ಅಖ್ನೂರ್(ಜಮ್ಮು ಮತ್ತು ಕಾಶ್ಮೀರ): ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸ್ವಾತಂತ್ರ್ಯ ದಿನಾಚರಣೆಯ ಮುನ್ನ ಭಾರತ, ಪಾಕಿಸ್ತಾನ ಗಡಿಯ ಅಂತಾರಾಷ್ಟ್ರೀಯ ಗಡಿ ಚೀನಾಬ್ ನದಿಯಲ್ಲಿ ಗಸ್ತು ತಿರುಗಿದೆ.
ಸ್ವಾತಂತ್ರ್ಯ ದಿನದ ಮುನ್ನಾ ದಿನ ಚೀನಾಬ್ ನದಿಯಲ್ಲಿ ಬಿಎಸ್ಎಫ್ ಗಸ್ತು - ಸ್ವಾತಂತ್ರ್ಯ ದಿನಾಚರಣೆ
ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವ ಹಿನ್ನೆಲೆ ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಭಾರತ ಮತ್ತು ಪಾಕಿಸ್ತಾನ ಗಡಿಯ ಚೀನಾಬ್ ನದಿಯಲ್ಲಿ ಗಸ್ತು ತಿರುಗಿ ಭದ್ರತೆಯನ್ನು ಪರಿಶೀಲಿಸಿದೆ.
ಅಂತಾರಾಷ್ಟ್ರೀಯ ಗಡಿಯಲ್ಲಿ ಸುರಕ್ಷತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಬಿಎಸ್ಎಫ್ ಯೋಧರನ್ನು ನಿಯೋಜಿಸಲಾಗಿದೆ. "ನದಿಗಳಲ್ಲಿ ಗಸ್ತು ತಿರುಗಲು ಈ ಸೈನಿಕರಿಗೆ ವಿಶೇಷ ತರಬೇತಿ ನೀಡಲಾಗಿದೆ. ಭಾರತ ಈ ವರ್ಷ ಆಗಸ್ಟ್ 15 ರಂದು 74 ನೇ ಸ್ವಾತಂತ್ರ್ಯ ದಿನವನ್ನ ಆಚರಿಸಲಿದೆ.
ಇದೇ ಆಗಸ್ಟ್ 12 ರಂದು, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಗಾಯಗೊಂಡ ಇಬ್ಬರು ಭಾರತೀಯ ಸೈನಿಕರಲ್ಲಿ ಒಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಸಿಪಾಯಿ ಜುಲಾಜಿತ್ ಯಾದವ್ ಎದೆಗೆ ಗುಂಡು ತಗುಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಿನ್ನೆ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಜಿಲ್ಲೆಯ ಕಮ್ರಾಜಿಪೊರಾದಲ್ಲಿ ಭಯೋತ್ಪಾದಕನೊಬ್ಬನನ್ನು ಭದ್ರತಾ ಪಡೆಗಳು ಹೊಡೆದುರುಳಿಸಿವೆ.