ಕರ್ನಾಟಕ

karnataka

ETV Bharat / bharat

ಸಮೀಕ್ಷೆಗೆ ತೆರಳಿದ ಸಿಬ್ಬಂದಿಗೆ ನಿಂದಿಸಿದರೆ ಹುಷಾರ್.. ಕೆಲವರ ವಿರುದ್ಧ ಎಫ್​ಐಆರ್​ ದಾಖಲು!! - ಜಮಾತ್​ಗೆ ತೆರಳಿದ್ದ ಜನರ ಆರೋಗ್ಯ ಪರೀಕ್ಷೆ

ಈ ಸಮಯದಲ್ಲಿ ಅವರು ಜಮಾತ್​ಗೆ ತೆರಳಿದ್ದ ಜನರ ಆರೋಗ್ಯ ಪರೀಕ್ಷೆ ಮಾಡಬೇಕಿತ್ತು. ಈ ಸಂದರ್ಭದಲ್ಲಿ ಗ್ರಾಮದ ಬಬ್ಲು, ಹಬೀಬ್, ಸಲೀಮ್, ಹಮೀದ್ ಮತ್ತು ಘಫರ್ ಅವರು ಅಶ್ಲೀಲ ಪದಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿದ್ದಾರೆ.

jamatis-misbehaved-with-anms-doing-surveys
ಸಿಬ್ಬಂದಿಗೆ ನಿಂದಿಸಿದವರ ವಿರುದ್ಧ ಎಫ್​ಐಆರ್​

By

Published : Apr 11, 2020, 8:36 PM IST

Updated : Apr 11, 2020, 10:04 PM IST

ಭರತಪುರ,(ರಾಜಸ್ಥಾನ): ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಸಮೀಕ್ಷೆ ಕಾರ್ಯಗಳನ್ನು ನಡೆಸುತ್ತಿರುವ ಎಎನ್‌ಎಂ ಮತ್ತು ಆಶಾ ಕಾರ್ಯಕರ್ತೆಯರೊಂದಿಗೆ ಅಸಭ್ಯ ವರ್ತನೆ ತೋರಿದ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಎಎನ್‌ಎಂ ಸಿಬ್ಬಂದಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಸಮೀಕ್ಷೆ ಕಾರ್ಯದಲ್ಲಿ ಸಹಕರಿಸದವರ ವಿರುದ್ಧ ಕಠಿಣ ಕ್ರಮಕೈಗೊಂಡು ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿ ನಿರ್ದೇಶನ ನೀಡಿದ್ದಾರೆ. ಮಾಹಿತಿಯ ಪ್ರಕಾರ ಭರತಪುರದ ನಿವಾಸಿ ಎಎನ್‌ಎಂ ಕೀರ್ತಿ ಸಿಂಘಾಲ್ ಅವರು ರುಪ್ವಾಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅದರಲ್ಲಿ ಅವರು ಕೊರೊನಾ ವೈರಸ್ ತಡೆಗಟ್ಟುವಿಕೆಯ ಸಮೀಕ್ಷೆ ನಡೆಸಲು ಸಮುದಾಯ ಗುರುತಿನ ಕೇಂದ್ರ ಖನುವಾನ್‌ನಿಂದ ತಮ್ಮ ಗುರುತಿನ ಚೀಟಿ ಮತ್ತು ಸಮವಸ್ತ್ರದೊಂದಿಗೆ ತೆರಳಿದ್ದರು. ಈ ಸಮಯದಲ್ಲಿ ಅವರು ಜಮಾತ್​ಗೆ ತೆರಳಿದ್ದ ಜನರ ಆರೋಗ್ಯ ಪರೀಕ್ಷೆ ಮಾಡಬೇಕಿತ್ತು. ಈ ಸಂದರ್ಭದಲ್ಲಿ ಗ್ರಾಮದ ಬಬ್ಲು, ಹಬೀಬ್, ಸಲೀಮ್, ಹಮೀದ್ ಮತ್ತು ಘಫರ್ ಅವರು ಅಶ್ಲೀಲ ಪದಗಳಿಂದ ನಿಂದಿಸಿ, ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ದೂರಿದ್ದಾರೆ.

ಸಮೀಕ್ಷೆಯಲ್ಲಿ ನೀವು ಸಹಕರಿಸದಿದ್ದರೆ ಎಫ್ಐಆರ್ :ಜಿಲ್ಲೆಯಾದ್ಯಂತ ವಿವಿಧ ಸ್ಥಳದಿಂದ ಬರುವ ದೂರುಗಳನ್ನು ಗಮನದಲ್ಲಿಟ್ಟುಕೊಂಡು, ಡಿಸಿ ನಾಥ್ಮಲ್ ಡಿಡೆಲ್ ಸಮೀಕ್ಷಾ ಕಾರ್ಯಗಳಲ್ಲಿ ಸಹಕರಿಸದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.

Last Updated : Apr 11, 2020, 10:04 PM IST

ABOUT THE AUTHOR

...view details