿಗಳೆಂದು ಘೋಷಿತರಾದವರು ಮಾತ್ರ ರಾಜ್ಯ ಸರಕಾರದ ಕೆಲಸಗಳಿಗೆ (ಕೆಲವು ಕೇಂದ್ರ ಲೋಕಸೇವಾ ಸೇವೆಗಳ ವಿನಾಯಿತಿಗೆ ಒಳಪಟ್ಟು) ಅರ್ಜಿ ಸಲ್ಲಿಸಬಹುದಿತ್ತು ಅಥವಾ ಅಲ್ಲಿ ಸ್ಥಿರಾಸ್ತಿ ಹೊಂದಬಹುದಿತ್ತು.
ವಾಸ್ತವವಾಗಿ ಹೇಳುವುದಾದರೆ, ಜಮ್ಮು ಮತ್ತು ಕಾಶ್ಮೀರದ ಮೂಲನಿವಾಸಿಗಳ ವಿಷಯ ಭಾರತೀಯ ಸಂವಿಧಾನದ ೩೭೦ನೇ ವಿಧಿಗಿಂತ ಮುಂಚಿನದು. ರಾಜ್ಯದ ಆಗಿನ ಹಾಗೂ ಕೊನೆಯ ಅರಸ ಮಹಾರಾಜ ಹರಿಸಿಂಗ್ ಆಡಳಿತದಲ್ಲಿ ೧೯೨೭ ಮತ್ತು ೧೯೩೨ರಂದು ಪೌರತ್ವ ಮತ್ತು ಅದಕ್ಕೆ ಸಂಬಂಧಿಸಿದಂತೆ ನಾಗರಿಕರಿಗೆ ಇರುವ ಸೌಲಭ್ಯಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲಾಗಿದೆ. ಸ್ವಾತಂತ್ರಾನಂತರ, ಇವೇ ಕಾನೂನುಗಳನ್ನು ಭಾರತೀಯ ಸಂವಿಧಾನದ ೩೭೦ ಮತ್ತು ೩೫(ಎ) ವಿಧಿಯಡಿ ಸೂಕ್ತ ರೀತಿಯಲ್ಲಿ ಅಳವಡಿಸಿಕೊಳ್ಳಲಾಗಿತ್ತು.
ಸರಕಾರದ ಮೊದಲಿನ ಆದೇಶದಲ್ಲಿ, ಪತ್ರಾಂಕಿತವಲ್ಲದ ಹುದ್ದೆಗಳನ್ನು ಮಾತ್ರ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳಿಗೆ ಮೀಸಲಿಡಲಾಗಿತ್ತು. ಇದು ಕಣಿವೆ ಮೂಲದ ಪ್ರಮುಖ ರಾಜಕೀಯ ಪಕ್ಷಗಳಾದ ನ್ಯಾಶನಲ್ ಕಾನ್ಫರೆನ್ಸ್, ದಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿಗಳಲ್ಲದೇ ಕೇಂದ್ರ ಸರಕಾರದ ಬೆಂಬಲವನ್ನು ಹೊಂದಿದೆ ಎಂದು ನಂಬಲಾದ ಹೊಸ ರಾಜಕೀಯ ಪಕ್ಷ ಅಪ್ನಿ ಪಾರ್ಟಿ ಸಹಿತ ಎಲ್ಲಾ ಪಕ್ಷಗಳ ನಾಯಕರೆಲ್ಲರ ಪಕ್ಷಾತೀತ ವಿರೋಧಕ್ಕೆ ಕಾರಣವಾಯಿತು. ಕಣಿವೆ ರಾಜ್ಯದಲ್ಲಿನ ಅಶಾಂತಿಗೆ ಪ್ರತಿಕ್ರಿಯಿಸಿರುವ ನವದೆಹಲಿಯು, ಸದರಿ ಕಾಯಿದೆಗಳಿಗೆ ಈಗ ತಿದ್ದುಪಡಿ ತಂದಿದೆ. ಕೇವಲ ಜಮ್ಮು ಮತ್ತು ಕಾಶ್ಮೀರದ ಮೂಲನಿವಾಸಿಗಳು ಮಾತ್ರ ಕೇಂದ್ರಾಡಳಿತ ಪ್ರದೇಶದಲ್ಲಿ ಕೆಲಸಗಳಿಗೆ ಅರ್ಜಿ ಹಾಕಬಹುದು ಎಂದು ತಿದ್ದುಪಡಿಯ ಅಂತಿಮ ರೂಪದಲ್ಲಿ ಹೇಳಲಾಗಿದೆ. ಅಲ್ಲದೇ, ನೂತನ ಕೇಂದ್ರಾಡಳಿತ ಪ್ರದೇಶದ ಹೊರಗಿನವರಾಗಿದ್ದರೂ, ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ೧೫ ವರ್ಷಗಳಿಂದ ಯಾರೆಲ್ಲ ವಾಸವಾಗಿದ್ದಾರೋ ಅವರನ್ನೂ ಮೂಲ ನಿವಾಸಿಗಳೆಂದು ಪರಿಗಣಿಸಲಾಗುವುದು ಹಾಗೂ ಅವರೂ ಈ ಕೆಲಸಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆಂದು ಕಾಯಿದೆಯಲ್ಲಿ ಸ್ಪಷ್ಟಪಡಿಸಲಾಗಿದೆ.
