ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪೂರ್ವಾಂಚಲ ಪ್ರದೇಶದ ಜನರನ್ನು ಅಪಮಾನ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಜೆ ಪಿ ನಡ್ಡಾ ಆರೋಪಿಸಿದ್ದಾರೆ.
ಜನರನ್ನು ಗೌರವಿಸಲು ಸಾಧ್ಯವಾಗದವರು ಏನಾದರೂ ಒಳ್ಳೆಯ ಕೆಲಸವನ್ನು ಮಾಡಲು ಸಾಧ್ಯವೇ ಎಂದು ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ. ಎಎಪಿ ನಾಯಕನನ್ನು ಗುರಿಯಾಗಿಸಿಕೊಂಡು ನಡ್ಡಾ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನಲ್ಲಿ ಕೇಜ್ರಿವಾಲ್ ಅವರ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.
ದೆಹಲಿಯ ಅಭಿವೃದ್ಧಿಯಲ್ಲಿ ಪೂರ್ವಾಂಚಲ್ನ ಜನರ ಕೊಡುಗೆ ಹೆಚ್ಚಿನದಾಗಿದೆ. ಅದನ್ನು ಕೇಜ್ರಿವಾಲ್ ಅರ್ಥ ಮಾಡಿಕೊಂಡಿಲ್ಲ. ಅಲ್ಲಿನ ಸಹೋದರರನ್ನು ಅವಮಾನಿಸುವುದು ಮುಖ್ಯಮಂತ್ರಿಗೆ ಸರಿಹೊಂದುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದಲ್ಲದೆ ನೀರಿನ ವಿಚಾರಕ್ಕೆ ಕೇಜ್ರಿವಾಲ್ರನ್ನು ಕೆಣಕಿರುವ ನಡ್ಡಾ, ಎಎಪಿ ನಾಯಕರು 2014 ರಿಂದಲೂ ಪ್ರತಿ ಮನೆಗೂ ನೀರನ್ನು ತಲುಪಿಸುವ ಭರವಸೆಯನ್ನು ನೀಡುತ್ತಿದ್ದಾರೆ. ಆದರೆ ಅದ್ದಿನ್ನು ಈಡೇರಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.