ಪೊಂಚ್: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಕೃಷ್ಣ ಘಾಟಿ ಸೆಕ್ಟರ್‌ನಲ್ಲಿ ಪಾಕಿಸ್ತಾನ ಪಡೆಗಳು ಶುಕ್ರವಾರ ಮುಂಜಾನೆ ಕದನ ವಿರಾಮ ಉಲ್ಲಂಘಿಸಿ ಗುಂಡಿನ ದಾಳಿ ನಡೆಸಿದ ಪರಿಣಾಮ ಓರ್ವ ಸೈನಿಕ ಹುತಾತ್ಮನಾಗಿದ್ದಾರೆ.
ಕದನ ವಿರಾಮ ಉಲ್ಲಂಘಿಸಿದ ಪಾಕ್... ಗುಂಡಿನ ದಾಳಿಗೆ ಓರ್ವ ಸೈನಿಕ ಹುತಾತ್ಮ - ಪೂಂಚ್ನಲ್ಲಿ ಸೈನಿಕ ಹುತಾತ್ಮ
ಭಾರತದ ಅಂತಾರಾಷ್ಟ್ರೀಯ ಗಡಿಗೆ ಹೊಂದಿಕೊಂಡಿರುವ ಪಾಕ್, ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಆಗಾಗ ಕದನ ವಿರಾಮ ನಿಯಮ ಉಲ್ಲಂಘಿಸಿ ದಾಳಿ ಮಾಡುತ್ತಲೆ ಇದೆ. ಇದಕ್ಕೆ ಭಾರತದ ಪಡೆ ಸಹ ಸರಿಯಾದ ಪ್ರತ್ಯುತ್ತರ ನೀಡುತ್ತಾ ಬರುತ್ತಿದೆ.
![ಕದನ ವಿರಾಮ ಉಲ್ಲಂಘಿಸಿದ ಪಾಕ್... ಗುಂಡಿನ ದಾಳಿಗೆ ಓರ್ವ ಸೈನಿಕ ಹುತಾತ್ಮ](https://etvbharatimages.akamaized.net/etvbharat/prod-images/768-512-4998037-thumbnail-3x2-pak.jpg)
ಕದನ ವಿರಾಮ
ಪಾಕಿಸ್ತಾನದ ಪಡೆಗಳು ಮುಂಜಾನೆ 2:30ರ ಸುಮಾರಿಗೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಭಾರತೀಯ ಸೇನೆ ಕೂಡ ಇದಕ್ಕೆ ಸೂಕ್ತವಾದ ಪ್ರತ್ಯುತ್ತರ ನೀಡಿದೆ. 2003ರ ಕದನ ವಿರಾಮ ನಿಯಮವನ್ನು ಗೌರವಿಸಬೇಕೆಂದು ಭಾರತ ಪದೇ ಪದೆ ಪಾಕಿಸ್ತಾನಕ್ಕೆ ಕರೆ ನೀಡುತ್ತಿದ್ದರೂ ಅದು ತನ್ನ ಮೊಂಡುತನ ಬೀಡುತ್ತಿಲ್ಲ.
ಭಾರತದ ಅಂತಾರಾಷ್ಟ್ರೀಯ ಗಡಿ ಹೊಂದಿಕೊಂಡಿರುವ ಪಾಕ್, ಗಡಿ ನಿಯಂತ್ರಣ ರೇಖೆ (ಎಲ್ಒಸಿ) ಬಳಿ ಆಗಾಗ ಕದನ ವಿರಾಮ ನಿಯಮ ಉಲ್ಲಂಘಿಸಿ ದಾಳಿ ಮಾಡುತ್ತಲೆ ಇದೆ. ಇದಕ್ಕೆ ಭಾರತದ ಪಡೆ ಸಹ ಸರಿಯಾದ ಪ್ರತ್ಯುತ್ತರ ನೀಡುತ್ತಾ ಬರುತ್ತಿದೆ.
Last Updated : Nov 8, 2019, 12:06 PM IST