ನವದೆಹಲಿ: ಸುಪ್ರೀಂ ಕೋರ್ಟ್ ತನ್ನ ಹಿಂದಿನ ಆದೇಶವನ್ನು ಮಾರ್ಪಡಿದ್ದು, ಪುರಿಯಲ್ಲಿ ಜಗನ್ನಾಥ ರಥಯಾತ್ರೆ ದೇವಾಲಯ ಸಮಿತಿಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಸಮನ್ವಯದೊಂದಿಗೆ ಕೋವಿಡ್ಗೆ ಸಂಬಂಧಿಸಿದ ವಿಚಾರದಲ್ಲಿ ರಾಜಿ ಮಾಡಿಕೊಳ್ಳದೆ ಕಾರ್ಯಕ್ರಮ ನಡೆಸಲು ತಿಳಿಸಿದೆ.
ಜಗನ್ನಾಥ ರಥ ಎಳೆಯುವವರೆಲ್ಲರೂ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು: ಸುಪ್ರೀಂ ಕೋರ್ಟ್ - ನವದೆಹಲಿ
ಪುರಿಯ ಜಗನ್ನಾಥ ರಥವನ್ನು 500 ಕ್ಕಿಂತ ಹೆಚ್ಚು ಜನರು ಎಳೆಯುವಂತಿಲ್ಲ. ಈ ಕಾರಣದಿಂದ ಈ ಎಲ್ಲಾ 500 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಮಾತ್ರ ಅಂತವರಿಗೆ ರಥ ಎಳೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ರಥವನ್ನು 500 ಕ್ಕಿಂತ ಹೆಚ್ಚು ಜನರು ಎಳೆಯುವಂತಿಲ್ಲ. ಈ ಕಾರಣದಿಂದ ಈ ಎಲ್ಲಾ 500 ಜನರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಪರೀಕ್ಷೆಯಲ್ಲಿ ನೆಗೆಟಿವ್ ಬಂದರೆ ಮಾತ್ರ ಅಂತವರಿಗೆ ರಥ ಎಳೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ ಅರವಿಂದ್ ಬೊಬ್ಡೆ ನೇತೃತ್ವದ ಸುಪ್ರೀಂ ಕೋರ್ಟ್ನ ಮೂರು ನ್ಯಾಯಾಧೀಶರ ಪೀಠವು ಆದೇಶಿಸಿದೆ.
ರಥವನ್ನು ಎಳೆಯುವಲ್ಲಿ ಮುಂದಾಗುವ ಪ್ರತಿಯೊಬ್ಬರೂ ರಥಯಾತ್ರೆ ಮೊದಲು ಮತ್ತು ನಂತರ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂದು ನ್ಯಾಯಾಲಯ ಸೂಚಿಸಿದೆ. ಇನ್ನು ಪುರಿ ನಗರಕ್ಕೆ ಪ್ರವೇಶ ಕಲ್ಪಿಸುವ ಎಲ್ಲಾ ಸ್ಥಳಗಳು, ಅಂದರೆ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ, ಬಸ್ ನಿಲ್ದಾಣಗಳನ್ನು ರಥಯಾತ್ರೆ ಅವಧಿಯಲ್ಲಿ ಮುಚ್ಚಲಾಗುವುದು ಎಂದು ನ್ಯಾಯಾಲಯ ಹೇಳಿದೆ.