ಈ ತಿದ್ದುಪಡಿ ಕಾಯಿದೆಗಳು ಕೂಡಾ ಕಾಶ್ಮೀರ ಕಣಿವೆಯ ರಾಜಕೀಯ ವರ್ಗದ ವಿರೋಧಕ್ಕೆ ಒಳಗಾಗಿವೆ. “ನಮ್ಮ ಯುವಜನತೆಯ ಭವಿಷ್ಯದ ರಕ್ಷಣೆಯನ್ನು ಪ್ರಮುಖ ಆದ್ಯತೆಯಾಗಿಸಿಕೊಂಡಂತೆ, ಜಮ್ಮು ಮತ್ತು ಕಾಶ್ಮೀರದ ಜನಾಂಗೀಯತೆಯ ಮೇಲೆ ನಡೆದಿರುವ ಹಲ್ಲೆಗೆ ಸಂಬಂಧಿಸಿದ ಧಾವಂತವನ್ನೂ ಸಹ ಭಾರತ ಸರಕಾರ ಪರಿಹರಿಸಬೇಕಿತ್ತು. ಹೊಸ ಪೌರತ್ವದ ಹಿಂಬಾಗಿಲನ್ನು ವಿಶಾಲವಾಗಿ ತೆರೆದು, ನೆಪಮಾತ್ರದ ವಿನಾಯಿತಿಯನ್ನು ನೀಡುವುದರಿಂದ, ಜೀವ ಭೀತಿ ತಂದಿರುವ ಸಾಂಕ್ರಾಮಿಕ ರೋಗದ ಈ ಸಂದರ್ಭದಲ್ಲಿ ಭಾರತ ಸರಕಾರದ ಈ ತುರ್ತು ನಡೆಯ ಮೇಲಿನ ಕಳಂಕ ತೊಡೆದುಹೋಗುವುದಿಲ್ಲ” ಎಂದು ಪಿಡಿಪಿ ಹೇಳಿದೆ.
ರಾಜ್ಯ, ಅದರ ರಾಜಕೀಯ ಹಾಗೂ ಜನಾಂಗೀಯ ರಚನೆಯ ಮೇಲೆ ಇದು ಬೀರಬಲ್ಲ ಶಾಶ್ವತ ಪರಿಣಾಮಗಳ ಜೊತೆಗೆ, ಪರಿಷ್ಕರಣೆಗೂ ಮುಂಚೆಯೇ ಸದರಿ ಕಾನೂನಿಗೆ ಸಂಬಂಧಿಸಿದಂತೆ ತೋರಬೇಕಿದ್ದ ಕೆಲ ತುರ್ತು ವಿಷಯಗಳಿದ್ದವು. ವರದಿಗಳ ಪ್ರಕಾರ, ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ಅಂದಾಜು ೮೪,೦೦೦ ಹುದ್ದೆಗಳು ಖಾಲಿ ಇವೆ. ಹೊಸ ಮೂಲನಿವಾಸಿಗಳ ವ್ಯಾಖ್ಯೆಯು ನೇಮಕಾತಿ ಪ್ರಕ್ರಿಯೆ ಮೇಲೆ ಪ್ರಮುಖ ಸೂಚ್ಯಾರ್ಥಗಳನ್ನು ಬೀರಲಿತ್ತಾದರೂ, ತಿದ್ದುಪಡಿಯ ನಂತರ ಅದರ ತೀವ್ರತೆ ಕಡಿಮೆಯಾಗಲಿದೆ.
ಕೇಂದ್ರ ಸರಕಾರವು ಮೊದಲು ಪರಿಸ್ಥಿತಿಯನ್ನು ತೀವ್ರಗೊಳಿಸಿ (ಪತ್ರಾಂಕಿತವಲ್ಲದ ಹುದ್ದೆಗಳನ್ನು ಹೊರತುಪಡಿಸಿ ಮೂಲನಿವಾಸಿಗಳಲ್ಲದವರೂ ಕೆಲಸಕ್ಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳುವ ಮೂಲಕ), ನಂತರ ಕಾಯಿದೆಗಳಿಗೆ ತಿದ್ದುಪಡಿ ತರುವ ಮೂಲಕ ಕೆಲವು ವಿನಾಯಿತಿಗಳನ್ನು ನೀಡಿದಂತೆ ಚೆನ್ನಾಗಿ ಆಟವಾಡಿರುವ ಸಾಧ್ಯತೆಗಳೂ ಇವೆ.
ನಿರ್ಣಯ ಕೈಗೊಂಡಿರುವ ಸಮಯ