ರಾಂಚಿ:ಜಾರ್ಖಂಡ್ನಲ್ಲಿ ಎರಡನೇ ಹಂತದ ಚುನಾವಣೆಗೆ ಇಂದು ಮತದಾನ ನಡೆಯುತ್ತಿದೆ. ಇಂದು 20 ಸ್ಥಾನಗಳಿಗೆ ಜನ ತಮ್ಮ ಹಕ್ಕು ಚಲಾವಣೆ ಮಾಡುತ್ತಿದ್ದಾರೆ.
ಜಾರ್ಖಂಡ್ ಅಸೆಂಬ್ಲಿ ಎಲೆಕ್ಷನ್ ಈ ನಡುವೆ ಗುಮ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಗುಂಡಿನ ಸದ್ದು ಕೇಳಿ ಬಂದಿದೆ. ದುಷ್ಕರ್ಮಿಗಳು ಹಾರಿಸಿದ ಗುಂಡಿಗೆ ಒಬ್ಬ ಬಲಿಯಾಗಿದ್ದಾನೆ. ಬ್ಲಾಕ್ ಡೆವೆಲಪ್ಮೆಂಟ್ ಅಧಿಕಾರಿಯ ವಾಹನ ಗುರಿಯಾಗಿಸಿಕೊಂಡು ಈ ದಾಳಿ ನಡೆದಿದೆ ಎನ್ನಲಾಗಿದೆ.
ಜಾರ್ಖಂಡ್ ಅಸೆಂಬ್ಲಿ ಎಲೆಕ್ಷನ್ ಬಂಗಿಯ ಬೂತ್ ನಂಬರ್ 36 ರಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳಕ್ಕೆ ರೈಲ್ವೆ ಸುರಕ್ಷತಾ ದಳ (ಆರ್ಪಿಎಫ್) ದೌಡಾಯಿಸಿದೆ. ಈ ಸಂಬಂಧ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
ಒಟ್ಟು ಐದು ಹಂತಗಳಲ್ಲಿ ಆಯೋಗ ಚುನಾವಣೆ ನಡೆಸುತ್ತಿದೆ. ಮೊದಲ ಹಂತದ ಮತದಾನ ಪೂರ್ಣಗೊಂಡು ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ.ಡಿಸೆಂಬರ್ 12, 16 ಮತ್ತು 20 ರಂದು ಉಳಿದ ಹಂತದ ಮತದಾನ ನಡೆಯಲಿದ್ದು, ಇದೇ ತಿಂಗಳ 23 ರಂದು ಫಲಿತಾಂಶ ಪ್ರಕಟವಾಗಲಿದೆ.
ಜಾರ್ಖಂಡ್ ಅಸೆಂಬ್ಲಿ ಎಲೆಕ್ಷನ್