ಶ್ರೀನಗರ: ಸೈನಿಕನೊಂದಿಗೆ ಇಬ್ಬರು ಹುಡುಗಿಯರು ಅನುಮಾನಾಸ್ಪದವಾಗಿ ಕಂಡು ಬಂದ ಹಿನ್ನೆಲೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೂವರನ್ನೂ ಬಂಧಿಸಲಾಗಿದೆ.
ಅನುಮಾನಾಸ್ಪದ ಓಡಾಟ: ಸೈನಿಕನ ಜತೆ ಇಬ್ಬರು ಬಾಲಕಿಯರ ಬಂಧನ - srinagara latet news
17 ನೇ ಬಿಹಾರ ರೆಜಿಮೆಂಟ್‌ನ ಸೇನಾ ಸೈನಿಕ ಸಿಪಾಯಿ ರೋಶನ್ ಕುಮಾರ್ ಅವರೊಂದಿಗೆ ಇಬ್ಬರು ಹುಡುಗಿಯರಿದ್ದು, ಅನುಮಾನಾಸ್ಪದವಾಗಿ ಕಂಡುಬಂದ ಇವರನ್ನು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.
17ನೇ ಬಿಹಾರ ರೆಜಿಮೆಂಟ್‌ನ ಸೇನಾ ಸೈನಿಕ ಸಿಪಾಯಿ ರೋಶನ್ ಕುಮಾರ್ ಅವರೊಂದಿಗೆ ಬಂದ ಇಬ್ಬರು ಹುಡುಗಿಯರನ್ನ ವಶಕ್ಕೆ ಪಡೆಯಲಾಗಿದೆ. ಈ ಇಬ್ಬರು ಬಾಲಕಿಯರು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕರ್ಣಾದವರಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದೇ ವಿಮಾನ ನಿಲ್ದಾಣದಲ್ಲಿ ಈ ಮೊದಲು ಇಂತಹುದೇ ಘಟನೆ ನಡೆದಿದ್ದು, ಇದು ಎರಡನೇ ಘಟನೆಯಾಗಿದೆ.
ಸೆಪ್ಟೆಂಬರ್ 12 ರಂದು ಸೇನಾ ಸೈನಿಕ ಲ್ಯಾನ್ಸ್ ನಾಯಕ್ ಅಶೋಕ್ ಕುಮಾರ್ ಪಾಲ್ ಜೊತೆಗೆ ಇಬ್ಬರು ಹುಡುಗಿಯರು ಇದ್ದರು. ಅನುಮಾನಾಸ್ಪದವಾಗಿ ಕಂಡು ಬಂದ ಇವರನ್ನು ಬಂಧಿಸಲಾಗಿತ್ತು. ಕುಮಾರ್ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗಿದೆ ಎಂದು ಮಿಲಿಟರಿ ಮೂಲಗಳು ತಿಳಿಸಿವೆ.