ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯಲ್ಲಿ ಗ್ರನೇಡ್ ದಾಳಿ ನಡೆಸಲಾಗಿದ್ದು, ಐವರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶಾಂತವಾಗಿದ್ದ ಕಾಶ್ಮೀರದಲ್ಲಿ ಗ್ರನೇಡ್ ಸದ್ದು...ಐವರಿಗೆ ಗಾಯ! - ಗ್ರನೇಡ್ ದಾಳಿ
ಜಮ್ಮು ಮತ್ತು ಕಾಶ್ಮೀರದ ಅನಂತ್ನಾಗ್ ಜಿಲ್ಲೆಯ ಉಪ ಆಯುಕ್ತರ ಕಚೇರಿ ಬಳಿ ಗ್ರನೇಡ್ ದಾಳಿ ನಡೆಸಲಾಗಿದೆ.
ಗ್ರನೇಡ್ ದಾಳಿ
ಅನಂತ್ನಾಗ್ ಜಿಲ್ಲೆಯ ಜಿಲ್ಲಾಧಿಕಾರಿ ಕಚೇರಿ ಹೊರಗೆ ಗ್ರನೇಡ್ ದಾಳಿ ನಡೆಸಲಾಗಿದೆ. ಘಟನೆಯಲ್ಲಿ ಐವರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದ್ದು, ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
ಸಂವಿಧಾನದ 370ನೇ ವಿಧಿಯನ್ನ ರದ್ಧುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರ ಭಾಗಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು. 2 ದಿನದ ಹಿಂದೆಯಷ್ಟೆ ಜಮ್ಮು ಭಾಗದಲ್ಲಿ ಗೃಹಬಂಧನದಲ್ಲಿದ್ದ ರಾಜಕೀಯ ನಾಯಕರನ್ನ ಬಂಧನದಿಂದ ಮುಕ್ತಗೊಳಿಸಿದ ನಂತರ ಇಂತಹ ಘಟನೆ ನಡೆದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
Last Updated : Oct 5, 2019, 3:16 PM IST