ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯ ಬಿಜ್‌ಬೆಹರಾದಲ್ಲಿ ಶುಕ್ರವಾರ ದಾಳಿ ನಡೆಸಿದ ಭಯೋತ್ಪಾದಕನನ್ನು ಜಮ್ಮು ಕಾಶ್ಮೀರ ಪೊಲೀಸರು ಗುರುತಿಸಿದ್ದಾರೆ. ಈತನ ದಾಳಿಯಿಂದ ಐದು ವರ್ಷದ ಬಾಲಕ ಸಾವಿಗೀಡಾಗಿದ್ದು, ಸಿಆರ್‌ಪಿಎಫ್ ಯೋಧ ಕೂಡ ಹುತಾತ್ಮರಾಗಿದ್ದರು
ಯೋಧ, 5 ವರ್ಷದ ಬಾಲಕನ ಹತ್ಯೆ: ಭಯೋತ್ಪಾದಕನನ್ನು ಗುರುತಿಸಿದ ಪೊಲೀಸರು - illing of CRPF jawan, 5-year-old
ಜಮ್ಮು ಕಾಶ್ಮೀರ ಪೊಲೀಸರು ಭಯೋತ್ಪಾದಕನ ಬಗ್ಗೆ ಟ್ವೀಟ್ ಮಾಡಿದ್ದು,ಭಯೋತ್ಪಾದಕ ಝಾಹಿದ್ ದಾಸ್ ಜೆಕೆಐಎಸ್ ಸಂಘಟನೆಗೆ ಸೇರಿದವನು ಎಂದು ತಿಳಿಸಿದ್ದಾರೆ.
ಭಯೋತ್ಪಾದಕನನ್ನು ಗುರುತಿಸಿದ ಪೊಲೀಸರು
ಜಮ್ಮು ಕಾಶ್ಮೀರ ಪೊಲೀಸರು ಈ ಬಗ್ಗೆ ಟ್ವೀಟ್ ಮಾಡಿದ್ದು,ಭಯೋತ್ಪಾದಕ ಝಾಹಿದ್ ದಾಸ್ ಜೆಕೆಐಎಸ್ ಸಂಘಟನೆಗೆ ಸೇರಿದವನು ಎಂದು ತಿಳಿಸಿದ್ದಾರೆ.
ಉಗ್ರರು ನಡೆಸಿದ ಗುಂಡಿನ ದಾಳಿಗೆ ಐದು ವರ್ಷದ ನಿಹಾನ್ ಮೃತಪಟ್ಟಿದ್ದ ಹಾಗೆಯೇ ಇದೇ ವೇಳೆ ಸಿಆರ್‌ಪಿಎಫ್ ಯೋಧ ಶ್ಯಾಮಲ್ ಕುಮಾರ್ ಎಂಬುವರು ಕೂಡ ಹುತಾತ್ಮರಾಗಿದ್ದರು. ಮಾಹಿತಿ ಪ್ರಕಾರ ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ನಿಹಾನ್ ತಂದೆಯ ಜೊತೆ ಬಸ್ಸ್ಟಾಪ್ನಲ್ಲಿ ಇದ್ದಾಗ ಗುಂಡಿನ ದಾಳಿಗೆ ಸಿಲುಕಿ ಸಾವಿಗೀಡಾಗಿದ್ದಾನೆ.