ಅಮರಾವತಿ: ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಹತ್ವದ ಸಭೆ ನಡೆಸಲು ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಇಂದು ನವದೆಹಲಿಗೆ ತೆರಳಲಿದ್ದಾರೆ.
'ಮೂರು ರಾಜಧಾನಿಗಳ' ವಿಚಾರ, ಮೋದಿ ಭೇಟಿ ಮಾಡಲಿರುವ ಜಗನ್...! - ಆಡಳಿತವನ್ನು ವಿಕೇಂದ್ರೀಕರಿಸುವ
ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರು ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಮಹತ್ವದ ಸಭೆ ನಡೆಸಲು ನವದೆಹಲಿಯನ್ನು ತಲುಪಲಿದ್ದಾರೆ. ಮುಖ್ಯಮಂತ್ರಿಗಳು ರಾಜ್ಯ ಸಚಿವ ಸಭೆ ಮುಗಿದ ಕೂಡಲೇ ಮಧ್ಯಾಹ್ನ 12.45 ಕ್ಕೆ ನವದೆಹಲಿಗೆ ಹಾರಲಿದ್ದು, ಸಂಜೆ 4.10 ರಿಂದ 6 ರವರೆಗೆ ಪ್ರಧಾನಮಂತ್ರಿಯೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಿಎಂ ಕಚೇರಿ ತಿಳಿಸಿದೆ.
ಮುಖ್ಯಮಂತ್ರಿಗಳು ರಾಜ್ಯ ಸಚಿವ ಸಭೆ ಮುಗಿದ ಕೂಡಲೇ ಮಧ್ಯಾಹ್ನ 12.45 ಕ್ಕೆ ನವದೆಹಲಿಗೆ ಹಾರಲಿದ್ದು, ಸಂಜೆ 4.10 ರಿಂದ ಸಂಜೆ 6 ರವರೆಗೆ ಪ್ರಧಾನಮಂತ್ರಿಯೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಸಿಎಂ ಕಚೇರಿ ತಿಳಿಸಿದೆ. "ನಾವು ಕೆಲವು ಸಮಯದಿಂದ ಪ್ರಧಾನ ಮಂತ್ರಿಯ ಭೇಟಿಗಾಗಿ ಪ್ರಯತ್ನಿಸುತ್ತಿದ್ದೆವು, ಆದರೆ ಇದ್ದಕ್ಕಿದ್ದಂತೆ ನಮಗೆ ತಿಳಿಸಲಾಗಿದೆ" ."ಮೂರು ರಾಜಧಾನಿಗಳ" ಸಮಸ್ಯೆಯನ್ನು ಹೊರತುಪಡಿಸಿ, ಪಿಎಂರೊಂದಿಗೆ ಇನ್ನಿತರ ವಿಷಯಗಳನ್ನೂ ಚರ್ಚೆ ನಡೆಸಲಾಗುವುದು ಎಂದು ಆಂಧ್ರ ಸರ್ಕಾರದ ಮೂಲಗಳು ತಿಳಿಸಿವೆ. "ಆಡಳಿತ ವಿಕೇಂದ್ರೀಕರಿಸುವ" ತನ್ನ ಸರ್ಕಾರದ ಯೋಜನೆಗಳನ್ನು ಜಗನ್ ಪ್ರಧಾನಮಂತ್ರಿಗೆ ವಿವರಿಸುವ ನಿರೀಕ್ಷೆಯಿದೆ.