ಕರ್ನಾಟಕ

karnataka

ETV Bharat / bharat

ಏಮ್ಸ್ ತೀವ್ರ ನಿಗಾ ಘಟಕದಲ್ಲಿ ಅರುಣ್​​​ ಜೇಟ್ಲಿಗೆ ಚಿಕಿತ್ಸೆ... ವೈದ್ಯರು ತಿಳಿಸಿದ್ರು ಈ ಮಾಹಿತಿ! - ತೀವ್ರ ಅನಾರೋಗ್ಯ

ಏಮ್ಸ್​​ ತೀವ್ರ ನಿಗಾ ಘಟಕದಲ್ಲಿ ಅರುಣ್​ ಜೇಟ್ಲಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಸದ್ಯ ಅವರ ಆರೋಗ್ಯ ಸ್ಥಿತಿ ಸುಧಾರಣೆಯಾಗಿದೆ ಎಂದು ವೈದ್ಯರ ತಂಡ ಮಾಹಿತಿ ನೀಡಿದೆ.

ಅರುಣ್​ ಜೇಟ್ಲಿ/Arun Jaitley

By

Published : Aug 9, 2019, 9:27 PM IST

ನವದೆಹಲಿ:ಉಸಿರಾಟದ ತೊಂದರೆಯಿಂದ ಏಮ್ಸ್​ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವ ಕೇಂದ್ರದ ಮಾಜಿ ಹಣಕಾಸು ಸಚಿವ ಅರುಣ್​ ಜೇಟ್ಲಿ ಆರೋಗ್ಯಕ್ಕೆ ಸಂಬಂಧಿಸಿದಂತೆ ಏಮ್ಸ್​​ ವೈದ್ಯಕೀಯ ಪ್ರಕಟಣೆ ಹೊರಡಿಸಿದ್ದು, ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ವೈದ್ಯರು ನೀಡಿರುವ ಮಾಹಿತಿ ಪ್ರಕಾರ ಇಂದು ಬೆಳಗ್ಗೆ 10ಗಂಟೆಗೆ ಅವರು ಏಮ್ಸ್​ಗೆ ದಾಖಲಾಗಿದ್ದು, ಪ್ರಸ್ತುತ ಹೃದ್ರೋಗ ಹಾಗೂ ಇತರ ತಜ್ಞ ವೈದ್ಯರ ತಂಡ ತೀವ್ರ ನಿಗಾವಹಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದು, ಆರೋಗ್ಯ ಸ್ಥಿತಿ ಸುಧಾರಣೆಯಾಗಿದೆ ಎಂದು ಹೇಳಿದ್ದಾರೆ.

ಏಮ್ಸ್ ಆಸ್ಪತ್ರೆಗೆ ದಾಖಲಾದ ಮಾಜಿ ವಿತ್ತ ಸಚಿವ ಅರುಣ್​ ಜೇಟ್ಲಿ... ಹಾಸ್ಪಿಟಲ್​​ಗೆ ದೌಡಾಯಿಸಿದ ಅಮಿತ್​ ಶಾ!

ಕಳೆದ ಅನೇಕ ತಿಂಗಳಿಂದ ತೀವ್ರ ಅನಾರೋಗ್ಯಕ್ಕೆ ಒಳಗಾಗಿರುವ ಅವರು,ಉಸಿರಾಟದ ತೊಂದರೆಯಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ತಿಳಿದು ಬಂದಿತ್ತು. ಈಗಾಗಲೇ ಏಮ್ಸ್​ ಆಸ್ಪತ್ರೆಗೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್​ ಶಾ ಹಾಗೂ ಆರೋಗ್ಯ ಸಚಿವ ಹರ್ಷವರ್ಧನ್​ ಭೇಟಿ ನೀಡಿ, ಅವರ ಆರೋಗ್ಯದ ಮಾಹಿತಿ ಪಡೆದುಕೊಂಡಿದ್ದಾರೆ.

ABOUT THE AUTHOR

...view details