ಕರ್ನಾಟಕ

karnataka

ETV Bharat / bharat

ತಮಿಳುನಾಡಿನಲ್ಲಿ ಇನ್ನು ಜಲ್ಲಿಕಟ್ಟು ದರ್ಬಾರ್​....15 ರಿಂದ 30ರವರೆಗೆ ಹಬ್ಬದ ಹರ್ಷ - ಪೊಂಗಲ್

ಸುಪ್ರೀಂಕೋರ್ಟ್​ ಈ ಮೊದಲು ಜಲ್ಲಿಕಟ್ಟು ಆಚರಣೆಗೆ ತಡೆಯೊಡ್ಡಿದ್ದರಾದರೂ ಇಡೀ ರಾಜ್ಯವೇ ಒಟ್ಟೂಗೂಡಿ ನ್ಯಾಯಲಯದ ಕದ ತಟ್ಟಿ ಈ ಹಬ್ಬದ ಆಚರಣೆಗೆ ಅನುಮತಿ ಪಡೆದು ಈಗ ವಿಜೃಂಭಣೆಯಿಂದ ಈ ಹಬ್ಬ ಆಚರಿಸುತ್ತಿದೆ.

Jallikattu
ಜಲ್ಲಿಕಟ್ಟು ಆಟದ ಒಂದು ದೃಶ್ಯ

By

Published : Jan 14, 2020, 11:03 AM IST

ಮಧುರೈ: ಪೊಂಗಲ್​ ತಮಿಳುನಾಡಿನ ರಾಜ್ಯದ ಹಬ್ಬ ಎಂದೇ ಪರಿಗಣಿಸಲ್ಪಟ್ಟಿದೆ. ಇಲ್ಲಿ ಪೊಂಗಲ್​ ಅನ್ನು ವೈಭವದಿಂದ ಆಚರಿಸಲಾಗುತ್ತದೆ. ಸುಗ್ಗಿ ಹಬ್ಬದ ನಿಮಿತ್ತ ಜಲ್ಲಿಕಟ್ಟನ್ನು ಅತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ.

ಮಧುರೈ ಜಿಲ್ಲೆಯಲ್ಲಿ ಜನವರಿ 15- ರಿಂದ ಜನವರಿ 31 ರವರೆಗೂ ಜಲ್ಲಿಕಟ್ಟು ಸ್ಪರ್ಧೆ ನಡೆಯುತ್ತವೆ. ಅವನಿಯಾಪುರಂನಲ್ಲಿ 730, ಅಲಂಗನಲ್ಲೂರಿನಲ್ಲಿ 700 ಹಾಗೂ ಪಾಲಂಮೇಡುವಿನಲ್ಲಿ ಸುಮಾರು 650 ಗೂಳಿಗಳು ಜಲ್ಲಿಕಟ್ಟು ಅಖಾಡಕ್ಕೆ ಇಳಿಯಲು ಸನ್ನದ್ಧವಾಗಿವೆ. ಅವನಿಪುರಂನಲ್ಲಿ ಜಲ್ಲಿಕಟ್ಟು ನಿನ್ನೆಯಿಂದಲೇ ಆರಂಭವಾಗಿದೆ.

ಜಲ್ಲಿಕಟ್ಟು ಆಟದ ಒಂದು ದೃಶ್ಯ

ಅಖಾಡದಲ್ಲಿ ಹೋರಿಗಳನ್ನ ಬಿಟ್ಟು ಅವುಗಳನ್ನ ಪಳಗಿಸುವ ಪಂದ್ಯದ ನೋಟವೇ ಭಯಾನಕ ಅಷ್ಟೇ ರೋಚಕ.. ಇದು ಪ್ರೇಕ್ಷಕರನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ ಎಂಬುದು ಸುಳ್ಳಲ್ಲ... ಜಲ್ಲಿಕಟ್ಟಿಗೆ ಸುಪ್ರೀಂ ನಿಷೇಧ ಹೇರಿದ್ದರಿಂದ ತಮಿಳುನಾಡಿಗೆ ತಮಿಳುನಾಡೇ ಸಿಡಿದೆದ್ದಿತ್ತು. ಅದೆಲ್ಲ ಈಗ ಮರೆಯಾಗಿದ್ದು, ಹಬ್ಬದ ಕಳೆ ಹೆಚ್ಚಾಗುತ್ತಿದೆ.

ABOUT THE AUTHOR

...view details