ಕರ್ನಾಟಕ

karnataka

ETV Bharat / bharat

ಜಮ್ಮು ಕಾಶ್ಮೀರ: ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದ ಖದೀಮ ಅರೆಸ್ಟ್​ - ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸುತ್ತಿದ್ದವನ ಬಂಧನ

ಬಂಧಿತ ಆರೋಪಿ 2018ರಿಂದ ಸಾಂಬಾದ ಪ್ರಮುಖ ಸ್ಥಳಗಳ ಫೊಟೋ ತೆಗೆದು ಅವುಗಳನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದು, ಅದಕ್ಕಾಗಿ ಭಾರೀ ಮೊತ್ತವನ್ನು ಪಡೆಯುತ್ತಿದ್ದ ಎಂದು ಆರೋಪಿಸಲಾಗಿದೆ. ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

arrest
arrest

By

Published : Oct 9, 2020, 2:32 PM IST

ಸಾಂಬಾ (ಜಮ್ಮು ಮತ್ತು ಕಾಶ್ಮೀರ): ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಆರೋಪದ ಮೇಲೆ ಜಮ್ಮು ಕಾಶ್ಮೀರ ಪೊಲೀಸರು ಸಾಂಬಾ ಜಿಲ್ಲೆಯ ಕುಲ್ಜೀತ್ ಕುಮಾರ್ ಎಂಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಕುಲ್ಜೀತ್ 2018ರಿಂದ ಸಾಂಬಾದ ಪ್ರಮುಖ ಸ್ಥಳಗಳ ಫೊಟೋ ತೆಗೆದು ಅವುಗಳನ್ನು ಪಾಕಿಸ್ತಾನಕ್ಕೆ ಕಳುಹಿಸುತ್ತಿದ್ದ. ಅದಕ್ಕಾಗಿ ಆತ ಭಾರೀ ಮೊತ್ತವನ್ನು ಪಡೆಯುತ್ತಿದ್ದ ಎಂದು ಆರೋಪಿಸಲಾಗಿದೆ.

ಈ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಭದ್ರತಾ ಪಡೆಯ ಸಿಬ್ಬಂದಿಯು ಸಾಂಬಾ ಪೊಲೀಸರ ಸಹಕಾರದಿಂದ ಆರೋಪಿಯನ್ನು ಬಂಧಿಸಿದ್ದಾರೆ.

ಅನೇಕ ಪ್ರಮುಖ ಸ್ಥಳಗಳ ಫೊಟೋಗಳನ್ನು ಹೊಂದಿದ್ದ ನಾಲ್ಕು ಮೊಬೈಲ್ ಫೋನ್‌ಗಳು ಮತ್ತು ವಿವಿಧ ಸಿಮ್ ಕಾರ್ಡ್‌ಗಳನ್ನು ಆತನಿಂದ ವಶಪಡಿಸಿಕೊಳ್ಳಲಾಗಿದೆ.

ಕುಲ್ಜೀತ್ ಕುಮಾರ್​ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದೇವೆ ಎಂದು ಸಾಂಬಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ರಾಜೇಶ್ ಶರ್ಮಾ ತಿಳಿಸಿದ್ದಾರೆ.

ABOUT THE AUTHOR

...view details