ಕರ್ನಾಟಕ

karnataka

By

Published : May 28, 2020, 10:41 AM IST

Updated : May 28, 2020, 10:57 AM IST

ETV Bharat / bharat

ಐಇಡಿ ಸ್ಫೋಟಕ ಹೊತ್ತು ಪುಲ್ವಾಮಾಕ್ಕೆ ಬಂದ ಕಾರು... ಪೊಲೀಸ್-ಸೇನೆಯಿಂದ ತಪ್ಪಿತು ಭಾರಿ ಅನಾಹುತ!

ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಸೇನೆ ಮತ್ತು ಪುಲ್ವಾಮಾ ಪೊಲೀಸ್ ಪಡೆಯ ಸಮಯೋಚಿತ ಕಾರ್ಯದಿಂದ ಭಾರಿ ಅನಾಹುತವೊಂದು ತಪ್ಪಿದೆ. ಸ್ಫೋಟಕ ಹೊತ್ತು ತಂದಿದ್ದ ಕಾರನ್ನು ಸಮಯಪ್ರಜ್ಞೆಯಿಂದ ನಾಶಪಡಿಸಲಾಗಿದೆ.

Major IED blast averted
ಸ್ಫೋಟಕ ಹೊತ್ತು ತಂದಿದ್ದ ಕಾರನ್ನು ನಾಶಪಡಿಸಿದ ಭದ್ರತಾ ಸಿಬ್ಬಂದಿ

ಪುಲ್ವಾಮಾ (ಜಮ್ಮು ಮತ್ತು ಕಾಶ್ಮೀರ):ಸಮಯೋಚಿತ ಮಾಹಿತಿ ಮತ್ತು ಕಾರ್ಯಾಚರಣೆಯಿಂದ ಸಂಭವಿಸಲಿದ್ದ ಐಇಡಿ ಸ್ಫೋಟವನ್ನು ಪುಲ್ವಾಮಾ ಪೊಲೀಸ್, ಕೇಂದ್ರ ಮೀಸಲು ಪೊಲೀಸ್ ಪಡೆ ಮತ್ತು ಭಾರತೀಯ ಸೇನೆ ತಪ್ಪಿಸಿದೆ ಎಂದು ಜಮ್ಮು ಮತ್ತು ಕಾಶ್ಮೀರ್​ ಪೊಲೀಸರು ತಿಳಿಸಿದ್ದಾರೆ.

ಸ್ಫೋಟಕ ಹೊತ್ತು ತಂದಿದ್ದ ಕಾರನ್ನು ನಾಶಪಡಿಸಿದ ಭದ್ರತಾ ಸಿಬ್ಬಂದಿ

ಮೂಲಗಳ ಪ್ರಕಾರ, ಕಳೆದ ರಾತ್ರಿ ಪುಲ್ವಾಮಾ ಪೊಲೀಸರಿಗೆ ಭಯೋತ್ಪಾದಕರು ಸ್ಫೋಟಕ ತುಂಬಿದ್ದ ಕಾರನ್ನು ಚಲಾಯಿಸಿಕೊಂಡು ಹೋಗುತ್ತಿದ್ದು, ಇದನ್ನು ಯಾವುದಾದರು ಸ್ಥಳದಲ್ಲಿ ಸ್ಫೋಟಿಸುವ​ ಸಾಧ್ಯತೆ ಇದೆ ಎಂದು ಮಾಹಿತಿ ಸಿಕ್ಕಿತ್ತು. ಪೊಲೀಸರು ಭದ್ರತಾ ಪಡೆಗಳ ಸಹಾಯ ಪಡೆದುಕೊಂಡು ಸಾಧ್ಯವಿರುವ ಎಲ್ಲಾ ಸ್ಥಳಗಳನ್ನು ತಲುಪಿ ರಸ್ತೆಯಿಂದ ದೂರ, ಸುರಕ್ಷಿತ ಸ್ಥಳದಲ್ಲಿ ಅಡಗಿದ್ದರು.

ಶಂಕಿತ ವಾಹನ ಬಂದೊಡನೆ ಅದರ ಕಡೆಗೆ ಕೆಲವು ಸುತ್ತು ಗುಂಡು ಹಾರಿಸಲಾಯಿತು. ಚಾಲಕ ಕತ್ತಲೆಯಲ್ಲಿ ತಪ್ಪಿಸಿಕೊಂಡಿದ್ದಾನೆ. ಹತ್ತಿರ ಹೋಗಿ ನೋಡಿದಾಗ, ವಾಹನವು ಹಿಂಭಾಗದ ಸೀಟಿನ ಮೇಲೆ ಡ್ರಮ್‌ನಲ್ಲಿ ಭಾರಿ ಸ್ಫೋಟಕಗಳನ್ನು ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿದೆ. ಇನ್ನು ಮುಂದೆ ಹೋಗಿ ವಾಹನಕ್ಕೆ ಹೆಚ್ಚು ಸ್ಫೋಟಕ ತುಂಬುವ ಸಾಧ್ಯತೆ ಇತ್ತು ಎಂದು ಮೂಲಗಳು ತಿಳಿಸಿವೆ.

ಹತ್ತಿರದ ಮನೆಗಳಲ್ಲಿರುವ ಜನರನ್ನು ಸ್ಥಳಾಂತರಿಸಿ ರಾತ್ರಿಯಿಡೀ ವಾಹನವನ್ನು ಕಾವಲಿನಲ್ಲಿಡಲಾಗಿತ್ತು. ಬಾಂಬ್ ನಿಷ್ಕ್ರಿಯ ದಳವು ಸ್ಫೋಟಕವನ್ನು ನಾಶಪಡಿಸಿದೆ. ಈ ವಾಹನವು ಜಮ್ಮು ವಲಯದ ಕಥುವಾ ಜಿಲ್ಲೆಯ ಸ್ಕೂಟರ್‌ನ ನಂಬರ್ ಪ್ಲೇಟ್ ಹೊಂದಿದೆ ಎಂದು ಮೂಲಗಳು ತಿಳಿಸಿವೆ.

Last Updated : May 28, 2020, 10:57 AM IST

ABOUT THE AUTHOR

...view details