ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ನೌಗಮ್ ಸೆಕ್ಟರ್‌ನ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಒಳನುಸುಳಲು ಹೊಂಚು ಹಾಕುತ್ತಿದ್ದ ಉಗ್ರರ ಪ್ರಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದ್ದು, ಎನ್‌ಕೌಂಟರ್‌ನಲ್ಲಿ ಇಬ್ಬರು ಉಗ್ರರನ್ನು ಹೊಡೆದುರುಳಿಸಿದೆ.
ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಉಗ್ರರ ಹತ್ಯೆ - ಕುಪ್ವಾರಾ ಜಿಲ್ಲೆ
ಕುಪ್ವಾರಾ ಜಿಲ್ಲೆಯ ನೌಗಮ್ ಸೆಕ್ಟರ್‌ನಲ್ಲಿ ಉಗ್ರರ ನುಸುಳುವಿಕೆ ಗಮನಿಸಿದ ಭಾರತೀಯ ಸೇನೆ ತಕ್ಷಣವೇ ಎನ್ಕೌಂಟರ್ ನಡೆಸಿ, ಇಬ್ಬರನ್ನು ಹತ್ಯೆ ಮಾಡಿದೆ.
![ಗಡಿಯೊಳಗೆ ನುಸುಳಲು ಯತ್ನಿಸುತ್ತಿದ್ದ ಇಬ್ಬರು ಉಗ್ರರ ಹತ್ಯೆ Army foils infiltration attempt along LoC](https://etvbharatimages.akamaized.net/etvbharat/prod-images/768-512-7980006-thumbnail-3x2-megha.jpg)
ಉಗ್ರರ ಹತ್ಯೆ
ಇಂದು ಮುಂಜಾನೆ, ಕುಪ್ವಾರಾ ಜಿಲ್ಲೆಯ ನೌಗಮ್ ಸೆಕ್ಟರ್‌ನಲ್ಲಿ ಉಗ್ರರ ನುಸುಳುವಿಕೆಯನ್ನು ಗಮನಿಸಿದ ನಮ್ಮ ಸೇನೆ ತಕ್ಷಣವೇ ಎನ್ಕೌಂಟರ್ ನಡೆಸಿ, ಇಬ್ಬರನ್ನು ಹತ್ಯೆ ಮಾಡಿದೆ. ಉಗ್ರರ ಬಳಿಯಿದ್ದ ಎರಡು ಎಕೆ -47 ರೈಫಲ್‌ಗಳು, ಮದ್ದು ಗುಂಡುಗಳು ಸೇರಿದಂತೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ರಕ್ಷಣಾ ವಕ್ತಾರರು ತಿಳಿಸಿದ್ದಾರೆ.
ಜೂನ್ ಆರಂಭದಲ್ಲಿ ನೌಗಮ್ ವಲಯದಲ್ಲೇ ಗಡಿ ನಿಯಂತ್ರಣ ರೇಖೆಯ ಉದ್ದಕ್ಕೂ ಒಳನುಸುಳುವ ಉಗ್ರರ ಪ್ರಯತ್ನವನ್ನು ಸೇನೆ ವಿಫಲಗೊಳಿಸಿತ್ತು.